ಚಾರ್ಮಾಡಿ ಘಾಟ್ ನಲ್ಲಿ ಪ್ರಯಾಣ ಮಾಡುತ್ತೀರಾ ತಪ್ಪದೇ ಈ ವರದಿ ನೋಡಿ, ಇಂದಿನಿಂದ ಮುಂದಿನ ಆದೇಶದವರೆಗೆ ರಾತ್ರಿ ಸಂಚಾರ ಸಂಪೂರ್ಣ ಬಂದ್ ಮಾಡಿ ಜಿಲ್ಲಾಧಿಕಾರಿ ಆದೇಶ

ಚಿಕ್ಕಮಗಳೂರು: ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮಾಡಿ ಘಾಟ್ ನಲ್ಲಿ ಸಂಜೆ 7 ರಿಂದ ಬೆಳಗ್ಗೆ 7 ರ ತನಕ ಯಾವುದೇ ವಾಹನಗಳು ಸಂಚರಿಸದಂತೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಡಾ.ಗೌತಮ್ ಬಗಾದಿ ಆದೇಶಿಸಿರುತ್ತಾರೆ.

ಕಳೆದ ಬಾರಿ ಮಳೆಯಿಂದ ಗುಡ್ಡ ಕುಸಿದಿದ್ದು, ರಸ್ತೆಗಳು ಸಂಪೂರ್ಣ ಹಾನಿಯಾಗಿದ್ದು ತಾತ್ಕಾಲಿಕ ವಾಗಿ ಕೆಲಸ ಪ್ರಾರಂಭಿಸಿ ಬೇಸಿಗೆಯಲ್ಲಿ ಲಘು ವಾಹನ ಸಂಚರಿಸಲು ಅವಕಾಶ ಕಲ್ಪಿಸಲಾಗಿತ್ತು.

READ ALSO

ಈ ಬಾರಿಯೂ ಮಳೆ ಜೋರಾಗಿರುವುದರಿಂದ ಅಲ್ಲಲ್ಲಿ ಮಣ್ಣು ಕುಸಿಯುವ ಸಾಧ್ಯತೆಯಿದ್ದು, ಮಂಜು ಕವಿದ ವಾತಾವರಣವಿದ್ದು, ರಸ್ತೆಗಳ ತಡೆಗೋಡೆ ತಾತ್ಕಾಲಿಕ ನಿರ್ಮಾಣಗೊಂಡಿದ್ದು ರಾತ್ರಿಯ ವೇಳೆ
ಸಂಚರಿಸಲು ಸೂಕ್ತವಾಗಿರುವುದಿಲ್ಲ.

ಈ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಪ್ರಸ್ತಾವನೆಯಂತೆ ಪರಿಶೀಲನೆ ಮಾಡಿದ ಚಿಕ್ಕಮಗಳೂರು ಜಿಲ್ಲಾಧಿಕಾರಿ ಡಾ,ಗೌತಮ್ ಬಗಾದಿಯವರು ಇಂದಿನಿಂದ ಮುಂದಿನ ಆದೇಶ ಬರುವವರೆಗೆ ಯಾವುದೇ ವಾಹನಗಳು ಸಂಜೆ7ರಿಂದ ಬೆಳ್ಳಗೆ7ರವರೆಗೆ ಚಾರ್ಮಾಡಿ ಘಾಟ್ ನಲ್ಲಿ ಸಂಚರಿಸಲು ನಿರ್ಬಂಧಿಸಿ ಆದೇಶಿಸಿರುತ್ತಾರೆ.

ತುರ್ತುವಾಹನಗಳಿಗೆ ಆದೇಶದಲ್ಲಿ ರಿಯಾಯತಿ ಅವಕಾಶವನ್ನು ಕಲ್ಪಿಸಲಾಗಿದೆ.