ಉಜಿರೆ ಜನಾರ್ದನ‌ ದೇವಸ್ಥಾನದ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯರವರು ಇನ್ನಿಲ್ಲ

ಬೆಳ್ತಂಗಡಿ: ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ(78) ಅವರು ಫೆ.19 ರಂದು ಮಧ್ಯಾಹ್ನ ವಯೋಸಹಜವಾಗಿ ತಮ್ಮ ಉಜಿರೆ ಪಡುವೆಟ್ಟು ಮನೆಯಲ್ಲಿ ದೈವಾಧೀನರಾದರು.

ಭಾಗೀರಥಿಯಮ್ಮ ಮತ್ತು ರಾಮಕೃಷ್ಣ ಪಡ್ವೆಟ್ನಾಯ ದಂಪತಿಗಳ ಪುತ್ರರಾದ ಉಜಿರೆಯ ಪಡುವೆಟ್ಟು ಮನೆಯಲ್ಲಿ 1945 ಅ.16 ರಂದು ಜನಿಸಿದ ವಿಜಯರಾಘವ ಪಡ್ವೆಟ್ನಾಯರು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ ಆಡಳಿತ ಮೊಕ್ತೇಸರರು ಹಾಗೂ ಮೂಡಣ ಹದಿನಾರು ಗ್ರಾಮಗಳ ಗ್ರಾಮಣಿತ್ವ ಹೊಂದಿದ ಅರಮನೆತ್ತಾಯ ಕುಲದಲ್ಲಿ ಜನಿಸಿದವರು.

ಉಜಿರೆಯ ಜನಾರ್ದನ ಶಾಲೆ ಮತ್ತು ಕರ್ನಾಟಕ ವಿದ್ಯಾಲಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪಡೆದರು. ಪದವೀಧರರಾದರೂ ಹಿರಿಯರ ಕೃಷಿ ಭೂಮಿಯನ್ನೇ ಕರ್ಮಕ್ಷೇತ್ರವನ್ನಾಗಿ ಕೃಷಿಯಲ್ಲೇ ತಮ್ಮ ಆಸಕ್ತಿ; ಅಭಿರುಚಿಯನ್ನು ಬೆಳೆಸಿಕೊಂಡು ಆದರ್ಶ ಕೃಷಿಕರೆನಿಸಿಕೊಂಡರು.

ಉಜಿರೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಸ್ಥಾಪಿಸಿ ಅದರ ಅಧ್ಯಕ್ಷರಾಗಿ ನಿರ್ದೇಶಕರಾಗಿ, ಮಾರ್ಗದರ್ಶಕರಾಗಿ ಸಂಘದ ಅಭ್ಯುದಯಕ್ಕೆ ಕಾರಣರಾಗಿದ್ದಾರೆ. ಉಜಿರೆ ಲಯನ್ಸ್ ಕ್ಲಬ್ಬಿನ ಸ್ಥಾಪಕ ಸದಸ್ಯರಾಗಿ, ಅಧ್ಯಕ್ಷರಾಗಿ ಸಮಾಜಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಉಜಿರೆ ಬ್ರಾಹ್ಮಣ ಸಂಘಟನೆಗಾಗಿ ಶ್ರೀ ಜನಾರ್ದನ ಸ್ವಾಮಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸ್ಥಾಪಿಸಿದ್ದರು.

ಬೆಳ್ತಂಗಡಿ ತಾಲೂಕು ಬ್ರಾಹ್ಮಣ ಮಹಾಸಭಾ ಗೌರವಾಧ್ಯಕ್ಷರಾಗಿ, ತುಳು ಶಿವಳ್ಳಿ ಸ‘ಲಭಾ (ಬೆಳ್ತಂಗಡಿ)ದ ಅಧ್ಯಕ್ಷರಾಗಿ 8 ವಲಯಗಳನ್ನು ರಚಿಸಿ ಸಮಾಜ ಸಂಘಟನೆ ಕಾರ್ಯ ನಡೆಸಿದ್ದಾರೆ.

ಬೆಳ್ತಂಗಡಿ ತಾಲೂಕು ವಿಶ್ವ ಹಿಂದೂ ಪರಿಷತ್‌ನ ಅಧ್ಯಕ್ಷರಾಗಿ, ಉಜಿರೆ ವರ್ತಕ ಸಂಘದ ಸ್ಥಾಪಕಧ್ಯಕ್ಷರಾಗಿ, ತಾಲೂಕಿನಾದ್ಯಂತ ನಡೆಯುತ್ತಿರುವ ಹಿಂದೂ ಸಮಾಜೋತ್ಸವಗಳಲ್ಲಿ ಮಾರ್ಗದರ್ಶನ ನೀಡುತ್ತ ಬಂದಿದ್ದಾರೆ.

ಉಜಿರೆಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಹಾಗೂ ಶ್ರೀ ಶಾರದಾ ಪೂಜಾ ಸಮಿತಿ ಗೌರವಾಧ್ಯಕ್ಷರಾಗಿ, ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆಗ್ನೇಯ ಪಾರ್ಶ್ವದಲ್ಲಿ ಮಧ್ವಮಂಟಪ ರಚಿಸಿ ಅಲ್ಲಿ ಶ್ರೀ ಮಧ್ವಾಚಾರ್ಯರ ಪ್ರತಿಮೆಯನ್ನು ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಗಳವರ ಮೂಲಕ ಪ್ರತಿಷಾಪಿಸಿ, ಆಚಾರ್ಯರು ಕುಳಿತು ಗ್ರಂಥ ಬರೆದ ಶಿಲೆಯನ್ನು ಸಂರಕ್ಷಿಸಿರುವುದು ಪ್ರತೀತಿ.

ಯಕ್ಷಗಾನ ಪ್ರದರ್ಶನ ಹಾಗೂ ತಾಳಮದ್ದಳೆ ಸಪ್ತಾಹಗಳನ್ನು ನಡೆಸಿ ಕಲಾಭಿಮಾನಿಗಳ ಮನತಣಿಸಿದ್ದಾರೆ. ಅದಲ್ಲದೆ ತಾಲೂಕಿನ ಅದೆಷ್ಟೋ ದೇವಸ್ಥಾನಗಳ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವಕ್ಕೆ ಕಾರಣೀಕರ್ತರು. ಅವರ ನಿಧನಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಕಂಬನಿ ಮಿಡಿದಿದ್ದಾರೆ. ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯರಾದ ಕೆ.ಪ್ರತಾಪಸಿಂಹ ನಾಯಕ್, ಕೆ.ಹರೀಶ್ ಕುಮಾರ್, ಮಾಜಿ ಶಾಸಕ ಕೆ.ವಸಂತ ಬಂಗೇರ ಸಹಿತ ಅನೇಕರು ಕಂಬನಿ ಸಂತಾಪ ಸೂಚಿಸಿದ್ದಾರೆ.

Spread the love
  • Related Posts

    ಕುವೆಂಪು ವಿವಿಯಲ್ಲಿ ತಡವಾಗಿ ಪ್ರಕಟವಾಗುವ ಫಲಿತಾಂಶ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

    ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯಕ್ಕೆ ಒಳಪಟ್ಟ ಕಾಲೇಜಿನಲ್ಲಿ ಫಲಿತಾಂಶ ತಡವಾಗಿ ಪ್ರಕಟಿಸುವುದರಿಂದ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗುತ್ತಿದೆ. ವಿಶ್ವವಿದ್ಯಾಲಯದ ಫಲಿತಾಂಶಗಳು ತಡವಾಗಿ ಬರುತ್ತಿರುವುದರಿಂದ ಹೆಚ್ಚಿನ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಬೇರೆ ವಿಶ್ವವಿದ್ಯಾಲಯದಲ್ಲಿ ತಮ್ಮ ವಿದ್ಯಾಭ್ಯಾಸ ನಡೆಸಲು ಸಾಧ್ಯವಾಗುತ್ತಿಲ್ಲ ಹಾಗೂ ಮೊದಲ ಸೆಮಿಸ್ಟರ್ ನಿಂದ ಆರನೇ…

    Spread the love

    ಗ್ರಾಮಾಭಿವೃದ್ಧಿ ಮೂಲಕ ಕಲ್ಯಾಣ ಕರ್ನಾಟಕದಲ್ಲೂ ರೈತ ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಅಭಿವೃದ್ಧಿ ಪಡಿಸುವ ಹೆಗ್ಗಡೆಯವರ ಕಾರ್ಯ ಶ್ಲಾಘನೀಯ: ನ್ಯಾಯಾಧೀಶ ಸುರೇಶ್ ಅಪ್ಪಣ್ಣ ಸವದಿ

    ದೇವದುರ್ಗ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ದೇವದುರ್ಗ ತಾಲೂಕಿನ ವತಿಯಿಂದ ಮುರಿಗೆಪ್ಪ ಖೇಣೇದ್ ಫಂಕ್ಷನ್ ಹಾಲ್ ನಲ್ಲಿ ದಿನಾಂಕ 28/09/2024 ಶನಿವಾರದಂದು ತಾಲೂಕು ಮಟ್ಟದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳ ಸಮಾವೇಶ ಕಾರ್ಯಕ್ರಮವನ್ನು…

    Spread the love

    You Missed

    ಕುವೆಂಪು ವಿವಿಯಲ್ಲಿ ತಡವಾಗಿ ಪ್ರಕಟವಾಗುವ ಫಲಿತಾಂಶ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

    • By admin
    • October 7, 2024
    • 18 views
    ಕುವೆಂಪು ವಿವಿಯಲ್ಲಿ ತಡವಾಗಿ ಪ್ರಕಟವಾಗುವ ಫಲಿತಾಂಶ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

    ನಾಗರಿಕ ಅಭಿನಂದನಾ ಸಮಿತಿಯಿಂದ ಯೋಧ ಮಂಜುನಾಥ ಹಾಗೂ ಶಿಕ್ಷಕ ವಿ.ಕೆ ವಿಟ್ಲ ಅವರಿಗೆ ನಾಗರಿಕ ಸನ್ಮಾನ

    • By admin
    • October 2, 2024
    • 28 views
    ನಾಗರಿಕ ಅಭಿನಂದನಾ ಸಮಿತಿಯಿಂದ ಯೋಧ ಮಂಜುನಾಥ ಹಾಗೂ ಶಿಕ್ಷಕ ವಿ.ಕೆ ವಿಟ್ಲ ಅವರಿಗೆ ನಾಗರಿಕ ಸನ್ಮಾನ

    ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡ ಸೇವಾ ಟ್ರಸ್ಟ್(ರಿ) ವತಿಯಿಂದ ನಿಡ್ಲೆ ಗ್ರಾಮದಲ್ಲಿ ಸಿಡಿಲು ಬಡಿದು ಮನೆ ಹಾನಿಯಾದ ಕುಟುಂಬಕ್ಕೆ ಆರ್ಥಿಕ ನೆರವು

    • By admin
    • October 1, 2024
    • 404 views
    ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡ ಸೇವಾ ಟ್ರಸ್ಟ್(ರಿ) ವತಿಯಿಂದ ನಿಡ್ಲೆ ಗ್ರಾಮದಲ್ಲಿ ಸಿಡಿಲು ಬಡಿದು ಮನೆ ಹಾನಿಯಾದ ಕುಟುಂಬಕ್ಕೆ ಆರ್ಥಿಕ ನೆರವು

    ಗ್ರಾಮಾಭಿವೃದ್ಧಿ ಮೂಲಕ ಕಲ್ಯಾಣ ಕರ್ನಾಟಕದಲ್ಲೂ ರೈತ ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಅಭಿವೃದ್ಧಿ ಪಡಿಸುವ ಹೆಗ್ಗಡೆಯವರ ಕಾರ್ಯ ಶ್ಲಾಘನೀಯ: ನ್ಯಾಯಾಧೀಶ ಸುರೇಶ್ ಅಪ್ಪಣ್ಣ ಸವದಿ

    • By admin
    • September 29, 2024
    • 38 views
    ಗ್ರಾಮಾಭಿವೃದ್ಧಿ ಮೂಲಕ ಕಲ್ಯಾಣ ಕರ್ನಾಟಕದಲ್ಲೂ ರೈತ ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಅಭಿವೃದ್ಧಿ ಪಡಿಸುವ ಹೆಗ್ಗಡೆಯವರ ಕಾರ್ಯ ಶ್ಲಾಘನೀಯ: ನ್ಯಾಯಾಧೀಶ ಸುರೇಶ್ ಅಪ್ಪಣ್ಣ ಸವದಿ

    ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ನ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

    • By admin
    • September 24, 2024
    • 121 views
    ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ನ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

    ಮುಡಾ ಹಗರಣದಲ್ಲಿ ಸಿ.ಎಂ ವಿರುದ್ಧ ತನಿಖೆಗೆ ಅಸ್ತು ರಾಜ್ಯಪಾಲರ ತನಿಖೆ ಆದೇಶ ಎತ್ತಿಹಿಡಿದ ಹೈಕೋರ್ಟ್

    • By admin
    • September 24, 2024
    • 93 views
    ಮುಡಾ ಹಗರಣದಲ್ಲಿ ಸಿ.ಎಂ ವಿರುದ್ಧ ತನಿಖೆಗೆ ಅಸ್ತು ರಾಜ್ಯಪಾಲರ ತನಿಖೆ ಆದೇಶ ಎತ್ತಿಹಿಡಿದ ಹೈಕೋರ್ಟ್