7ಹೆಜ್ಜೆ ಇಡಲು 17 ಸೂತ್ರ ಪಾಲಿಸುವಂತೆ ರಾಜ್ಯ ಸರಕಾರದ ಮಹತ್ತರದ ಆದೇಶ

ಬೆಂಗಳೂರು: ಕೊರೋನಾ ಮಹಾಮಾರಿಯಿಂದಾಗಿ ದೇಶಾದ್ಯಂತ ಲಾಕ್ ಡೌನ್ ಮುಂದುವರಿದಿದ್ದು ರಾಜ್ಯಾದ್ಯಂತ ಮದುವೆ ಸಮಾರಂಭ, ಕಾರ್ಯಕ್ರಮಗಳು ಕೂಡ ಸರ್ಕಾರದ ನಿಯಮಾನುಸಾರವೇ ನಡೆಯಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹಲವು ಮಾರ್ಗಸೂಚಿಯನ್ನು ರೂಪಿಸಿ ಕಡ್ಡಾಯವಾಗಿ ಆದೇಶವನ್ನು ಪಾಲಿಸುವಂತೆ ಸೂಚನೆ ನೀಡಿದೆ. ಈಗಾಗಲೇ, ಮದುವೆ ಸಮಾರಂಭದಲ್ಲಿ ಐವತ್ತು ಜನರು ಮೀರಿ ಭಾಗವಹಿಸುವಂತಿಲ್ಲ ಎನ್ನುವ ಆದೇಶವನ್ನು ಸರಕಾರ ಹೊರಡಿಸಿದೆ. ಜೊತೆಗೆ, ಸಾಮಾಜಿಕ ಅಂತರ ಕಾಪಾಡಿಕೊಂಡು ಬರುವುದು ಮತ್ತು ಮಾಸ್ಕ್ ಧರಿಸುವುದನ್ನೂ ಈ ಹಿಂದೆಯೇ ಖಡ್ಡಾಯ ಮಾಡಲಾಗಿತ್ತು.

ಯಾವುದೇ ಮದುವೆಗಳಿಗೆ ಸ್ಥಳೀಯ ಆಡಳಿತ ಸಂಸ್ಥೆಗಳಿಂದ ಅನುಮತಿ ಕಡ್ಡಾಯ.

READ ALSO

ಒಂದು ಮದುವೆಯಲ್ಲಿ 50 ಜನಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ

ಗರ್ಭಿಣಿಯರು, 65 ವರ್ಷ ಮೇಲ್ಪಟ್ಟ ವೃದ್ಧರು, 10 ವರ್ಷದೊಳಗಿನ ಮಕ್ಕಳಿಗೆ ನಿರ್ಬಂಧ.

ಕಂಟೈನ್ಮೆಂಟ್ ವಲಯದವರಿಗೆ ಪ್ರವೇಶ ನಿರ್ಬಂಧ.

ಸೂಕ್ತ ಸಾರ್ವಜನಿಕ ಸ್ಥಳ ಮತ್ತು ನೈಸರ್ಗಿಕ ವಾತಾವರಣ ಇರುವೆಡೆ ಮಾತ್ರ ಮದುವೆಗೆ ಅವಕಾಶ

ಮದುವೆಗಳಲ್ಲಿ ಹವಾನಿಯಂತ್ರಿತಗಳನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ.

ಮದುವೆಗಳಲ್ಲಿ ಒಬ್ಬ ನೋಡಲ್ ಅಧಿಕಾರಿ ಇರುವುದು ಕಡ್ಡಾಯವಾಗಿದೆ

ಮದುವೆಗೆ ಬಂದವರ ಲಿಸ್ಟ್ ಮಾಡಿ ನೋಡಲ್ ಅಧಿಕಾರಿಗೆ ಸಲ್ಲಿಸುವುದು ಕಡ್ಡಾಯ

ಮದುವೆಗೆ ಬರುವವರು ಆರೋಗ್ಯ ಸೇತು ಆಪ್ ಡೌನ್ ಲೋಡ್ ಮಾಡಿಕೊಳ್ಳಬೇಕು

ಮದುವೆ ಸ್ಥಳಗಳ ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಕಲ್ಪಿಸುವುದು ಕಡ್ಡಾಯ.

ಮದುವೆಗೆ ಬರುವವರು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು.

ಎಲ್ಲರಿಗೂ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ. 99.5 ಸೆಲ್ಸಿಯಸ್ ಉಷ್ಣತೆ, ಜ್ವರ, ಕೆಮ್ಮು, ನೆಗಡಿ, ಉಸಿರಾಟ ಸಮಸ್ಯೆ ಇರೋರನ್ನು ನಿರ್ಬಂಧಿಸಿ ಅವರನ್ನು ಆಸ್ಪತ್ರೆಗೆ ಕಳಿಸಬೇಕು.

ಒಂದು ಮೀಟರ್ ವೈಯುಕ್ತಿಕ ಅಂತರ ಕಾಪಾಡಿಕೊಳ್ಳಬೇಕು.

ಸಾಬೂನಿನಲ್ಲಿ ಹ್ಯಾಂಡ್ ವಾಷ್ ಗೆ ವ್ಯವಸ್ಥೆ ಮಾಡಿರಬೇಕು

ಸಾರ್ವಜನಿಕವಾಗಿ ಉಗುಳುವಂತಿಲ್ಲ.

ಮದುವೆ ಸ್ಥಳಗಳಲ್ಲಿ ಸ್ವಚ್ಛತೆಯನ್ನ ಕಾಪಾಡಬೇಕು.

ಮದ್ಯ, ಪಾನ್, ಗುಟ್ಕಾ, ತಂಬಾಕು ಸೇವನೆ ನಿಷಿದ್ಧ.

ಲಾಕ್ ಡೌನ್ ಅವಧಿ ಮುಗಿಯುತ್ತಾ ಬಂದರೂ ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಈ ನಡುವೆ ಮೇ 18ರಿಂದ ಲಾಕ್ ಡೌನ್ ನಲ್ಲಿ ಇನ್ನಷ್ಟು ಸಡಿಲಿಕೆ ಆಗಲಿದೆ. ಇದೇ ವೇಳೆ ರಾಜ್ಯದ ವಿವಿಧೆಡೆಗಳಲ್ಲಿ ಮದುವೆ ಸೀಜನ್ ಕೂಡ ಆರಂಭವಾಗಿದ್ದು, ಕೊರೊನಾ ಸೋಂಕು ನಿಯಂತ್ರಿಸುವುದು ರಾಜ್ಯ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಪ್ತಪದಿಗೆ 17 ಮಾರ್ಗಸೂಚಿಯನ್ನು ರೂಪಿಸಿ, ಮದುವೆಯಲ್ಲಿಯೂ ಸಾಮಾಜಿಕ ಅಂತರ ಕಡ್ಡಾಯವಾಗಿ ಹೇಗೆ ಕಾಯ್ದುಕೊಳ್ಳಬೇಕು ಎಂಬ ಬಗ್ಗೆ ನಿಯಮಗಳು ಜಾರಿ ಮಾಡಿದೆ.