ತಂದೆಯನ್ನು ಕೊಂದ ಪಾಪಿ ಮಗ ಅಂದರ್! ಬೆಳ್ತಂಗಡಿ ಪೋಲೀಸರ ಯಶಸ್ವಿ ಕಾರ್ಯಾಚರಣೆ

ಬೆಳ್ತಂಗಡಿ : ಬೆಳ್ತಂಗಡಿ ಜ್ಯೂನಿಯರ್ ಕಾಲೇಜ್ ಬಳಿಯ ವಾಸು ಸಪಲ್ಯ(66)ರನ್ನು 2 ದಿನಗಳ ಹಿಂದೆ ಕೊಲೆ‌ ಮಾಡಿ ತಲೆಮರೆಸಿಕೊಂಡಿದ್ದ ಮಗ ದಯಾನಂದ (38) ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಇತ್ತ ತನ್ನ ತಂದೆಯನ್ನೇ ನಡು ರಸ್ತೆಯಲ್ಲಿ ಕೊಲೆ ಮಾಡಿದ ಬಳಿಕ ದಯಾನಂದ ಮಂಗಳೂರಿನಲ್ಲಿ ಕದ್ರಿ ಕಂಬಲದ ಬಳಿ ಟ್ಯಾಕ್ಸಿ ಚಾಲಕನಾಗಿ ಕೆಲಸಕ್ಕೆ ಸೇರಿದ್ದ. ಈ ಕುರಿತು ಮಾಹಿತಿ ಕಲೆಹಾಕಿದ ತನಿಖಾಧಿಕಾರಿ  ಬೆಳ್ತಂಗಡಿ ಸರ್ಕಲ್‌ ಇನ್ಸ್‌ಪೆಕ್ಟರ್ ಸಂದೇಶ್.ಪಿ.ಜಿ ನೇತ್ರತ್ವದಲ್ಲಿ ಬೆಳ್ತಂಗಡಿ ಪಿಎಸ್ಐ ನಂದಕುಮಾರ್‌ ತಂಡದ ವೆಂಕಟೇಶ್, ಇಬ್ರಾಹಿಂ, ಲತೀಫ್ ಘಟನೆ ನಡೆದ 72 ಘಂಟೆ ಯೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

READ ALSO

ಮಂಗಳೂರು ನಂತೂರು ಬಳಿ ಉದ್ಯಮಿಯ ವಾಹನ ಚಾಲಕನಾಗಿ ಕೆಲಸಕ್ಕೆ ಸೇರಿದ್ದು ಇಂದು ತನ್ನ ಬಳಿ ಹಣ ಇಲ್ಲದೆ ಕೊನೆಗೆ ಸ್ನೇಹಿತನ ಬಳಿ ಹಣವನ್ನು ಸ್ಟೇಟ್ ಬ್ಯಾಂಕ್ ಬಳಿ ಪಡೆಯುತ್ತಿದ್ದಾಗ ಬೆಳ್ತಂಗಡಿ ಪೊಲೀಸರು ಬಂಧಿಸುವಲ್ಲಿ ಯಶ್ವಸ್ಬಿಯಾಗಿದ್ದಾರೆ.