ಕೊರೋನಾ ವಿಷಾಣುವಿನ ಸಂಕಟದಿಂದಾಗಿ ಉದ್ಭವಿಸಿದ ಆಪತ್ಕಾಲದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪೂಜೆಯನ್ನು ಹೇಗೆ ಮಾಡಬೇಕು ?

ಪ್ರತಿವರ್ಷ ಭಾರತದಲ್ಲಿ ದೇವಸ್ಥಾನಗಳು ಮತ್ತು ಧಾರ್ಮಿಕ ಸಂಸ್ಥೆಗಳಲ್ಲಿ ಶ್ರೀಕೃಷ್ಣಜನ್ಮಾಷ್ಟಮಿಯ ಉತ್ಸವವನ್ನು ದೊಡ್ಡ ಪ್ರಮಾಣದಲ್ಲಿ ಆಚರಿಸಲಾಗುತ್ತದೆ.
ಉತ್ಸವವನ್ನು ಆಚರಿಸುವಾಗ ಪ್ರಾಂತಗಳಿಗನುಸಾರ ಉತ್ಸವವನ್ನು ಆಚರಿಸುವ ಪದ್ಧತಿಯಲ್ಲಿ ಭಿನ್ನತೆ ಇರುತ್ತದೆ. ಉತ್ಸವದ ನಿಮಿತ್ತ ಬಹಳಷ್ಟು ಜನರು ಒಟ್ಟು ಸೇರಿ ಭಕ್ತಿಭಾವದಿಂದ ಈ ಉತ್ಸವವನ್ನು ಆಚರಿಸುತ್ತಾರೆ. ಈ ವರ್ಷ ಕೊರೋನಾ ವಿಷಾಣುಗಳ ಸಂಕಟದಿಂದಾಗಿ ಸಂಚಾರ ಸಾರಿಗೆ ನಿರ್ಬಂಧವಿದ್ದುದರಿಂದ ಮನೆಯಿಂದ ಹೊರಗೆ ಬರಲು ಅನೇಕ ಬಂಧನಗಳಿವೆ.

ಕೊರೋನಾದಂತಹ ಆಪತ್ಕಾಲದ ಹಿನ್ನೆಲೆಯಲ್ಲಿ ಎಲ್ಲರೂ ಸೇರಿ ಈ ಉತ್ಸವವನ್ನು ಆಚರಿಸುವಲ್ಲಿ ಮಿತಿ ಬಂದಿದೆ. ಕೊರೋನಾ ವೈರಾಣುಗಳ ಹರಡುವಿಕೆಯಿಂದಾಗಿ ಎಲ್ಲಿ ಸಂಚಾರಸಾರಿಗೆ ನಿರ್ಬಂಧವಿದೆಯೋ (ಲಾಕ್‌ಡೌನ್) ಅಲ್ಲಿ ಒಟ್ಟಾಗಿ ಸೇರಿ ಪೂಜೆ ಮಾಡುವುದು ಅಸಾಧ್ಯವಿದೆ. ಆದರೆ ಎಲ್ಲಿ ಕೊರೋನಾ ವಿಷಾಣುಗಳ ಹರಡುವಿಕೆ ಕಡಿಮೆಯಿರುವುದರಿಂದ ಸಂಚಾರಸಾರಿಗೆ ನಿರ್ಬಂಧದ ನಿಯಮವು ಕೆಲವು ಪ್ರಮಾಣದಲ್ಲಿ ಸಡಿಲ ಗೊಳಿಸಲಾಗಿದೆಯೋ, ಅಲ್ಲಿ ಸರಕಾರವು ಕೊರೋನಾ ಸಂದರ್ಭದಲ್ಲಿ ಹೇಳಿದ ಮಾರ್ಗದರ್ಶಕ ಅಂಶಗಳನ್ನು ಪಾಲಿಸಿ ಕಡಿಮೆ ಜನರು ಸೇರಿ ಈ ಜನ್ಮೋತ್ಸವವನ್ನು ಆಚರಿಸಬೇಕು. ಇದರಿಂದ ಒಟ್ಟಿಗೆ ಸೇರದಿದ್ದರೂ ನಮ್ಮ ನಮ್ಮ ಮನೆಯಲ್ಲಿಯೇ ಶ್ರೀಕೃಷ್ಣಜನ್ಮಾಷ್ಟಮಿಯ ಪೂಜೆಯನ್ನು ಹೇಗೆ ಮಾಡಬಹುದು ಎಂಬ ಬಗ್ಗೆ ಈ ಲೇಖನದಲ್ಲಿ ಮುಖ್ಯವಾಗಿ ವಿಚಾರ ಮಾಡಲಾಗಿದೆ. ಹಿಂದೂ ಧರ್ಮವು ಹೇಳಿದ ‘ಆಪದ್ಧರ್ಮದ ಭಾಗವೆಂದು ಲೇಖನದಲ್ಲಿ ವಿವೇಚನೆಯನ್ನು ಮಾಡಲಾಗಿದೆ.

ಪ್ರತಿ ವರ್ಷ ಶ್ರೀಕೃಷ್ಣಜನ್ಮಾಷ್ಟಮಿಯ ಉತ್ಸವವನ್ನು ದೊಡ್ಡ ಪ್ರಮಾಣದಲ್ಲಿ ಆಚರಿಸಲಾಗುತ್ತದೆ. ಈ ವರ್ಷ 11.8.2020 ಈ ದಿನದಂದು ‘ಶ್ರೀಕೃಷ್ಣ ಜನ್ಮಾಷ್ಟಮಿ ಇದೆ.

೧. ಶ್ರೀಕೃಷ್ಣನ ಪೂಜೆಯ ಸಮಯ : ಶ್ರೀಕೃಷ್ಣನ ಜನ್ಮದ ಸಮಯವು ರಾತ್ರಿ 12 ಗಂಟೆಗಿರುತ್ತದೆ. ಆದುದರಿಂದ ಅದಕ್ಕೂ ಮೊದಲು ಪೂಜೆಯ ಎಲ್ಲ ತಯಾರಿಯನ್ನು ಮಾಡಿಟ್ಟು ಕೊಳ್ಳಬೇಕು. ರಾತ್ರಿ 12 ಗಂಟೆಗೆ ಸಾಧ್ಯವಿದ್ದರೆ ಶ್ರೀಕೃಷ್ಣಜನ್ಮದ ಜೋಗುಳವನ್ನು (ಹಾಡನ್ನು) ಹಚ್ಚಬೇಕು.

೨. ಶ್ರೀಕೃಷ್ಣನ ಪೂಜೆ

೨ ಅ. ಶ್ರೀಕೃಷ್ಣಜನ್ಮದ ಜೋಗುಳವಾದ ನಂತರ ಶ್ರೀಕೃಷ್ಣನ ಮೂರ್ತಿ ಅಥವಾ ಚಿತ್ರದ ಪೂಜೆಯನ್ನು ಮಾಡಬೇಕು.

೨ ಆ. ಷೋಡಷೋಪಚಾರ ಪೂಜೆ : ಯಾರಿಗೆ ಶ್ರೀಕೃಷ್ಣನ ‘ಷೋಡಷೋಪಚಾರ ಪೂಜೆ’ಯನ್ನು ಮಾಡುವುದು ಸಾಧ್ಯವಿದೆಯೋ, ಅವರು ಷೋಡಷೋಪಚಾರ ಪೂಜೆಯನ್ನು ಮಾಡಬೇಕು.

೨ ಇ. ಪಂಚೋಪಚಾರ ಪೂಜೆ : ಯಾರಿಗೆ ಶ್ರೀಕೃಷ್ಣನ ‘ಷೋಡಷೋಪಚಾರ ಪೂಜೆ’ಯನ್ನು ಮಾಡುವುದು ಸಾಧ್ಯವಿಲ್ಲವೋ, ಅವರು ‘ಪಂಚೋಪಚಾರ ಪೂಜೆ’ಯನ್ನು ಮಾಡಬೇಕು. ಪೂಜೆಯನ್ನು ಮಾಡುವಾಗ ‘ಸಪರಿವಾರಾಯ ಶ್ರೀಕೃಷ್ಣಾಯ ನಮಃ |’ ಈ ನಾಮಮಂತ್ರವನ್ನು ಹೇಳುತ್ತಾ ಒಂದೊಂದು ಉಪಚಾರವನ್ನು ಶ್ರೀಕೃಷ್ಣ ನಿಗೆ ಅರ್ಪಿಸಬೇಕು. ಶ್ರೀಕೃಷ್ಣನಿಗೆ ಮೊಸರವಲಕ್ಕಿ ಮತ್ತು ಬೆಣ್ಣೆಯ ನೈವೇದ್ಯವನ್ನು ತೋರಿಸಬೇಕು. ತದನಂತರ ಶ್ರೀಕೃಷ್ಣನಿಗೆ ಆರತಿಯನ್ನು ಮಾಡಬೇಕು. (ಪಂಚೋಪಚಾರ ಪೂಜೆ : ಗಂಧ, ಅರಿಶಿಣ-ಕುಂಕುಮ, ಪುಷ್ಪ, ಧೂಪ, ದೀಪ ಮತ್ತು ನೈವೇದ್ಯ ಈ ಕ್ರಮದಲ್ಲಿ ಪೂಜೆಯನ್ನು ಮಾಡಬೇಕು.)

೩. ಶ್ರೀಕೃಷ್ಣನ ಮಾನಸಪೂಜೆ
ಏನಾದರೂ ಕಾರಣದಿಂದ ಶ್ರೀಕೃಷ್ಣನ ಪ್ರತ್ಯಕ್ಷ ಪೂಜೆಯನ್ನು ಮಾಡಲು ಸಾಧ್ಯವಿಲ್ಲದಿದ್ದರೆ, ಶ್ರೀಕೃಷ್ಣನ ‘ಮಾನಸಪೂಜೆ’ಯನ್ನು ಮಾಡಬೇಕು. (‘ಮಾನಸಪೂಜೆ’ ಎಂದರೆ ಪೂಜೆಯ ಎಲ್ಲ ಉಪಚಾರಗಳನ್ನು ಮನಸ್ಸಿನಿಂದ ಶ್ರೀಕೃಷ್ಣನಿಗೆ ಅರ್ಪಿಸುವುದು.)

೪. ಪೂಜೆಯ ನಂತರ ನಾಮಜಪ ಮಾಡುವುದು
ಪೂಜೆಯಾದ ನಂತರ ಕೆಲವು ಸಮಯ ಶ್ರೀಕೃಷ್ಣನ ‘ಓಂ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ಓಂ |’ ಈ ನಾಮಜಪವನ್ನು ಮಾಡಬೇಕು.

೫. ‘ಅರ್ಜುನನಂತೆ ಅಪಾರ ಭಕ್ತಿ ನಿರ್ಮಾಣವಾಗಲಿ’, ಎಂದು ಶ್ರೀಕೃಷ್ಣನಿಗೆ ಮನಃಪೂರ್ವಕ ಪ್ರಾರ್ಥನೆ ಮಾಡುವುದು.
ಇದರ ನಂತರ ಶ್ರೀಕೃಷ್ಣನು ಶ್ರೀಮದ್ಭಗವದ್ಗೀತೆ ಯಲ್ಲಿ ನೀಡಿದ ‘ನ ಮೇ ಭಕ್ತಃ ಪ್ರಣಶ್ಯತಿ |’ ಅಂದರೆ ‘ನನ್ನ ಭಕ್ತರ ನಾಶವಾಗುವುದಿಲ್ಲ.’ ಈ ವಚನವನ್ನು ಸ್ಮರಿಸಿ ನಮ್ಮಲ್ಲಿ ‘ಅರ್ಜುನನಂತೆ ಅಪಾರ ಭಕ್ತಿ ನಿರ್ಮಾಣವಾಗಲಿ’, ಎಂದು ಶ್ರೀಕೃಷ್ಣನಿಗೆ ಮನಃಪೂರ್ವಕ ಪ್ರಾರ್ಥನೆಯನ್ನು ಮಾಡಬೇಕು.

ಸೌಜನ್ಯ : ಸನಾತನ ಸಂಸ್ಥೆ

Spread the love
  • Related Posts

    ಬೆಳ್ತಂಗಡಿ ತಾಲೂಕಿನಾದ್ಯಂತ ಗುಡುಗು-ಸಿಡಿಲು ಸಹಿತ ಮಳೆ: ನಿಡ್ಲೆ–ಕಳೆಂಜ ರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ಲೈನ್ ಹಾನಿ

    Belthangady: ತಾಲೂಕಿನ ಹಲವೆಡೆ ಶನಿವಾರ ಸಂಜೆ ಉತ್ತಮ ಮಳೆಯಾಗಿದೆ.Shishila, Kokkada, Dharmasthala, Arasinamakki, Ujire ಹಾಗೂ Nidle ಮೊದಲಾದ ಕಡೆಗಳಲ್ಲಿ ಗುಡುಗು-ಸಿಡಿಲು ಸಹಿತ ಉತ್ತಮ ಮಳೆ ಸುರಿದಿದೆ. ಉಳಿದ ಕೆಲವು ಪ್ರದೇಶಗಳಲ್ಲಿ ತುಂತುರು ಹಾಗೂ ಸಾಮಾನ್ಯ ಮಳೆಯಾಗಿದೆ.ತಾಲೂಕಿನಲ್ಲಿ ಫೆಬ್ರವರಿ 21ರಂದು ಕೆಲವೆಡೆ…

    Spread the love

    “ಬಂಗಾಡಿ ಕೊಲ್ಲಿ” 28ನೇ ವರ್ಷದ ‘ಸೂರ್ಯ – ಚಂದ್ರ’ ಜೋಡುಕರೆ ಕಂಬಳ

    ಬಂಗಾಡಿ: ಸೂರ್ಯ-ಚಂದ್ರ ಹೋಡುಕರೆ ಕಂಬಳ ಸಮಿತಿ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಶನ್, ಕರ್ನಾಟಕ ಸರಕಾರ ಮತ್ತು ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಭಾಗಿತ್ವದೊಂದಿಗೆ 28ನೇ ವರ್ಷದ ಹೊನಲು ಬೆಳಕಿನ ಸೂರ್ಯ-ಚಂದ್ರ ಜೋಡುಕರೆ “ಬಂಗಾಡಿ ಕೊಲ್ಲಿ” ಬಯಲು ಕಂಬಳವು ಶ್ರೀ…

    Spread the love

    You Missed

    ಬೆಳ್ತಂಗಡಿ ತಾಲೂಕಿನಾದ್ಯಂತ ಗುಡುಗು-ಸಿಡಿಲು ಸಹಿತ ಮಳೆ: ನಿಡ್ಲೆ–ಕಳೆಂಜ ರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ಲೈನ್ ಹಾನಿ

    • By admin
    • March 15, 2026
    • 63 views
    ಬೆಳ್ತಂಗಡಿ ತಾಲೂಕಿನಾದ್ಯಂತ ಗುಡುಗು-ಸಿಡಿಲು ಸಹಿತ ಮಳೆ: ನಿಡ್ಲೆ–ಕಳೆಂಜ ರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ಲೈನ್ ಹಾನಿ

    “ಬಂಗಾಡಿ ಕೊಲ್ಲಿ” 28ನೇ ವರ್ಷದ ‘ಸೂರ್ಯ – ಚಂದ್ರ’ ಜೋಡುಕರೆ ಕಂಬಳ

    • By admin
    • March 14, 2026
    • 102 views
    “ಬಂಗಾಡಿ ಕೊಲ್ಲಿ” 28ನೇ ವರ್ಷದ ‘ಸೂರ್ಯ – ಚಂದ್ರ’ ಜೋಡುಕರೆ ಕಂಬಳ

    ಹಾವು ಕಡಿತಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರೆಗುಡ್ಡೆಯ ಮಹೇಶ್ ಮನೆಗೆ ಡಿ.ಕಿರಣ್ ಚಂದ್ರ ಪುಷ್ಪಗಿರಿ ಭೇಟಿ

    • By admin
    • March 14, 2026
    • 43 views
    ಹಾವು ಕಡಿತಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರೆಗುಡ್ಡೆಯ ಮಹೇಶ್ ಮನೆಗೆ  ಡಿ.ಕಿರಣ್ ಚಂದ್ರ ಪುಷ್ಪಗಿರಿ ಭೇಟಿ

    KSRTC ಬಸ್ ಹಾಗೂ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಮೂವರು ಸಾವು

    • By admin
    • March 13, 2026
    • 610 views
    KSRTC ಬಸ್ ಹಾಗೂ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಮೂವರು ಸಾವು

    ಎಕ್ಸೆಲ್ ಪಿ.ಯು ಕಾಲೇಜಿನಲ್ಲಿ ಎಲೆಕ್ಟ್ರಿಷಿಯನ್ ಮತ್ತು ಪ್ಲಂಬರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

    • By admin
    • March 10, 2026
    • 150 views
    ಎಕ್ಸೆಲ್ ಪಿ.ಯು ಕಾಲೇಜಿನಲ್ಲಿ ಎಲೆಕ್ಟ್ರಿಷಿಯನ್ ಮತ್ತು ಪ್ಲಂಬರ್ ಹುದ್ದೆಗಳಿಗೆ  ಅರ್ಜಿ ಆಹ್ವಾನ

    ಗುರುವಾಯನಕೆರೆ ಎಕ್ಸೆಲ್ ಟೆಕ್ ಶಾಲೆಯಲ್ಲಿ ಕೆ.ಜಿ ಮಕ್ಕಳ ಘಟಿಕೋತ್ಸವ

    • By admin
    • March 10, 2026
    • 63 views
    ಗುರುವಾಯನಕೆರೆ ಎಕ್ಸೆಲ್ ಟೆಕ್ ಶಾಲೆಯಲ್ಲಿ ಕೆ.ಜಿ ಮಕ್ಕಳ ಘಟಿಕೋತ್ಸವ