ಬೆಂಗಳೂರು: ರಾಜ್ಯದ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ಅಧಿಕಾರಿಗಳು ಭರ್ಜರಿ ದಾಳಿ ನಡೆಸಿದ್ದು, ಈ ವೇಳೆ ಬರೋಬ್ಬರಿ 81 ಕೆಜಿ ಚಿನ್ನ, 15 ಕೋಟಿ ನಗದು ಪತ್ತೆಯಾಗಿದೆ.
ರಾಜ್ಯದಲ್ಲಿ ಮೆಡಿಕಲ್ ಕಾಲೇಜು, ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದುದಾಳಿಯ ವೇಳೆ ಬರೋಬ್ಬರಿ 402.28 ಕೋಟಿ ರೂಪಾಯಿ ತೆರಿಗೆ ವಂಚನೆ ಬೆಳಕಿಗೆ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಐಟಿ ದಾಳಿಯ ವೇಳೆ 2.39 ಕೋಟಿ ವಿದೇಶಿ ಆಸ್ತಿ, ಬೇನಾಮಿ ಹೆಸರಲ್ಲಿ 35 ಐಷಾರಾಮಿ ಕಾರುಗಳು, ದಾಳಿ ವೇಳೆ 15.09 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ. ಅಲ್ಲದೇ ದಾಳಿ ವೇಳೆ 50 ಕ್ಯಾರೆಟ್ ಡೈಮಂಡ್, 40 ಕೆಜಿ ಬೆಳ್ಳಿ ವಸ್ತುಗಳು, 30 ಕೋಟಿ ರೂಪಾಯಿ ಮೌಲ್ಯದ 81 ಕೆಜಿ ಚಿನ್ನಾಭರಣ ಪತ್ತೆಯಾಗಿದೆ ಎಂದು ಹೇಳಲಾಗಿದೆ.