ಇಂದು 21 ನೇ ಕಾರ್ಗಿಲ್ ವಿಜಯ್ ದಿವಸ್ ದೇಶಕ್ಕಾಗಿ ತನ್ನ ಪ್ರಾಣ ಪಣಕ್ಕಿಟ್ಟು ಹುತಾತ್ಮರಾದ ವೀರ ಯೋಧರಿಗೆ ನಮನ

ನವದೆಹಲಿ: ನಮ್ಮ ಹೆಮ್ಮೆಯ ಯೋಧರಿಗೆ ಗೌರವ ಸೂಚಿಸುವ ‘ಕಾರ್ಗಿಲ್‌ ವಿಜಯ ದಿವಸ’ಕ್ಕೆ 21ರ ಸಂಭ್ರಮ ಇಂದು . ಇಪ್ಪತ್ತೊಂದು ವರ್ಷಗಳ ಹಿಂದೆ ಪಾಕಿಸ್ತಾನದ ಸಂಚನ್ನು ಪ್ರತಿಬಂಧಿಸಿ ಪುಡಿಗಟ್ಟಿದ ನಮ್ಮ ಭಾರತದ ಹೆಮ್ಮೆಯ ವೀರಪುತ್ರರು, ತ್ಯಾಗ ಬಲಿದಾನ ಮಾಡಿ, ವೀರಾವೇಶದಿಂದ ಹೋರಾಡಿ, ನಮ್ಮನ್ನೆಲ್ಲಾ ರಕ್ಷಿಸಿದ್ದರು. ಅಂಥಾ ವೀರಯೋಧರಿಗೆ ನಮನ ಸಲ್ಲಿಸಲು ಜೂನ್‌ 26ನ್ನು ಪ್ರತಿ ವರ್ಷ ಕಾರ್ಗಿಲ್‌ ದಿವಸವನ್ನಾಗಿ ಆಚರಿಸುತ್ತೇವೆ. ತ್ಯಾಗ ಬಲಿದಾನದ ಮಾಸದ ನೆನಪು ಇಂದಿಗೂ ಹಸಿಯಾಗಿದೆ.


ಸದಾ ಭಾರತದ ಕೆಡುಕನ್ನೇ ಬಯಸುವ ಕಪಟಿ ಪಾಕಿಸ್ತಾನ ಒಂದು ಕಡೆಯಿಂದ ಅಂದಿನ ಪ್ರಧಾನಿ ವಾಜಪೇಯಿ ತೋರಿದ ಸ್ನೇಹ ಹಸ್ತಕ್ಕೆ ಕೈಚಾಚಿ ಇನ್ನೊಂದು ಕಡೆಯಿಂದ ಭಾರತದ ಬೆನ್ನಿಗೇ ಇರಿಯಿತು. ಅತ್ತ ಲಾಹೋರಿನಲ್ಲಿ ನವಾಜ್‌ ಶರೀಫ್‌, ಪ್ರಧಾನಿ ವಾಜಪೇಯಿ ಅವರ ಕೈಕುಲುಕುತ್ತಿರುವಾಗ ಇತ್ತ ಗಡಿ ಭಾಗದಲ್ಲಿ ತನ್ನ ಸೇನೆಯನ್ನು ಜಮಾಗೊಳಿಸಿ, ಭಾರತದ ಮೇಲೆ ದಾಳಿ ಮಾಡಲು ಹೊಂಚು ಹಾಕಿ ಕುಳಿತಿತ್ತು. ಸ್ನೇಹ ಹಸ್ತ ಚಾಚುತ್ತಾ ಭಾರತ ಎಲ್ಲೋ ಒಂದು ಬದಿಯಲ್ಲಿ ಪಾಕಿಸ್ತಾನವನ್ನು ನಂಬಿ ಮೈಮರೆತಿತ್ತು.

ವಿಶ್ವಕ್ಕೆ ಶಾಂತಿ ಸಾರಿದ ರಾಷ್ಟ್ರ ನಮ್ಮದು. ಆದರೆ ಪಕ್ಕದ ರಾಷ್ಟ್ರ ನಮ್ಮ ಮೇಲೆ ಆಕ್ರಮಣ ಮಾಡಲು ಬರಬಹುದು ಎಂದು ಊಹಿಸಿಕೊಳ್ಳುವುದಕ್ಕೂ ಮುಂಚೆಯೇ ಪರಿಸ್ಥಿತಿ ಕೈಮೀರಿ ಹೋಗಿತ್ತು. ವಾಜಪೇಯಿ ಸರಕಾರದ ವೈಫಲ್ಯವಿದು ಅಂತಾ ಸರಕಾರದ ಮೇಲೆ ಪ್ರತಿಪಕ್ಷ ಗಳು ಮುಗಿಬಿದ್ದವು. ಕೆಲವೊಂದಷ್ಟು ಜನ ಇನ್ನೂ ಮುಂದಕ್ಕೆ ಹೋಗಿ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಕೊಟ್ಟು ಬಿಡಿ ಎಂದರು. ಆಗಷ್ಟೇ ಅಧಿಕಾರಕ್ಕೆ ಬಂದಿದ್ದ ವಾಜಪೇಯಿ ರಾಜಿನಾಮೆ ನೀಡಬೇಕೆಂಬ ಒತ್ತಡವಿದ್ದರೂ ಯಾವುದಕ್ಕೂ ಬಗ್ಗದೇ ಸೇನೆಗೆ ವಾಜಪೇಯಿ ಶಕ್ತಿ ತುಂಬಿದರು.

ಪ್ರಧಾನಿಯ ಆದೇಶ ಬಂದ ತಕ್ಷ ಣ ಸೇನೆ ತನ್ನ ಕಾರ್ಯಾಚರಣೆಯನ್ನು ಅತ್ಯಂತ ಕ್ಲಿಷ್ಟಕರ ಸನ್ನಿವೇಶದಲ್ಲಿ ಪ್ರಾರಂಭಿಸಿತು. ಇತ್ತ ಉಕ್ಕಿನ ಮನುಷ್ಯಅಡ್ವಾಣಿ ತಕ್ಷ ಣವೇ ಇಸ್ರೇಲ್‌ಗೆ ತೆರಳಿ ಮದ್ದುಗುಂಡು ಹಾಗು ಅಗತ್ಯ ಸೇನಾ ನೆರವು ಪಡೆದುಕೊಂಡು ಬಂದರು. ಯುದ್ಧ ನಡೆಯುತ್ತಿದ್ದ ಸ್ಥಳದ ಪರಿಸ್ಥಿತಿಯ ಅವಲೋಕನ ನಡೆಸಿ ಅತ್ಯಂತ ಕೆಟ್ಟ ಹವಾಮಾನ, ಕೈಯಲ್ಲಿರುವ ಕಳಪೆ ಸಾಮಾಗ್ರಿಗಳು, ವೈರಿಪಡೆಯ ಅತ್ಯಾಧುನಿಕ ಆಯುಧಗಳ ನಡುವೆಯೂ ನಮ್ಮ ಸೇನೆ ಧೃತಿಗೆಡದೆ ಆಪರೇಷನ್‌ ವಿಜಯ್‌ ಮೂಲಕ ಹೋರಾಟ ನಡೆಸುತ್ತಾ ಒಂದೊಂದೇ ಸ್ಥಳವನ್ನು ವಾಪಸ್ಸು ಪಡೆಯಿತು.

74 ದಿನಗಳ ಕಾಲ ನಡೆದ ಯುದ್ಧದಲ್ಲಿ ದಿನಕ್ಕೆ 15 ಕೋಟಿಯಂತೆ ಸುಮಾರು 1100 ಕೋಟಿಗಳಷ್ಟು ಹಣ ವ್ಯಯಿಸಲಾಗಿತ್ತು. ಖರ್ಚಾದ ಹಣವಿರಲಿ, ಆದರೆ ದೇಶ ಅದೆಷ್ಟೋ ಯುವ ಸೇನಾನಿಗಳನ್ನು ಕಳೆದುಕೊಂಡಿತ್ತು. ನಮ್ಮವರು 527, ಪಾಕಿಸ್ತಾನದವರು 696 ಜನ ಸಾವಿಗೀಡಾದರು. ಜುಲೈ 26ರಂದು ಕಾರ್ಗಿಲ್‌ನ ಕೊನೆಯ ಠಾಣೆಯನ್ನು ಭಾರತೀಯ ಸೇನೆ ವಶಪಡಿಸಿಕೊಂಡು ಗೆಲುವು ಘೋಷಿಸಿತು. ಅದುವೇ ಕಾರ್ಗಿಲ್‌ ವಿಜಯ ದಿವಸ.

ಅಂದು ಭಾರತ ಪಾಕಿಸ್ತಾನದ ಒಳಗೆ ಹೋಗಿ ಯುದ್ಧ ಮಾಡಿರಲಿಲ್ಲ. ಅಂತಾರಾಷ್ಟ್ರೀಯ ಗಡಿರೇಖೆ ಉಲ್ಲಂಘಿಸಿರಲಿಲ್ಲ. ಅಷ್ಟು ಅಚ್ಚುಕಟ್ಟಾಗಿ ಯುದ್ಧ ಗೆದ್ದಿತ್ತು. ಸೇನೆಯಲ್ಲಿ ಮದ್ದು ಗುಂಡುಗಳಿರದಿದ್ದರೂ ಯೋಧರ ಆತ್ಮವಿಶ್ವಾಸ ಕಾರ್ಗಿಲ್‌ನ ಎತ್ತರದ ಬೆಟ್ಟಗುಡ್ಡಗಳನ್ನೂ ಮೀರಿಸುವಂತಿತ್ತು. ಹೀಗೆ ಪಾಕಿಸ್ತಾನಕ್ಕೆ ನಮ್ಮ ಯೋಧರು ಪಾಠ ಕಲಿಸಿ 20 ವರ್ಷ ಇಂದಿಗೆ ಕಳೆದಿದೆ. ವಿಜಯದ ಸಂಕೇತವಾಗಿ ಹುತಾತ್ಮರಿಗೆ ನಮನಗಳನ್ನು ಸಲ್ಲಿಸಲು ಜುಲೈ 26ನ್ನು ಕಾರ್ಗಿಲ್‌ ವಿಜಯ ದಿವಸ ಎಂದು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಎಲ್ಲಾ ಹುತಾತ್ಮ ಯೋಧರಿಗೆ ನಮನಗಳು.

Spread the love
  • Related Posts

    ಬೆಳ್ತಂಗಡಿ ತಾಲೂಕಿನಾದ್ಯಂತ ಗುಡುಗು-ಸಿಡಿಲು ಸಹಿತ ಮಳೆ: ನಿಡ್ಲೆ–ಕಳೆಂಜ ರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ಲೈನ್ ಹಾನಿ

    Belthangady: ತಾಲೂಕಿನ ಹಲವೆಡೆ ಶನಿವಾರ ಸಂಜೆ ಉತ್ತಮ ಮಳೆಯಾಗಿದೆ.Shishila, Kokkada, Dharmasthala, Arasinamakki, Ujire ಹಾಗೂ Nidle ಮೊದಲಾದ ಕಡೆಗಳಲ್ಲಿ ಗುಡುಗು-ಸಿಡಿಲು ಸಹಿತ ಉತ್ತಮ ಮಳೆ ಸುರಿದಿದೆ. ಉಳಿದ ಕೆಲವು ಪ್ರದೇಶಗಳಲ್ಲಿ ತುಂತುರು ಹಾಗೂ ಸಾಮಾನ್ಯ ಮಳೆಯಾಗಿದೆ.ತಾಲೂಕಿನಲ್ಲಿ ಫೆಬ್ರವರಿ 21ರಂದು ಕೆಲವೆಡೆ…

    Spread the love

    “ಬಂಗಾಡಿ ಕೊಲ್ಲಿ” 28ನೇ ವರ್ಷದ ‘ಸೂರ್ಯ – ಚಂದ್ರ’ ಜೋಡುಕರೆ ಕಂಬಳ

    ಬಂಗಾಡಿ: ಸೂರ್ಯ-ಚಂದ್ರ ಹೋಡುಕರೆ ಕಂಬಳ ಸಮಿತಿ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಶನ್, ಕರ್ನಾಟಕ ಸರಕಾರ ಮತ್ತು ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಭಾಗಿತ್ವದೊಂದಿಗೆ 28ನೇ ವರ್ಷದ ಹೊನಲು ಬೆಳಕಿನ ಸೂರ್ಯ-ಚಂದ್ರ ಜೋಡುಕರೆ “ಬಂಗಾಡಿ ಕೊಲ್ಲಿ” ಬಯಲು ಕಂಬಳವು ಶ್ರೀ…

    Spread the love

    You Missed

    ಬೆಳ್ತಂಗಡಿ ತಾಲೂಕಿನಾದ್ಯಂತ ಗುಡುಗು-ಸಿಡಿಲು ಸಹಿತ ಮಳೆ: ನಿಡ್ಲೆ–ಕಳೆಂಜ ರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ಲೈನ್ ಹಾನಿ

    • By admin
    • March 15, 2026
    • 61 views
    ಬೆಳ್ತಂಗಡಿ ತಾಲೂಕಿನಾದ್ಯಂತ ಗುಡುಗು-ಸಿಡಿಲು ಸಹಿತ ಮಳೆ: ನಿಡ್ಲೆ–ಕಳೆಂಜ ರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ಲೈನ್ ಹಾನಿ

    “ಬಂಗಾಡಿ ಕೊಲ್ಲಿ” 28ನೇ ವರ್ಷದ ‘ಸೂರ್ಯ – ಚಂದ್ರ’ ಜೋಡುಕರೆ ಕಂಬಳ

    • By admin
    • March 14, 2026
    • 101 views
    “ಬಂಗಾಡಿ ಕೊಲ್ಲಿ” 28ನೇ ವರ್ಷದ ‘ಸೂರ್ಯ – ಚಂದ್ರ’ ಜೋಡುಕರೆ ಕಂಬಳ

    ಹಾವು ಕಡಿತಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರೆಗುಡ್ಡೆಯ ಮಹೇಶ್ ಮನೆಗೆ ಡಿ.ಕಿರಣ್ ಚಂದ್ರ ಪುಷ್ಪಗಿರಿ ಭೇಟಿ

    • By admin
    • March 14, 2026
    • 43 views
    ಹಾವು ಕಡಿತಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರೆಗುಡ್ಡೆಯ ಮಹೇಶ್ ಮನೆಗೆ  ಡಿ.ಕಿರಣ್ ಚಂದ್ರ ಪುಷ್ಪಗಿರಿ ಭೇಟಿ

    KSRTC ಬಸ್ ಹಾಗೂ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಮೂವರು ಸಾವು

    • By admin
    • March 13, 2026
    • 610 views
    KSRTC ಬಸ್ ಹಾಗೂ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಮೂವರು ಸಾವು

    ಎಕ್ಸೆಲ್ ಪಿ.ಯು ಕಾಲೇಜಿನಲ್ಲಿ ಎಲೆಕ್ಟ್ರಿಷಿಯನ್ ಮತ್ತು ಪ್ಲಂಬರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

    • By admin
    • March 10, 2026
    • 150 views
    ಎಕ್ಸೆಲ್ ಪಿ.ಯು ಕಾಲೇಜಿನಲ್ಲಿ ಎಲೆಕ್ಟ್ರಿಷಿಯನ್ ಮತ್ತು ಪ್ಲಂಬರ್ ಹುದ್ದೆಗಳಿಗೆ  ಅರ್ಜಿ ಆಹ್ವಾನ

    ಗುರುವಾಯನಕೆರೆ ಎಕ್ಸೆಲ್ ಟೆಕ್ ಶಾಲೆಯಲ್ಲಿ ಕೆ.ಜಿ ಮಕ್ಕಳ ಘಟಿಕೋತ್ಸವ

    • By admin
    • March 10, 2026
    • 63 views
    ಗುರುವಾಯನಕೆರೆ ಎಕ್ಸೆಲ್ ಟೆಕ್ ಶಾಲೆಯಲ್ಲಿ ಕೆ.ಜಿ ಮಕ್ಕಳ ಘಟಿಕೋತ್ಸವ