ದಿವ್ಯ ಔಷಧವೆಂದು ಭಾವಿಸಿ ಅವೈಜ್ಞಾನಿಕ ಕಾಸರ್ಕಾನ ತೊಗಟೆಯ ರಸ ಕುಡಿದ ಮಗ ಸಾವು, ತಂದೆ ಸ್ಥಿತಿ ಗಂಭೀರ

ಶಿರಸಿ: ಕೊರೋನಾ ಸೋಂಕು ಹತ್ತಿರ ಸುಳಿಯಬಾರದೆಂದು ಯಾರೋ ಹೇಳಿದ ಮಾತನ್ನು ಕೇಳಿ ಕಾಸರ್ಕಾನ ಮರದ ತೊಗಟೆಯ ರಸ ಕುಡಿದ ಪರಿಣಾಮ ಮಗ ಸಾವನ್ನಪ್ಪಿದ್ದು, ತಂದೆಯ ಸ್ಥಿತಿ ಗಂಭೀರವಾಗಿರುವ ಘಟನೆ ತಾಲೂಕಿನ ರಾಮನಬೈಲಿನಲ್ಲಿ ನಡೆದಿದೆ.

ಅವೈಜ್ಞಾನಿಕ ಹಳ್ಳಿ ಔಷಧ ಕುಡಿದು ಮಗ ಸಾವು, ತಂದೆ ಸ್ಥಿತಿ ಗಂಭೀರ ರಾಮನಬೈಲಿನ ಫ್ರಾನ್ಸಿಸ್ ರೇಘೋ(42) ಮೃತರು ಹಾಗೂ ಅಂಥೋನಿ(70) ಅಸ್ವಸ್ಥರಾದವರು. ಗ್ರಾಮೀಣ ಪ್ರದೇಶದಿಂದ ತಂದ ಯಾವುದೋ ಔಷಧವನ್ನು ಕಾಯಿಸಿ ತಂದೆ- ಮಗ ಸೇವಿಸಿದ್ದರು. ಆದ್ರೆ, ಈ ಔಷಧಿ ಅಡ್ಡಪರಿಣಾಮ ಬೀರಿ​ ಮಗ ಸಾವನ್ನಪ್ಪಿದ್ದಾನೆ. ಬಳಿಕ ಅಸ್ವಸ್ಥಗೊಂಡ ಅಂಥೋನಿಯವರನ್ನು ಶಿರಸಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿರಸಿ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

READ ALSO

ಭೀಮನ ಅಮಾವಾಸ್ಯೆ ದಿನ ಹಾಳೆ ಮರದ ಕಷಾಯ ಕುಡಿಯುವ ಪದ್ಧತಿ ಹಳ್ಳಿ ಭಾಗದಲ್ಲಿ ಸಾಮಾನ್ಯವಾಗಿದೆ. ಆದರೆ ಹಾಳೆ ಮರವು ಕಾಸರ್ಕನ ಮರವು ನೋಡಲು ಒಂದೇ ರೀತಿಯದಿದ್ದು ಈ ಹಿಂದೆಯೂ ಕೂಡ ಹಾಳೆ ಮರದ ತೊಗಟೆಯ ರಸದ ಬದಲು ಕಾಸರ್ಕನ ಮರದ ತೊಗಟೆಯ ರಸ ಕುಡಿದು ಸಾವನ್ನಪ್ಪಿರುವುದನ್ನು ಇಲ್ಲಿನೆನಪಿಸಬೇಕಾಗಿದೆ. ಈ ಕಾಸರ್ಕಾನ ಮರದ ರಸ ದಿವ್ಯ ಔಷಧವಲ್ಲ ಬದಲಾಗಿ ಇದಕ್ಕೆ ಪ್ರಾಣಕಳೆದು ಕೊಳ್ಳುವ ಸಾಧ್ಯತೆಯೇ ಹೆಚ್ಚು. ಇನ್ನಾದರು ಇಂತಹ ನಾಟಿಔಷಧ ಉಪಯೋಗಿಸುವ ಮೊದಲು ತಜ್ಞ ಪಂಡಿತರ ಸಲಹೆ ಸೂಚನೆ ಪಾಲಿಸಿ