ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲ್ಲೂಕಿನ ಆನೂರು ಕಾರ್ಯಕ್ಷೇತ್ರ ವ್ಯಾಪ್ತಿಯಲ್ಲಿ covid ತುರ್ತು ಪರಿಸ್ಥಿತಿಯಲ್ಲಿ ಆರ್ಥಿಕವಾಗಿ ತೀರಾ ಹಿಂದುಳಿದ ಆಯ್ದ ಫಲಾನುಭವಿಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಹಾರ ದಿನಸಿ ಕಿಟ್ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲೆಯ ನಿರ್ದೇಶಕರಾದ ಶ್ರೀ ಪ್ರಶಾಂತ್ ಕುಮಾರ್ ಅವರು ಸಂಸ್ಥೆ ಮೂಲಕ ಪೂಜ್ಯರು ಸಮುದಾಯಕ್ಕೆ ನೀಡುತ್ತಿರುವ ಹಲವಾರು ಯೋಜನೆಗಳ (ಮಾಶಾಸನ, ಜನಮಂಗಳ ಯೋಜನೆಯಡಿ ವಿಕಲಚೇತರಿಗೆ ಉಪಕರಣಗಳ ಒದಗಣೆ ಇತರೆ) ಬಗ್ಗೆ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಆನೂರು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಕಾತ್ಯಾಯಿನಿ, ತಾಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್,ಪಂಚಾಯ್ತಿ ಸದಸ್ಯರಾದ ಶ್ರೀ ವಿಶ್ವಾಸ್,ಶ್ರೀಮತಿ ಲತಾ, ಮೇಲ್ವಿಚಾರಕರಾದ ನವೀನ್ , ಸ್ಥಳೀಯ ಸೇವಾಪ್ರತಿನಿಧಿ ಸಾವಿತ್ರಿ, ಮುನಿರತ್ನ ಇತರರು ಉಪಸ್ಥಿತರಿದ್ದರು.