
ಬೆಳ್ತಂಗಡಿ: ಅಳದಂಗಡಿಯ ಕೆದ್ದು ಸಮೀಪ ಆಟೋ ಹಾಗೂ ಓಮ್ನಿ ಕಾರು ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಒರ್ವ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ.
ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಪಿಲ್ಯ ನಿವಾಸಿ ಭುಜಬಲಿ ಹೆಗ್ಡೆ (60ವ.) ಆಸ್ಪತ್ರೆಗೆ ಸಾಗಿಸುವ ಮಧ್ಯೆ ಅಸುನೀಗಿದ್ದಾರೆ.

ಇನ್ನು ಅಪಘಾತಕ್ಕೀಡಾದ ಓಮ್ನಿ ಕಾರು ಶಿವಮೊಗ್ಗ ಮೂಲದ್ದು ಎಂಬ ಮಾಹಿತಿ ಲಭ್ಯವಾಗಿದೆ. ಅಪಘಾತದ ತೀವ್ರತೆಗೆ ಎರಡೂ ವಾಹನಗಳು ಸಂಪೂರ್ಣವಾಗಿ ನಜ್ಜುನುಜ್ಜಾಗಿದೆ.
ಆಟೋ ಚಾಲಕ ಅಳದಂಗಡಿಯವರಾಗಿದ್ದು, ಅವರ ಮನೆಯಲ್ಲಿ ನಾಳೆ ಮದುವೆ ಕಾರ್ಯ ನಡೆಯಲಿದ್ದು ಅದಕ್ಕಾಗಿ ಸಿದ್ಧತೆಯಲ್ಲಿದ್ದರು ಅನ್ನೋ ಮಾಹಿತಿ ಲಭ್ಯವಾಗಿದೆ.
ಮಾರುತಿ ಕಾರಿನಲ್ಲಿದ್ದ ಶಿವಮೊಗ್ಗದ ಉಷಾ ಮತ್ತು ಚಾಲಕ ನಾಗಭೂಷಣ, ಹಾಗೂ ರಿಕ್ಷಾದಲ್ಲಿದ್ದ ಲಲಿತಾ, ಅಭಿಜಿತ್, ರಿಕ್ಷಾ ಚಾಲಕ ಶಶಿಧರ ರವರಿಗೂ ಗಾಯಗಳಾಗಿದ್ದು ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.