ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಕೊರೋನಾ ಸೋಂಕು ದೃಢ!

ದೆಹಲಿ: ಭೂಗತ ಜಗತ್ತಿನ ಪಾತಕಿ ದಾವೂದ್ ಇಬ್ರಾಹಿಂಗೆ ಕೊರೊನಾ ವೈರಸ್ ತಗುಲಿದೆ ಎಂಬ ಸುದ್ದಿ ಹೊರಬಿದ್ದಿದೆ. ಮೋಸ್ಟ್ ವಾಂಟೆಡ್ ಅಪರಾಧಿಗೆ ಸೋಂಕು ಖಚಿತವಾಗುತ್ತಿದ್ದಂತೆ ಆತನ ಸಹಚರರು ಮತ್ತು ಇತರೆ ಸಿಬ್ಬಂದಿ ಕ್ವಾರಂಟೈನ್ ಆಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ದಾವೂದ್ ಇಬ್ರಾಹಿಂ ಮಾತ್ರವಲ್ಲ ಆತನ ಪತ್ನಿ ಮಹಜಬೀನ್‌ಗೂ ಸಹ ಕೊವಿಡ್ ಸೋಂಕು ಅಂಟಿಕೊಂಡಿದೆ. ಸದ್ಯದ ಮೂಲಗಳ ಪ್ರಕಾರ, ದಾವೊದ್ ಮತ್ತು ಮತ್ತು ಪತ್ನಿಯನ್ನು ಕರಾಚಿಯ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗುತ್ತಿದೆ.

READ ALSO