ಡಾ. ಕವಿ ನಾಡೋಜ ಕಯ್ಯಾರ ಕಿಞ್ಞಣ್ಣ ರೈ ರಸ್ತೆ ಮತ್ತು ಗ್ರಂಥಾಲಯಕ್ಕೆ ತುಲು ಲಿಪಿ ನಾಮ ಫಲಕ ಹಾಕುವಂತೆ ಮನವಿ

ಜುಲಾಯಿ: ಜೈತುಳುನಾಡ್ ರಿ ಸಂಘಟನೆಯ ಕಾಸರಗೋಡು ಘಟಕದಿಂದ, ಬದಿಯಡ್ಕದಿಂದ ವಿದ್ಯಾಗಿರಿ ಹೋಗುವ ರಸ್ತೆಯಾದ ಡಾ. ಕವಿ ನಾಡೋಜ ಕಯ್ಯಾರ ಕಿಞ್ಞಣ್ಣ ರೈ ರಸ್ತೆ ಗೆ ತುಲು ಲಿಪಿ ನಾಮ ಫಲಕ ಅಳವಡಿಸಬೇಕೆಂದು Asistent Engineer PWD Dept ಬದಿಯಡ್ಕ ಇವರಿಗೆ ಮನವಿ ಸಲ್ಲಿಸಲಾಯಿತು
ಹಾಗೂ ಡಾ. ಕವಿ ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಗ್ರಂಥಾಲಯದಲ್ಲಿ ತುಲು ಲಿಪಿ ನಾಮ ಫಲಕವನ್ನು ಅಳವಡಿಸಬೇಕೆಂದು ಬದಿಯಡ್ಕ ಪಂಚಾಯತ್ ಅದಕ್ಷರಿಗೆ ಪಂಚಾಯತ್ ಸದಸ್ಯ ರಸಮ್ಮುಕದಲ್ಲಿ ಮನವಿಯನ್ನು ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ತುಳು ಲಿಪಿಯ ಬೆಳವಣಿಗೆಗೆ ಪಂಚಾಯತಿನ ಕಡೆಯಿಂದ ನಾವು ಪ್ರಯತ್ನಿಸುವುದಾಗಿ ಪಂಚಾಯತ್ ಅಧ್ಯಕ್ಷರು ಹಾಗು ಭರವಸೆಯ ಮಾತುಗಳನ್ನಾಡಿದರು. ಸಂಘಟನೆಯ ಕಾಸರಗೋಡು ಘಟಕದ ಅಧ್ಯಕ್ಷ ಹರಿಕಾಂತ್ ಕಾಸರಗೋಡು ಕಾರ್ಯದರ್ಶಿ ಕಾರ್ತಿಕ್ ಪೆರ್ಲ ಮುಖ್ಯ ಸಂಚಾಲಕ ಪ್ರವೀಶ್ ಕುಲಾಲ್ ಜತೆ ಕಾರ್ಯದರ್ಶಿ ಜಗನ್ನಾಥ ಕುಲಾಲ್ ಕಂಡತ್ತೊಡಿ ಹಾಗು ಸದಸ್ಯ ದೇವಿಪ್ರಸಾದ್ ನೆಕ್ರಾಜೆ ಉಪಸ್ಥಿತರಿದ್ದರು

READ ALSO