ಉಜಿರೆಯಲ್ಲಿ ನಡೆಯಲಿದೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ “ವಿಜಯ ಗೋಪುರ” ಲೋಕಾರ್ಪಣೆ

ಬೆಳ್ತಂಗಡಿ : ಸುಮಾರು 1000 ವರ್ಷಗಳ ಇತಿಹಾಸವಿರುವ ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವವು 03/03/2026ರಿಂದ 11/03/2026 ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಉಜಿರೆಯ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕೇಸರರಾಗಿದ್ದ ಕೀರ್ತಿಶೇಷ ಯು. ವಿಜಯರಾಘವ ಪಡ್ಡೆಟ್ನಾಯರವರ ಕನಸು ಮತ್ತು ಸಂಕಲ್ಪದಂತೆ ಭಕ್ತರ ಸಹಕಾರದಿಂದ ನೂತನವಾದ ರಾಜಗೋಪುರ ”ವಿಜಯಗೋಪುರ” ನಿರ್ಮಾಣವಾಗಿದ್ದು ಇದರ ಲೋಕಾರ್ಪಣೆ ಕಾರ್ಯಕ್ರಮವು ಇದೇ ಸಂದರ್ಭದಲ್ಲಿ ನಡೆಯಲಿದೆ. ಈಗಾಗಲೇ ಪೂರ್ವ ತಯಾರಿ ಭರದಿಂದ ಸಾಗುತಿದೆ. ಎಂದು ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕೇಸರ ಶರತ್ ಕೃಷ್ಣ ಪಡುವೆಟ್ನಾಯ ತಿಳಿಸಿದರು.

ಅವರು ಫೆ.23 ಕೃಷ್ಣಾನುಗ್ರಹ ಸಭಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ದಿನಾಂಕ ಮಾರ್ಚ್ 2ರಂದು ಬ್ರಹ್ಮಕಲಶೋತ್ಸವದ ಕಾರ್ಯಾಲಯದ ಉದ್ಘಾಟನೆ ನಡೆಯಲಿದೆ. ಅಂದು ಪರಮಪೂಜ್ಯ ಶ್ರೀ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿಯವರು ಹಂಗಾರಕಟ್ಟೆ ಇವರು ಆಶೀರ್ವಚನ ನೀಡಲಿದ್ದಾರೆ. ನಂತರ 4ನೇ ತಾರೀಕಿನಂದು ಎಡನೀರು ಮಠದ ಶ್ರೀಗಳ ಸಮ್ಮುಖದಲ್ಲಿ ಧರ್ಮಸ್ಥಳದ ಪರಮಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರು ವಿಜಯಗೋಪುರವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಅದೇ ರೀತಿ ಉಜಿರೆಯ ಕಿರಣ್ ರಾವ್ ಮತ್ತು ಕುಟುಂಬದವರು ದೇವರಿಗೆ ಸಮರ್ಪಿಸುವ ನೂತನ ಬ್ರಹ್ಮರಥದ ಸಮರ್ಪಣೆ ಮತ್ತು ಬೆನಕ ಕನ್‌ಸ್ಟ್ರಕ್ಷನ್ಸ್‌ನ ಶ್ರೀ ಗಣೇಶ್ ಗೌಡ ಮತ್ತು ಕುಟುಂಬದವರು ದೇವರಿಗೆ ಸಮರ್ಪಿಸುವ ನೂತನ ಪುಷ್ಪರಥದ ಸಮರ್ಪಣೆಯು ದಿನಾಂಕ ಮಾರ್ಚ್ 8ರಂದು ಉಡುಪಿ ಪುತ್ತಿಗೆ ಮಠದ ಉಭಯ ಶ್ರೀಗಳ ಅಮೃತಹಸ್ತದಿಂದ ನಡೆಯಲಿದೆ. ಹಾಗೆಯೇಮಾರ್ಚ್11ನೆಯ ತಾರೀಕಿನಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀಗಳು, ಉಡುಪಿಯ ಶ್ರೀ ಸೋದೆಶ್ರೀಗಳು ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ, ಶಶಿಧ‌ರ್ ಶೆಟ್ಟಿಯವರ ಕಾರ್ಯಾಧ್ಯಕ್ಷತೆಯಲ್ಲಿ ಬ್ರಹ್ಮಕಲಶೋತ್ಸವವು ವಿಜೃಂಭಣೆಯಿಂದ ನಡೆಯಲಿದೆ.

ಈ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ತಂತ್ರಿವರೇಣ್ಯರಾದ ಬ್ರಹ್ಮಶ್ರೀ ನೀಲೇಶ್ವರ ಆಲಂಬಾಡಿ ಪದ್ಮನಾಭ ತಂತ್ರಿ ಇವರ ನೇತೃತ್ವದಲ್ಲಿ ನಡೆಯಲಿದೆ.

9 ದಿನಗಳ ಕಾಲ ನಡೆಯುವ ಸಭಾಕಾರ್ಯಕ್ರಮದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಮೂಡಬಿದ್ರೆ ಡಾ|| ಸ್ವಸ್ತಿ ಶ್ರೀ ಭಟ್ಟಾರಕಚಾರು ಕೀರ್ತಿ ಶ್ರೀಗಳು, ಶ್ರೀಧಾಮ ಮಾಣಿಲದಶ್ರೀಶ್ರೀಶ್ರೀಮೋಹನದಾಸಪರಮಹಂಸಸ್ವಾ ಮೀಜಿಯವರು, ಒಡಿಯೂರು ಮಠದ ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು, ಶ್ರೀ ರಾಮಚಂದ್ರಾ ಪುರ ಮಠದ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರು, ಮಂಗಳೂರಿನ ಆದಿಚುಂಚನಗಿರಿ ಶಾಖಾಮಠದ ಶ್ರೀ ಶ್ರೀ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು, ಕನ್ಯಾಡಿಯ ಮಹಾಮಂಡಲೇಶ್ವರ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು, ವಜ್ರದೇಹಿ ಮಠದ ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಭಾಗವಹಿಸಿ ಆಶೀರ್ವಚನವನ್ನು ನೀಡಲಿದ್ದಾರೆ. ಡಾ||ಮೋಹನ ಆಳ್ವ ಅವರು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ನಾಡಿನ ಗಣ್ಯರು ಮಹನೀಯರು ಮತ್ತು ವಿವಿಧ ಸೇವಾಕರ್ತರು ವಿಶೇಷ ಅಭ್ಯಾಗತರಾಗಿ ಈ ಸಂದರ್ಭದಲ್ಲಿ ಭಾಗವಹಿಸಲಿದ್ದಾರೆ.

ಪ್ರತಿನಿತ್ಯ ಎರಡು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಶ್ರೀ ಕೃಷ್ಣಾನುಗ್ರಹ ವೇದಿಕೆ ಮತ್ತು ಪ್ರಧಾನ ವೇದಿಕೆ “ಸುದರ್ಶನ”ದಲ್ಲಿ ಈಕಾರ್ಯಕ್ರಮಗಳು ನಡೆಯಲಿವೆ. ಇದರ ಜೊತೆಗೆ ಸುನಾದ ಭಜನಾ ಕುಟೀರದಲ್ಲಿ ನಿರಂತರ ಭಜನಾ ಸೇವೆ ನಡೆಯಲಿದೆ. ವಿವಿಧ ಸಂಘ ಸಂಸ್ಥೆಯವರು ಮತ್ತು ಭಕ್ತರು ಹೊರೆಕಾಣಿಕೆಯನ್ನು ಈಸಂದರ್ಭದಲ್ಲಿ ಸಮರ್ಪಿಸಲಿದ್ದಾರೆ. ಈ ಎಲ್ಲಾ ಕಾರ್ಯಗಳು ವ್ಯವಸ್ಥಿತವಾಗಿ ನಡೆಯುವ ದೃಷ್ಟಿಯಿಂದ ಅನೇಕ ಸಮಿತಿಗಳನ್ನು ರಚಿಸಿದ್ದೇವೆ. ವಿಶೇಷವಾಗಿ ಭೋಜನ ಶಾಲೆಯ ನಿರ್ಮಾಣವಾಗಿದೆ.

ರಾಜಗೋಪುರ ನಿರ್ಮಾಣ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿಯ ಮಾರ್ಗದರ್ಶನದಲ್ಲಿ ಊರವರ ಮತ್ತು ಭಕ್ತರ ಸಂಪೂರ್ಣ ಸಹಕಾರದಿಂದ ಈ ಬ್ರಹ್ಮಕಲಶೋತ್ಸವವು ವಿಶೇಷ ರೀತಿಯಲ್ಲಿ ನಡೆಯಲಿದೆ. ಭಗವಂತನ ಸೇವೆ ಮಾಡುವುದಕ್ಕೆ ಭಕ್ತರಿಗೆ ಅವಕಾಶವಿದ್ದು, ಕಲಶಸೇವೆ, ಅನ್ನದಾನ ಸೇವೆ ಮತ್ತು ತ್ರಿಕರಣಪೂರ್ವಕವಾದ ಯಾವುದೇ ವಿಧವಾದ ಸೇವೆ ಮಾಡುವವರು ದೇವಸ್ಥಾನದ ಕಾರ್ಯಾಲಯವನ್ನು ಸಂಪರ್ಕಿಸಬಹುದು. ಈಗಾಗಲೇ ಮೋಹನ್ ಕುಮಾರ್ ನೇತೃತ್ವದಲ್ಲಿ ಅಲಂಕಾರ, ಶ್ರಮದಾನಗಳು ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿದೆ. ಮಂಜುನಾಥ್ ಕನ್ಯಾಡಿಯವರ ಸಂಚಾಲಕತ್ವದ ಬೆಂಗಳೂರು ಸಮಿತಿ ವಿಶೇಷ ರೀತಿಯ ಸೇವಾ ಕಾರ್ಯದಲ್ಲಿ ಕೈಜೋಡಿಸಲಿದೆ. ಬರುವ ಭಕ್ತರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ವಾಹನ ನಿಲುಗಡೆಗಾಗಿ ವಿವಿಧ ಕಡೆಗಳಲ್ಲಿ ಸುಮಾರು 8 ಎಕರೆ ಜಾಗ ನಿಗದಿಗೊಳಿಸಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ. ಪ್ರತಾಪ್ ಸಿಂಹ ನಾಯಕ್, ಪ್ರಧಾನ ಸಂಚಾಲಕ ಕೆ. ಮೋಹನ್ ಕುಮಾರ್, ರಾಜಗೋಪುರ ನಿರ್ಮಾಣ ಸಮಿತಿ, ಉಪಾಧ್ಯಕ್ಷ ಮೋಹನ್ ಶೆಟ್ಟಿಗಾರ್, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಸಪಲ್ಯ, ಬ್ರಹ್ಮಕಲಶೋತ್ಸವ ಕಾರ್ಯಕಾರಿ ಸಮಿತಿ ಕಾರ್ಯದರ್ಶಿ ರವೀಂದ್ರ ಶೆಟ್ಟಿ ಸುರಭಿ, ವೆಂಕಟರಮಣ ಶೆಟ್ಟಿ, ಪ್ರಚಾರ ಸಮಿತಿಯ ಭಾಸ್ಕರ ಹೆಗಡೆ,ಪ್ರಕಾಶ್ ಮುದ್ದಣ್ಣಾಯ, ಉಪಸ್ಥಿತರಿದ್ದರು.

Spread the love
  • Related Posts

    ಎಕ್ಸೆಲ್ ಪಿಯು ಕಾಲೇಜು ದ್ವಿತೀಯ ಪಿಯುಸಿ ವಿಜ್ಞಾನ & ವಾಣಿಜ್ಯ ವಿಭಾಗದಲ್ಲಿ ಶೇಕಡಾ 100 ಫಲಿತಾಂಶ

    ಗುರುವಾಯನಕೆರೆ: ಬೆಳ್ತಂಗಡಿ ತಾಲೂಕಿನ ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡುತ್ತಿರುವ ಎಕ್ಸೆಲ್ ಪಿ.ಯು ಕಾಲೇಜು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕಾಲೇಜಿನ ವಿಜ್ಞಾನ ವಿಭಾಗ ಶೇಕಡಾ 100 ಫಲಿತಾಂಶ ದಾಖಲಿಸಿದೆ. ವಿಜ್ಞಾನ ವಿಭಾಗದ ಅಕ್ಷಯ್ 595 ಅಂಕ ಗಳಿಸಿದ್ರೆ, ಶಿಲ್ಪಿತಾ ಎಚ್ ಎಸ್…

    Spread the love

    ಇಂದು PU ಫಲಿತಾಂಶ ಪ್ರಕಟ – ಅಂಕಪಟ್ಟಿಯನ್ನು ಡಿಜಿಲಾಕರ್ ಮೂಲಕ ಪಡೆಯುವ ಅವಕಾಶ

    ಬೆಂಗಳೂರು: ದಿನಾಂಕ: 09-04-2026 ರಂದು ಮಧ್ಯಾಹ್ನ 3.00 ಗಂಟೆಗೆ 2026ರ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ. https://karresults.nic.in KarnatakaOne Mobile App ಮೂಲಕವೂ ಪಡೆಯಬಹುದಾಗಿದೆ. ಅಲ್ಲದೆ, ವಿದ್ಯಾರ್ಥಿಗಳ ನೊಂದಾಯಿತ ಮೊಬೈಲ್ ಸಂಖ್ಯೆಗೆ ವಾಟ್ಸಾಪ್/ಎಸ್‌ಎಂಎಸ್ (SMS) ಮೂಲಕವೂ…

    Spread the love

    You Missed

    ಎಕ್ಸೆಲ್ ಪಿಯು ಕಾಲೇಜು ದ್ವಿತೀಯ ಪಿಯುಸಿ ವಿಜ್ಞಾನ & ವಾಣಿಜ್ಯ ವಿಭಾಗದಲ್ಲಿ ಶೇಕಡಾ 100 ಫಲಿತಾಂಶ

    • By admin
    • April 9, 2026
    • 18 views
    ಎಕ್ಸೆಲ್ ಪಿಯು ಕಾಲೇಜು ದ್ವಿತೀಯ ಪಿಯುಸಿ ವಿಜ್ಞಾನ & ವಾಣಿಜ್ಯ ವಿಭಾಗದಲ್ಲಿ ಶೇಕಡಾ 100 ಫಲಿತಾಂಶ

    ಇಂದು PU ಫಲಿತಾಂಶ ಪ್ರಕಟ – ಅಂಕಪಟ್ಟಿಯನ್ನು ಡಿಜಿಲಾಕರ್ ಮೂಲಕ ಪಡೆಯುವ ಅವಕಾಶ

    • By admin
    • April 9, 2026
    • 29 views
    ಇಂದು PU ಫಲಿತಾಂಶ ಪ್ರಕಟ – ಅಂಕಪಟ್ಟಿಯನ್ನು ಡಿಜಿಲಾಕರ್ ಮೂಲಕ ಪಡೆಯುವ ಅವಕಾಶ

    ಖಾಸಗಿ ವೈದ್ಯಕೀಯ ಕಾಲೇಜುಗಳೊಂದಿಗೆ MOU: ಕರ್ನಾಟಕ ಸರ್ಕಾರದ ಹೊಸ ಮಾರ್ಗಸೂಚಿ

    • By admin
    • April 7, 2026
    • 67 views
    ಖಾಸಗಿ ವೈದ್ಯಕೀಯ ಕಾಲೇಜುಗಳೊಂದಿಗೆ MOU: ಕರ್ನಾಟಕ ಸರ್ಕಾರದ ಹೊಸ ಮಾರ್ಗಸೂಚಿ

     ಒಂದು ಕಿಡಿ ಬೆಂಕಿ , ಒಂದು ಹಿಡಿ ಮಣ್ಣು, ಒಂದು ಕಾಡಿನ ಅಂತ್ಯ! 

    • By admin
    • April 7, 2026
    • 30 views
     ಒಂದು ಕಿಡಿ ಬೆಂಕಿ , ಒಂದು ಹಿಡಿ ಮಣ್ಣು, ಒಂದು ಕಾಡಿನ ಅಂತ್ಯ! 

    ದ್ವಿತೀಯ ಪಿಯುಸಿ ಫಲಿತಾಂಶ ಮುಂದೂಡಿಕೆ: ಚುನಾವಣಾ ನೀತಿ ಸಂಹಿತೆಯಿಂದ ವಿದ್ಯಾರ್ಥಿಗಳಿಗೆ ನಿರಾಶೆ

    • By admin
    • April 6, 2026
    • 54 views
    ದ್ವಿತೀಯ ಪಿಯುಸಿ ಫಲಿತಾಂಶ ಮುಂದೂಡಿಕೆ: ಚುನಾವಣಾ ನೀತಿ ಸಂಹಿತೆಯಿಂದ ವಿದ್ಯಾರ್ಥಿಗಳಿಗೆ ನಿರಾಶೆ

    ಡಿವೈನ್‌ಸ್ಟಾರ್ ರಿಷಬ್ ಶೆಟ್ಟಿ ಕುಟುಂಬಸ್ಥರ ಜೊತೆಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ

    • By admin
    • April 6, 2026
    • 74 views
    ಡಿವೈನ್‌ಸ್ಟಾರ್ ರಿಷಬ್ ಶೆಟ್ಟಿ ಕುಟುಂಬಸ್ಥರ ಜೊತೆಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ