ಬೆಳ್ತಂಗಡಿ: ಮನೆಬಾಗಿಲಿಗೆ ಭಿಕ್ಷಾಟನೆ ಸೋಗಿನಲ್ಲಿ ಬರುವ ಅಪರಿಚಿತ ವ್ಯಕ್ತಿಗಳ ಮೇಲೆ ಹೆಚ್ಚು ನಿಗಾವಹಿಸುವುದು ಸೂಕ್ತ. ನಾವು ಅನಾಥಾಶ್ರಮ ಮಾಡುತ್ತಿದ್ದೇವೆ, ನಾವು ಕಡಿಮೆ ದರದಲ್ಲಿ ನೋವಿನ ಎಣ್ಣೆ ನೀಡುತ್ತೇವೆ, ಸುಗಂಧ ದ್ರವ್ಯಗಳನ್ನು ಕಡಿಮೆ ಬೆಲೆಯಲ್ಲಿ ನೀಡುತ್ತೇವೆ ಎಂದು ಮನೆ ಬಾಗಿಲಿಗೆ ಬರುವ ವ್ಯಕ್ತಿಗಳ ಮೇಲೆ ಸಾರ್ವಜನಿಕರು ಒಂದು ಕಣ್ಣಿಡಬೇಕಾದ ಅನಿವಾರ್ಯತೆ ಇದೆ.ಅಂದಹಾಗೆ ಈ ವಿಷಯವನ್ನು ಯಾಕೆ ತಮ್ಮ ಮುಂದೆ ಇಡುತ್ತಿದ್ದೇವೆ ಎಂದರೇ ಎಲ್ಲೋ ದೂರದ ಊರಿನಲ್ಲಿ ಜನವಸತಿ ಇಲ್ಲದ ಪ್ರದೇಶದಲ್ಲಿ ಇಂತಹ ಅಪರಾಧ ಸುದ್ದಿಗಳನ್ನು ನಾವು ಕೇಳುತ್ತಾ ಬಂದಿದ್ದೇವೆ ಆದರೆ ಇತ್ತೀಚಿನ ದಿನಗಳಲ್ಲಿ ತಾಲೂಕಿನ ಹೃದಯ ಭಾಗ ಉಜಿರೆಯ ಸನಿಹದಲ್ಲೇ ಇರುವ ಮನೆಯೊಂದಕ್ಕೆ ಅನಾಥಾಶ್ರಮಕ್ಕೆ ಸಹಾಯಹಸ್ತ ಚಾಚುವ ನೆಪದಲ್ಲಿ ಬಂದು ಚಾಕು ತೋರಿಸಿ ವೃದ್ದೆಯೊಬ್ಬರ ಕತ್ತಿನಲ್ಲಿದ್ದು ಮಾಂಗಲ್ಯ ಸರ ಕಸಿದು ಪರಾರಿಯಾದ ಘಟನೆ ಉಜಿರೆಯ ಹಳೆಪೇಟೆಯಲ್ಲಿ ನಡೆದಿದೆ.
ಘಟನೆಯ ವಿವರ : ಅಂದು 21/04/2023ನೇ ಶುಕ್ರವಾರ ಬೆಳಿಗ್ಗೆ ಸುಮಾರು 11.30ರ ವೇಳೆಗೆ ಅಪರಿಚಿತ ವ್ಯಕ್ತಿಯೊಬ್ಬ ಉಜಿರೆಯ ಹಳೇಪೇಟೆಯಲ್ಲಿರುವ ಜೈನ್ ಕಂಪೌಂಡ್ ನಲ್ಲಿರುವ ಮನೆಯೊಂದಕ್ಕೆ ಬಂದು ನಾವು ಅನಾಥಾಶ್ರಮ ನಡೆಸುತ್ತಿದ್ದೇವೆ ನಮಗೆ ಸಹಕಾರ ನೀಡಿ ವಸ್ತ್ರ ಹಾಗೂ ನಗದು ರೂಪದಲ್ಲಿ ಸಹಕರಿಸಿ ಎಂದು ಮನೆಯೋಡತಿಯಲ್ಲಿ ಕೇಳಿಕೊಳ್ಳುತ್ತಾನೆ ಅಷ್ಟರಲ್ಲೇ ಮನೆಗೆ ಬಂದವರನ್ನು ಬರಿಗೈಯಲ್ಲಿ ಕಳುಹಿಸಿ ಬಾರದೆಂದು ಮಾತೃಹೃದಯೀ(71ವಯಸ್ಸಿನ ವೃದ್ಧೆ) ಮನಸ್ಸು ಕರಗಿಸಿ 2ಸಾರಿ ಹಾಗೂ ನಗದನ್ನು ನೀಡುತ್ತಾರೆ ಅಷ್ಟರಲ್ಲೇ ಅಪರಿಚಿತ ವ್ಯಕ್ತಿ ವೃದ್ದೆಯ ಬಳಿ ಮಾತನಾಡುತ್ತಾ ಮನೆಯಲ್ಲಿ ಯಾರೆಲ್ಲ ಇದ್ದೀರಿ ಎಂಬಿತ್ಯಾದಿ ಮಾಹಿತಿ ಕಲೆಹಾಕುತ್ತಾನೆ ಆದರೆ ಆತನ ನೀಚ ಬುದ್ಧಿಯನ್ನರಿಯದ ವೃದ್ಧೆಯು ಮಗ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದು ಸಂಜೆ ವೇಳೆಗೆ ಮನೆಗೆ ಬರುತ್ತಾನೆ ಮನೆಯ ಇತರೇ ಸದಸ್ಯರು ಹೊರಗಡೆ ಹೋಗಿದ್ದು ತಾನೊಬ್ಬಳೇ ಇರುವ ಬಗ್ಗೆ ತಿಳಿಸುತ್ತಾರೆ. ಇಷ್ಟು ಮಾಹಿತಿಯನ್ನು ಪಡೆದ ಅಪರಿಚಿತ ವ್ಯಕ್ತಿ ಅಲ್ಲಿಂದ ವಾಪಾಸಾಗಿದ್ದಾನೆ. ತದನಂತರ ಮದ್ಯಾಹ್ನ ಬಿರುಬಿಸಿಲಿನ ಸಮಯ ಸುಮಾರು 2ಗಂಟೆಯ ವೇಳೆಯಲ್ಲಿ ಮತ್ತೆ ಆ ಮನೆಗೆ ಚಾಕು ಸಹಿತ ಎಂಟ್ರಿಕೊಟ್ಟವನೇ ಮನೆಯ ಬಾಗಿಲು ತೆರೆದು ವೃದ್ಧೆಯ ಕತ್ತಿಗೆ ಚಾಕು ಇಟ್ಟು ನಗ ಹಾಗೂ ನಗದು ನೀಡುವಂತೆ ಬೆದರಿಕೆ ಹಾಕುತ್ತಾನೆ ಅಷ್ಟರಲ್ಲೇ ಆತನ ಕಣ್ಣಿಗೆ ಬಿದ್ದದ್ದು ಆ ಅಜ್ಜಿಯ ಕುತ್ತಿಗೆಯಲ್ಲಿದ 3ಪವನ್ ತೂಕದ ಮಾಂಗಲ್ಯ ಸರ ಹಾಗೂ ಕಿವಿಯಲ್ಲಿದ್ದ ಕಿವಿಯೊಲೆ. ಕ್ಷಣ ಮಾತ್ರದಲ್ಲಿಯೇ ವೃದ್ದೆ ಯಲ್ಲಿದ್ದ ಚಿನ್ನಾಭರಣಗಳನ್ನು ಕಸಿದು ಪರಾರಿಯಾಗಿದ್ದಾನೆ.
ಇದೀಗ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ. ಇದೀಗ ತಾಲೂಕಿನ ಬೇರೆ ಬೇರೆ ಗ್ರಾಮಗಳಲ್ಲಿಯೂ ಇಂತಹದ್ದೇ ತಂಡ ಬಂದಿರುವ ಬಗ್ಗೆ ಸಾರ್ವಜನಿಕರು ಗುಮಾನಿ ವ್ಯಕ್ತಪಡಿಸುತ್ತಿದ್ದಾರೆ. ಏನೇ ಆಗಲಿ ಇಂತಹ ಅಪರಿಚಿತ ವ್ಯಕ್ತಿಗಳು ಮನೆಗೆ ಬಂದಾಗ ಜಾನತಣದಿಂದ ವ್ಯವಹರಿಸುವುದು ಉತ್ತಮ.
ಅಂತಹ ಸಂದೇಹಗಳು ಬಂದರೇ ತಾಲೂಕಿನ ಹತ್ತಿರದ ಪೋಲೀಸ್ ಠಾಣೆಗೆ ಮಾಹಿತಿ ನೀಡಿ
ಬೆಳ್ತಂಗಡಿ ಪೋಲೀಸ್ ಠಾಣೆ ಸಂಪರ್ಕ: 08256232093
ಧರ್ಮಸ್ಥಳ ಪೋಲೀಸ್ ಠಾಣೆ ಸಂಪರ್ಕ 08256277253
ಪುಂಜಾಲಕಟ್ಟೆ ಪೋಲೀಸ್ ಠಾಣೆ ಸಂಪರ್ಕ 08022943346
ವೇಣೂರು ಪೋಲೀಸ್ ಠಾಣೆ ಸಂಪರ್ಕ 08256286232