ಮಂಗಳೂರು: ಉಳ್ಳಾಲ ಪೊಲೀಸ್ ಠಾಣೆಯ ನೂತನ ಇನ್ಸ್ ಪೆಕ್ಟರ್ ಆಗಿ ಸಂದೀಪ್ ಜಿ.ಎಸ್ ಅಧಿಕಾರ ಸ್ವೀಕರಿಸಿದರು. ಈ ಹಿಂದಿನ ಆಗಿದ್ದ ಇನ್ಸ್ ಪೆಕ್ಟರ್ ಅನಿಲ್ ಕುಮಾರ್ ಅವರು ವರ್ಗಾವಣೆ ಬಳಿಕ ಉಳ್ಳಾಲ ಠಾಣೆಯ ಇನ್ಸ್ ಪೆಕ್ಟರ್ ಹುದ್ದೆ ಕಳೆದ ಒಂದು ತಿಂಗಳಿನಿಂದ ಖಾಲಿಯಾಗಿತ್ತು.
ಉಳ್ಳಾಲ ಠಾಣೆಯ ನೂತನ ಇನ್ಸ್ ಪೆಕ್ಟರ್ ಆಗಿ ಕರಾವಳಿ ಕಾವಲು ಪಡೆ ಗಂಗೊಳ್ಳಿ ವಲಯದಲ್ಲಿ ಒಂದು ವರ್ಷದಿಂದ ಇನ್ಸ್ ಪೆಕ್ಟರ್ ಆಗಿ ಕಾರ್ಯಚರಿಸುತ್ತಿದ್ದ ಸಂದೀಪ್ ಜಿ.ಎಸ್ ಇಂದು ಅಧಿಕಾರ ಸ್ವೀಕರಿಸಿದರು.