ಮಂಗಳೂರು ಪಂಪ್ ವೆಲ್ ಫ್ಲೈಓವರ್ ಗೆ ‘ವೀರ ಸಾವರ್ಕರ್ ಮೇಲುಸೇತುವೆ’ ಎಂದು ನಾಮಕರಣ!!! ಕೆಲವೇ ಗಂಟೆಯ ವೇಳೆಯಲ್ಲಿ ಬ್ಯಾನರ್ ಮಾಯ!!!

ಮಂಗಳೂರು: ಬೆಂಗಳೂರಿನ ಯಲಹಂಕ ಡೈರಿ ವೃತ್ತದ ನೂತನ ಮೇಲ್ಸೇತುವೆಗೆ ಸಾವರ್ಕರ್ ಹೆಸರು ನಾಮಕರಣ ಮಾಡುವುದಕ್ಕೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಮಂಗಳೂರಿನ ಪಂಪ್ವೆಲ್ ಮೇಲುಸೇತುವೆಗೆ ‘ ವೀರ ಸಾವರ್ಕರ್ ಮೇಲುಸೇತುವೆ ” ಎಂಬ ಹೆಸರಿನ ಬ್ಯಾನರ್ ರನ್ನು ಆಳವಡಿಸಿ ನಾಮಕರಣ ಮಾಡಿದ್ದಾರೆ. ಬ್ಯಾನರ್ ಆಳವಡಿಸಿದ 1ಗಂಟೆಯಲ್ಲೇ ಬ್ಯಾನರ್ ನಾಪತ್ತೆಯಾಗಿದೆ.

ಪಂಪ್ ವೆಲ್ ಸೇತುವೆಗೆ ಸಡನ್ ಆಗಿ ಬ್ಯಾನರ್ ಮೂಲಕ ಯಾರೋ ವೀರ ಸಾವರ್ಕರ್ ಹೆಸರನ್ನಿರುವ ಬ್ಯಾನರ್ ಅಂಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದ್ದು ಇದೀಗ ಚರ್ಚೆಗೆ ಕಾರಣವಾಗಿದೆ.
ಆದರೆ ಸಂಜೆ 8 ಗಂಟೆಯ ವೇಳೆಗೆ ಇದ್ದ ಬ್ಯಾನರ್ 9ಗಂಟೆಯ ವೇಳೆಗೆ ಮಾಯವಾಗಿದೆ. ಏಕಾಏಕಿ ಪ್ಲೆಕ್ಸ್ ಬ್ಯಾನರ್ ತೆರವು ಮಾಡಿದ್ದು ಯಾರು ಎಂಬ ಪ್ರಶ್ನೆ ಎಲ್ಲೆಡೆ ಚರ್ಚೆಗೆಗ್ರಾಸವಾಗಿದೆ.

READ ALSO