ಕೃಷ್ಣ ನಗರಿಯಲ್ಲಿ ಮುಂಬೈ ವೈರಸ್ ರಣಕೇಕೆ!! ರಾಜ್ಯದಲ್ಲಿಂದು 187ಸೋಂಕಿತರು ಪತ್ತೆ!

ಬೆಂಗಳೂರು:- ಕೊರೋನಾ ಮಹಾಮಾರಿ ವೈರಸ್ ರಾಜ್ಯಾದ್ಯಂತ16 ಜಿಲ್ಲೆಯಲ್ಲಿ ತನ್ನ ಆರ್ಭಟವನ್ನು ಮುಂದುವರೆಸಿದ್ದು ಕೃಷ್ಣ ನಗರಿ ಉಡುಪಿಯಲ್ಲಿಂದು ಕಿಲ್ಲರ್ ಕೊರೋನಾದ ಹಾವಳಿಯಿಂದ ಕರಾವಳಿ ಜನತೆಯನ್ನು ಬೆಚ್ಚಿಬೀಳಿಸುವಂತೆ ಮಾಡಿದೆ. ಉಡುಪಿಯಲ್ಲಿಂದು ಒಂದೇ ದಿನ ಬರೋಬ್ಬರಿ 73 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡರೆ, ದಕ್ಷಿಣ ಕನ್ನಡದಲ್ಲಿ 4 ಮಂದಿಯನ್ನು ಸೋಂಕು ಗುರಿಯಾಗಿಸಿದೆ. ಬೆಂಗಳೂರು, ಕಲಬುರ್ಗಿ, ಹಾಸನ,ಮಂಡ್ಯದಲ್ಲೂ ವೈರಸ್ ಆರ್ಭಟ ಮುಂದುವರಿದಿದೆ.

ಕರ್ನಾಟಕದಲ್ಲಿ ಇಂದು187ಸೋಂಕಿತರು ಪತ್ತೆಯಾಗಿದ್ದು ಇದುವರೆಗೆ ಒಟ್ಟು ಸೋಂಕಿತರ ಸಂಖ್ಯೆ 3408ಕ್ಕೆ ಏರಿಕೆಯಾಗಿದೆ.

READ ALSO

ಇಂದು 187ರ ಪೈಕಿ 120ಸೋಂಕಿತರು ವಿದೇಶ ಹಾಗೂ ಅಂತರರಾಜ್ಯದಿಂದ ಬಂದವರಾಗಿದ್ದಾರೆ.

ಕೊರೋನಾ ಮರಣಮೃದಂಗಕ್ಕೆ ಒರ್ವ ಬಲಿಯಾಗಿದ್ದು ಸಾವಿನ ಸಂಖ್ಯೆ 52ಕ್ಕೆ ಏರಿಕೆಯಾಗಿದೆ.

ಜಿಲ್ಲಾವಾರು ಸೋಂಕಿತರ ವಿವರಗಳು:-

ಉಡುಪಿ 73
ಬೆಂಗಳೂರು 28
ಕಲಬುರ್ಗಿ 24
ಹಾಸನ 16
ಮಂಡ್ಯ 15
ಶಿವಮೊಗ್ಗ 09
ಚಿಕ್ಕಬಳ್ಳಾಪುರ 05
ದಕ್ಷಿಣಕನ್ನಡ 04
ಬಳ್ಳಾರಿ 03
ಬೀದರ್ 02
ಬಾಗಲಕೋಟೆ 02
ಧಾರವಾಡ 02
ವಿಜಯಪುರ 01
ಕೋಲಾರ 01
ರಾಮನಗರ 01
ಹಾವೇರಿ 01