ಫೇಸ್‌ಬುಕ್, ವಿ-ಚಾಟ್ ಸೇರಿದಂತೆ 89 ಆ್ಯಫ್ ಗಳನ್ನು ಯೋಧರು, ಸೇನಾ ಅಧಿಕಾರಿಗಳು ಬಳಸದಂತೆ ಸೂಚನೆ

ನವದೆಹಲಿ: ಇನ್ಮುಂದೆ ಗಡಿ ಕಾಯುವ ಯೋಧರು, ಹಾಗೂ ಸೇನೆಯ ಅಧಿಕಾರಿಗಳು ಫೇಸ್ ಬುಕ್, ವಿ-ಚಾಟ್, ಇನ್ಸ್ಟಾಗ್ರಾಂ, ಟ್ರೂಕಾಲರ್, ಸೇರಿದಂತೆ 89 ಆ್ಯಫ್ ಗಳನ್ನು ಬಳಕೆ ಮಾಡದಂತೆ ಸೂಚಿಸಲಾಗಿದೆ.
ನಿಯಮ ಪಾಲನೆ ತಪ್ಪಿದಲ್ಲಿ ಕಠಿಣ ಕ್ರಮ ಕೈಗೊಳುವಂತೆ ಸೂಚಿಸಲಾಗಿದೆ. ಆಂತರಿಕ ಭದ್ರತೆಯ ಕುರಿತು ಈ ತೀರ್ಮಾನಕ್ಕೆ ಸೇನೆ ಮುಂದಾಗಿದೆ. ಮಾಹಿತಿ ಸೋರಿಕೆ ತಡೆಯುವ ನಿಟ್ಟಿನಲ್ಲಿ ಕ್ರಮಕೈಗೊಂಡಿರುವುದಾಗಿ ಭಾರತೀಯ ಸೇನೆ ಮೂಲಗಳಿಂದ ತಿಳಿದು ಬಂದಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಭಾರತ ಸರ್ಕಾರ ಈಗಾಗಲೇ ಟಿಕ್‌ಟಾಕ್‌, ಕ್ಯಾಮ್‌ಸ್ಕ್ಯಾನರ್‌, ಯುಸಿ ನ್ಯೂಸ್, ಶೇರ್‌ಇಟ್‌ ಸೇರಿದಂತೆ ಚೀನಾ ಮೂಲದ 59 ಆ್ಯಪ್‌ಗಳನ್ನು ನಿಷೇಧಿಸಿದೆ. ಇದೀಗ ಭಾರತೀಯ ಸೇನೆ ಚೀನಾ ಆ್ಯಪ್‌ಗಳನ್ನು ಒಳಗೊಂಡಂತೆ ಒಟ್ಟು 89 ಆ್ಯಪ್‌ಗಳನ್ನು ತೆಗೆದು ಹಾಕುವಂತೆ ಸೂಚನೆ ನೀಡಿದೆ.

READ ALSO

ಇನ್‌ಸ್ಟಾಗ್ರಾಮ್‌, ಸ್ನ್ಯಾಪ್‌ಚ್ಯಾಟ್‌, ಫೇಸ್‌ಬುಕ್‌ ರೀತಿಯ ಚೀನಾ ಮೂಲ ಹೊರತಾದ ಅಪ್ಲಿಕೇಷನ್‌ಗಳನ್ನೂ ರಕ್ಷಣಾ ಕಾರಣಗಳಿಂದಾಗಿ ತೆಗೆಯುವಂತೆ ಹೇಳಿದೆ. ದೇಶದ ಭದ್ರತೆ ಮತ್ತು ಸಾರ್ವಭೌಮತೆಗೆ ಧಕ್ಕೆಯಾಗುವ ರೀತಿ ಚಟುವಟಿಕೆಗಳು ನಡೆಸುತ್ತಿರುವ ಕಾರಣಗಳನ್ನು ನೀಡಿ ಸರ್ಕಾರ ಚೀನಾ ಆ್ಯಪ್‌ಗಳನ್ನು ನಿಷೇಧಿಸಿ ಈ ಹಿಂದೆ ಆದೇಶಿಸಿದೆ.

ಸೇನೆ ಸಿಬ್ಬಂದಿಯ ಸ್ಮಾರ್ಟ್‌ಫೋನ್‌ಗಳಿಂದ ತೆಗೆಯುವಂತೆ ಹೇಳಲಾಗಿರುವ ಆ್ಯಪ್‌ಗಳನ್ನು ಹಲವು ವಿಭಾಗಗಳಾಗಿ ವರ್ಗೀಕರಿಸಲಾಗಿದೆ. ಅವುಗಳಲ್ಲಿ ಕೆಲವು ಇಲ್ಲಿದೆ.