ನವದೆಹಲಿ: ಇಂದು 6ನೇ ಅಂತಾರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಮಹಾಮಾರಿ ಕೊರೋನ ವೈರಸ್ ಬಿಕ್ಕಟ್ಟಿನ ಸಮಯದಲ್ಲಿ ಯೋಗದ ಪ್ರಾಮುಖ್ಯತೆ ಹೆಚ್ಚಿದೆ ಎಂದು ತಿಳಿಸಿದರು.
ಯೋಗ ದಿನಾಚರಣೆ ಅಂಗವಾಗಿ ಇಂದು ‘ದೇಶದ ಜನತೆಗೆ ಸಂದೇಶ ನೀಡಿದ ಮೋದಿ, ಕುಟುಂಬದ ಜೊತೆ ಯೋಗ ಈ ವರ್ಷದ ಥೀಮ್ ಆಗಿದೆ. ಮನೆಯಲ್ಲಿಯೇ ಯೋಗ ಕುಟುಂಬದ ಜೊತೆ ಯೋಗ, ನಮ್ಮ ಆರೋಗ್ಯಕ್ಕೆ ಯೋಗವೇ ಮದ್ದು, ಮಾನವೀಯತೇ ಮೌಲ್ಯಕ್ಕೆ ಯೋಗ ಮಂತ್ರ, ಮಾನಸಿಕ ಆರೋಗ್ಯಕ್ಕೆ ಯೋಗವೇ ಮದ್ದು, ಯೋಗ ನಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಯೋಗದಿಂದ ಮಾನಸಿಕ ಶಾಂತಿ ಸಿಗುತ್ತದೆ. ಅಲ್ಲದೇ, ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ರೋಗನಿರೋಧಕ ಶಕ್ತಿ ಜಾಸ್ತಿಯಾದರೆ ಕೊರೋನಾ ನಿಯಂತ್ರಣಕ್ಕೆ ಬರುತ್ತದೆ. ಯೋಗ ನಮ್ಮ ಜೀವನದಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕೇವಲ ದೈಹಿಕ ಶಕ್ತಿ ಮಾತ್ರವಲ್ಲ, ಮಾನಸಿಕ ಸಮತೋಲನ ಕಾಪಾಡುತ್ತದೆ. ಎಲ್ಲರೂ ಯೋಗ ಮಾಡಿ ಎಂದು ಸಲಹೆ ನೀಡಿದ್ದಾರೆ.
ಈ ಬಾರಿ ಕೊರೋನಾ ಕಾರಣದಿಂದ ಮನೆಯಲ್ಲೇ ಯೋಗ ಮಾಡಲು ಸಲಹೆ ನೀಡಲಾಗಿದ್ದು, ಅನೇಕ ಕಡೆ ಅಂತರ ಕಾಯ್ದುಕೊಂಡು ಯೋಗ ಮಾಡುವ ಮೂಲಕ ಯೋಗ ದಿನಾಚರಣೆ ಮಾಡಲಾಗಿದೆ.