ಐಸಿಸಿ T-20 ಪೈನಲ್ ನಲ್ಲಿ ಕಿವೀಸ್ ಮಣಿಸಿ ವಿಶ್ವಕಪ್ ಮುಡಿಗೇರಿಸಿಕೊಂಡ ಆಸ್ಟ್ರೇಲಿಯಾ

ದುಬೈ: ಐಸಿಸಿ T-20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ನ್ಯೂಝಿಲೆಂಡ್‌ ವಿರುದ್ಧ ಆಸ್ಟ್ರೇಲಿಯಾ ತಂಡವು 8 ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸುವ ಮೂಲಕ ಚಾಂಪಿಯನ್ ಪಟ್ಟ ಮುಡಿಗೇರಿಸಿಗೊಂಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಝಿಲೆಂಡ್ ತಂಡವು ನಿಗದಿತ 20 ಓವರುಗಳಲ್ಲಿ 4 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು.

READ ALSO

ನ್ಯೂಝಿಲೆಂಡ್ ನ ಡೆರಿಲ್ ಮಿಚೆಲ್ 11(8), ಮಾರ್ಟಿನ್ ಗಪ್ಟಿಲ್ 28(35), ಕೇನ್ ವಿಲಿಯಮ್ಸನ್ 85(48), ಗ್ಲೆನ್ ಫಿಲಿಪ್ಸ್ 18(17), ಜೇಮ್ಸ್ ನೀಶಮ್ 13(7) ಟಿಮ್ ಸೀಫೆರ್ಟ್ 8(6) ದಿಟ್ಟ ಹೋರಾಟದ ಬೆಂಬಲದೊಂದಿಗೆ ಉತ್ತಮ ರನ್ ಕಲೆ ಹಾಕುವುದರೊಂದಿಗೆ ಆಸ್ಟ್ರೇಲಿಯಾ ತಂಡಕ್ಕೆ ಬೃಹತ್ ರನ್ ಗಳ ಗುರಿಯನ್ನು ನೀಡಿತು.

ನ್ಯೂಝಿಲೆಂಡ್ ನೀಡಿದ ಗುರಿಯನ್ನು ಆಸ್ಟ್ರೇಲಿಯಾ ತಂಡವು ಓವರುಗಳಲ್ಲಿ ರನ್ ಗಳಿಸಿ ವಿಕೆಟ್ ಗಳ ಜಯವನ್ನು ಸಾಧಿಸಿತು. ಆಸ್ಟ್ರೇಲಿಯಾದ‌‌ ಡೇವಿಡ್ ವಾರ್ನರ್‌ ಮತ್ತು ಮಿಷೆಲ್ ಮಾರ್ಷ್ ಆಕರ್ಷಕ ಅರ್ಧ ಶತಕದ ನೆರವಿನಿಂದ ಪಂದ್ಯದ ಗೆಲುವಿನ ಹಾದು ಸುಗಮಗೊಳಿಸಿದರು.

ಆಸ್ಟ್ರೇಲಿಯಾ ದ ಡೇವಿಡ್ ವಾರ್ನರ್‌ 53(38), ಆರೋನ್ ಫಿಂಚ್‌ 5(7), ಮಿಷೆಲ್ ಮಾರ್ಷ್ 77(50) , ಗ್ಲೆನ್ ಮ್ಯಾಕ್ಸ್‌ವೆಲ್ 28(18) ರನ್ ಗಳಿಸಿದರು. ಆಸ್ಟ್ರೇಲಿಯಾ ದ ಬೌಲಿಂಗ್ ನಲ್ಲಿ ಜೋಶ್ ಹೇಝಲ್ ವುಡ್ 3 ಮತ್ತು ಅ್ಯಡಮ್ ಝಂಪ 1 ವಿಕೆಟ್ ಪಡೆದು ಮಿಂಚಿದರು.