ಕೊರೋನಾ ಮಹಾಮಾರಿಯಿಂದ ರಕ್ಷಣೆಗಾಗಿ ರಕ್ಷಾ ಕವಚ ಧರಿಸಿ ಕರ್ತವ್ಯ ನಿರ್ವಹಿಸಲು ಮುಂದಾದ ಖಾಸಗಿ ಬಸ್ ನಿರ್ವಾಹಕ!

ಮಂಗಳೂರು: ಕೊರೋನಾ ಮಹಾಮಾರಿ ವೈರಸ್ ನಿಂದಾಗಿ ದೇಶಾದ್ಯಂತ ಲಾಕ್ ಡೌನ್ ಹೇರಲಾಗಿದ್ದು ಎಲ್ಲಾ ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡಿದ್ದು ಇದೀಗ ಹಂತ ಹಂತವಾಗಿ ಲಾಕ್ ಡೌನ್ ನಲ್ಲಿ ವಿನಾಯಿತಿ ನೀಡಿದ ಬೆನ್ನಲ್ಲೇ ಮಂಗಳೂರಿನಲ್ಲಿ ಖಾಸಗಿ ಬಸ್ ಸಂಚಾರಕ್ಕೆ ಮುಂದಾಗಿದೆ. ಈ ಹಿನ್ನಲೇಯಲ್ಲಿ ನಗರದ ಕೆಲವು ಬಸ್ ಸಿಬ್ಬಂದಿ ಕೋವಿಡ್-19ನಿಂದ ರಕ್ಷಣೆಗಾಗಿ ರಕ್ಷಾ ಕವಚ ಧರಿಸಿ ಕರ್ತವ್ಯ ನಿರ್ವಹಿಸಲು ಮುಂದಾಗಿದ್ದಾರೆ.

ನಗರದ ಸ್ಟೇಟ್ ಬ್ಯಾಂಕ್‌ನಿಂದ ಶಕ್ತಿನಗರಕ್ಕೆ ತೆರಳುವ ರೂಟ್ ನಂಬ್ರ 6ಎ ಸಿಟಿ ಬಸ್ಸಿನ ನಿರ್ವಾಹಕರು ಕೊರೋನ ವೈರಸ್ ರೋಗ ಹರಡುವುದನ್ನು ತಡೆಗಟ್ಟುವ ಸಲುವಾಗಿ ಕೋವಿಡ್ ರಕ್ಷಣಾ ಕವಚ ಅಳವಡಿಸಿಕೊಂಡಿದ್ದಾರೆ.

READ ALSO

ಬಹುತೇಕ ಬಸ್ಸುಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತಿರುವ ಸಂದರ್ಭದಲ್ಲೇ ಬಸ್ಸಿನ ಸಿಬ್ಬಂದಿಯ ಮುಂಜಾಗ್ರತಾ ಕ್ರಮಕ್ಕೆ ವ್ಯಾಪಕವಾಗಿ ಪ್ರಶಂಸೆ ವ್ಯಕ್ತವಾಗಿದೆ.