ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 8ಸಾವಿರದ ಸನಿಹದಲ್ಲಿ! ಸಾವಿನ ಸಂಖ್ಯೆಯಲ್ಲೂ ಏರಿಕೆ! ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ!

ಬೆಂಗಳೂರು: ಕರ್ನಾಟಕದಾದ್ಯಂತ ಕೊರೋನಾ ಅಟ್ಟಹಾಸ ಮಿತಿಮೀರುತಿದ್ದು ಸಾವಿನ ಸಂಖ್ಯೆಯು ದಿನೇ ದಿನೇ ಏರಿಕೆಯಾಗುತ್ತಿದೆ. 8ಸಾವಿರದ ಗಡಿ ತಲುಪಿದ ಮಹಾಮಾರಿ ಮತ್ತೊಮ್ಮೆ ರಾಜ್ಯದ ಜನತೆಯನ್ನು ಎಚ್ಚರಿಸುತ್ತಿದೆ.
ಗಣಿನಾಡು ಬಳ್ಳಾರಿ, ಕಲಬುರ್ಗಿ, ಕರಾವಳಿಯ ದಕ್ಷಿಣಕನ್ನಡ, ರಾಮನಗರದಲ್ಲೂ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು ಜನತೆ ಎಚ್ಚರ ತಪ್ಪಿದರೆ ಬಾರಿ ಆತಂಕ ಸ್ಥಿತಿ ನಿರ್ಮಾಣವಾದರು ಅಚ್ಚರಿಯಿಲ್ಲ. ಸಾರ್ವಜನಿಕ ಪ್ರದೇಶಗಳಲ್ಲಿ ಒಡಾಡುವಾಗ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವ ಅವಶ್ಯಕತೆಯಿದೆ.

ಕರ್ನಾಟಕದಲ್ಲಿ ಇಂದು210ಸೋಂಕಿತರು ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 7944ಕ್ಕೆ ಏರಿಕೆಯಾಗಿದೆ

READ ALSO

210 ಸೋಂಕಿತರ ಪೈಕಿ 79 ಮಂದಿ ವಿದೇಶ ಹಾಗೂ ಹೊರ ರಾಜ್ಯದಿಂದ ಪ್ರಯಾಣಬೆಳೆಸಿದವರಾಗಿದ್ದಾರೆ.

ಕೊರೋನಾ ಮಹಾಮಾರಿ ವೈರಸ್ ಅಟ್ಟಹಾಸಕ್ಕೆ 12ಮಂದಿ ಬಲಿಯಾಗಿದ್ದು ಸಾವಿನ ಸಂಖ್ಯೆ114ಕ್ಕೆ ಏರಿಕೆಯಾಗಿದೆ

ಜಿಲ್ಲಾವಾರು ಸೋಂಕಿತರ ವಿವರಗಳು:

ಬಳ್ಳಾರಿ 48
ಕಲಬುರ್ಗಿ 48
ದಕ್ಷಿಣಕನ್ನಡ 23
ರಾಮನಗರ 21
ಬೆಂಗಳೂರು 17
ಯಾದಗಿರಿ 08
ಮಂಡ್ಯ 07
ಬೀದರ್ 06
ಗದಗ 05
ರಾಯಚೂರು 04
ಧಾರವಾಡ 04
ಹಾಸನ 04
ದಾವಣಗೆರೆ 03
ಚಿಕ್ಕಮಗಳೂರು 03
ವಿಜಯಪುರ 02
ಉತ್ತರಕನ್ನಡ 02
ಮೈಸೂರು 02
ಬಾಗಲಕೋಟೆ 01
ಕೊಪ್ಪಳ 01
ಶಿವಮೊಗ್ಗ 01