ಕರ್ನಾಟಕದಲ್ಲಿಂದು ಶತಕದೆಡೆಗೆ ಸಾಗಿದ ಸೋಂಕಿತರ ಸಂಖ್ಯೆ

ಬೆಂಗಳೂರು: ಕೊರೋನಾ ಮಹಾಮಾರಿ ಇಂದು ರಾಜ್ಯದಾದ್ಯಂತ 15 ಜಿಲ್ಲೆಗಳಲ್ಲಿ ಮತ್ತೆ ಕಾಣಿಸಿಕೊಂಡಿದೆ. ಚಿತ್ರದುರ್ಗ ಜಿಲ್ಲೆಗೆ ಕೊರೊನಾ ಶಾಕ್ ಕೊಟ್ಟಿದ್ದು, ಇಂದು ಒಂದೇ ದಿನ 20 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದರೆ, ಕರಾವಳಿ ಜಿಲ್ಲೆಗಳಲ್ಲೂ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 2,282ಕ್ಕೆ ಏರಿಕೆಯಾಗಿದೆ.

ಕರ್ನಾಟಕದಲ್ಲಿ ಇಂದು ಮದ್ಯಾಹ್ನದ ವೇಳೆಗೆ 100 ಸೋಂಕಿತರು ಪತ್ತೆಯಾಗಿದ್ದಾರೆ. ಹಾಗೆಯೇ ಒಟ್ಟು ಸೋಂಕಿತರ ಸಂಖ್ಯೆ 2282ಕ್ಕೆ ಏರಿಕೆಯಾಗಿದೆ.

READ ALSO

ಜಿಲ್ಲಾವಾರು ಸೋಂಕಿತರ ವಿವರಗಳು:-

ಚಿತ್ರದುರ್ಗ 20
ಯಾದಗಿರಿ 14
ಬೆಳಗಾವಿ 13
ಹಾಸನ 13
ದಾವಣಗೆರೆ 11
ಬೀದರ್ 10
ವಿಜಯಪುರ 05
ಉಡುಪಿ 03
ದಕ್ಷಿಣಕನ್ನಡ 03
ಬೆಂಗಳೂರು 02
ಕೋಲಾರ 02
ಚಿಕ್ಕಬಳ್ಳಾಪುರ 01
ಬಳ್ಳಾರಿ 01
ಕೊಪ್ಪಳ 01
ಬಾಗಲಕೋಟೆ 01

ಶೇಕಡಾ 46ರಷ್ಟು ಮಂದಿ ಮಹಾರಾಷ್ಟ್ರದಿಂದ ಬಂದವರೆಂದು ಆರೋಗ್ಯ ಇಲಾಖೆ ತಿಳಿಸಿದೆ. ಸಂಜೆಯ ವೇಳೆ ಸೋಂಕಿತರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ.