ಬಳಂಜದಲ್ಲಿ ಭಕ್ತಿಭಾವದಿಂದ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನ

ಬೆಳ್ತಂಗಡಿ: ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಶ್ರೀಮತಿ ಮಿನಾಕ್ಷಿ ಮತ್ತು ಸಾಂತಪ್ಪ ಸುವರ್ಣ ಕುಟುಂಬಸ್ಥರ ಹರಕೆಯ ಸೇವಾರ್ಥವಾಗಿ ‘ಶ್ರೀ ದೇವಿ ಮಹಾತ್ಮ’ ಎಂಬ ಪೌರಾಣಿಕ ಕಥಾ ಭಾಗವು ಏ.13ರಂದು ಬಳಂಜದ ಸುವರ್ಣ ನಿಲಯದಲ್ಲಿ ಜರುಗಿತು.

ಸಂಜೆ ಚೌಕಿಯಲ್ಲಿ ಶ್ರೀ ದೇವಿಯ ಮಹಾಪೂಜೆ ನೆರವೇರಿದ ಬಳಿಕ ವಿದ್ಯುತ್ ದೀಪಾಂಕೃತ ರಂಗಸ್ಥಳದಲ್ಲಿ ಶ್ರೀ ದೇವಿ ಮಹಾತ್ಮ ಕಥಾಭಾಗವು ಪ್ರದರ್ಶನಗೊಳ್ಳವುದರ ಮೂಲಕ ಯಕ್ಷಗಾನ ಕಲಾಪ್ರೇಮಿಗಳಿಗೆ ರಸದೌತಣ ನೀಡಿತು. ರಾತ್ರಿ ಯಕ್ಷಗಾನವನ್ನು ವೀಕ್ಷಿಸುವುದಕ್ಕೆ ಬಂದಂತಹ ಸರ್ವರಿಗೂ ಅನ್ನಸಂತರ್ಪಣೆ ನಡೆಯಿತು.

ಶಾಸಕ ಹರೀಶ್ ಪೂಂಜ, ಅಳದಂಗಡಿ ಶ್ರೀ ಸತ್ಯದೇವತಾ ದೇವಸ್ಥಾನದ ಆಡಳಿತದಾರ ಶಿವಪ್ರಸಾದ್‌ ಅಜಿಲ, ಉದ್ಯಮಿ ರಾಜೇಶ್ ಶೆಟ್ಟಿ ನವಶಕ್ತಿ, ಮೇಲಂತಬೆಟ್ಟು ಭಗವತಿ ದೇವಸ್ಥಾನದ ಆಡಳಿತ ಮೊಕೇಸರ ಯೋಗೀಶ್ ಹಾಗೂ ವಿವಿಧ ಕ್ಷೇತ್ರದ ಗಣ್ಯರು, ಬಂಧು, ಬಳಗದವರು, ಊರವರು, ಇತರರು ಉಪಸ್ಥಿತರಿದ್ದು ದೇವರ ಪ್ರಸಾದ ಸ್ವೀಕರಿಸಿದರು.

ಯಕ್ಷಗಾನ ಮೊದಲು ಬಳಂಜ ಸುವರ್ಣ ನಿಲಯದಲ್ಲಿ ದೇವರಿಗೆ ಪೂಜೆ ಸಲ್ಲಿಸಿ,ಮೆರವಣಿಗೆ ಮೂಲಕ ರಂಗಸ್ಥಳಕ್ಕೆ ಆಗಮಿಸಲಾಯಿತು. ನಾಲ್ಕು ಭಜನಾ ತಂಡಗಳನ್ನು ಗೌರವಿಸಲಾಯಿತು.ಸಾವಿರಕ್ಕೂ ಅಧಿಕ ಕಲಾಭಿಮಾನಿಗಳು ಭಾಗವಹಿಸಿದರು.

ಶ್ರೀಮತಿ ಮೀನಾಕ್ಷಿ-ಸಾಂತಪ್ಪ ಸುವರ್ಣ, ಮಧುಕ‌ರ್, ಮನೋಹ‌ರ್ ಬಳಂಜ,ಮಹೇಂದ್ರ ಹಾಗೂ ಮನೆಯವರು ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ, ಸತ್ಕರಿಸಿದರು.

Spread the love
  • Related Posts

    ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ವಾರ್ಷಿಕ ಮಹಾಸಭೆ ಆ.29ರಂದು ನಡೆಯಲಿದೆ. ಶೇ.70ಕ್ಕಿಂತ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

    ಬಂಗಾಡಿ, ಆ.7: ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘ (ನಿ.) ಬಂಗಾಡಿಯ 2025–26ನೇ ಸಾಲಿನ ವಾರ್ಷಿಕ ಮಹಾಸಭೆಯು ಆಗಸ್ಟ್ 29, 2026ರ ಶನಿವಾರ ಬೆಳಿಗ್ಗೆ 9.30 ಗಂಟೆಗೆ ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ. ಸಂಘದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯವರು…

    Spread the love

    “ಶಿಕ್ಷಣದ ಹೆಮ್ಮೆಗೆ ಡ್ರಗ್ಸ್ ಕರಿನೆರಳು: ಎಚ್ಚೆತ್ತುಕೊಳ್ಳಬೇಕಿದೆ ಬೆಳ್ತಂಗಡಿಯ ಜನತೆ!!!”

    🖊️• ವರದಿ: ರಾಜೇಶ್ ಎಂ ಕಾನರ್ಪ ಬೆಳ್ತಂಗಡಿಯ ಶೈಕ್ಷಣಿಕ ಘನತೆಗೆ ಕಪ್ಪುಚುಕ್ಕೆಯಾಗುತ್ತಿರುವ ಮಾದಕ ದ್ರವ್ಯ ಜಾಲ: ಈಗಲೇ ಎಚ್ಚೆತ್ತುಕೊಳ್ಳಬೇಕಾದ ಸಮಯ ಒಂದು ಕಾಲದಲ್ಲಿ ಶಿಕ್ಷಣ, ಸಂಸ್ಕಾರ ಮತ್ತು ಶಾಂತಿಯ ನೆಲವೆಂದು ಗುರುತಿಸಿಕೊಂಡಿದ್ದ ಬೆಳ್ತಂಗಡಿ ತಾಲೂಕು ಇಂದು ರಾಜ್ಯದ ಶೈಕ್ಷಣಿಕ ನಕ್ಷೆಯಲ್ಲಿ ತನ್ನದೇ…

    Spread the love

    You Missed

    ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ವಾರ್ಷಿಕ ಮಹಾಸಭೆ ಆ.29ರಂದು ನಡೆಯಲಿದೆ. ಶೇ.70ಕ್ಕಿಂತ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

    • By admin
    • August 7, 2026
    • 3 views
    ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ವಾರ್ಷಿಕ ಮಹಾಸಭೆ ಆ.29ರಂದು ನಡೆಯಲಿದೆ. ಶೇ.70ಕ್ಕಿಂತ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

    “ಶಿಕ್ಷಣದ ಹೆಮ್ಮೆಗೆ ಡ್ರಗ್ಸ್ ಕರಿನೆರಳು: ಎಚ್ಚೆತ್ತುಕೊಳ್ಳಬೇಕಿದೆ ಬೆಳ್ತಂಗಡಿಯ ಜನತೆ!!!”

    • By admin
    • August 6, 2026
    • 9 views
    “ಶಿಕ್ಷಣದ ಹೆಮ್ಮೆಗೆ ಡ್ರಗ್ಸ್ ಕರಿನೆರಳು: ಎಚ್ಚೆತ್ತುಕೊಳ್ಳಬೇಕಿದೆ ಬೆಳ್ತಂಗಡಿಯ ಜನತೆ!!!”

    ಸಕಲೇಶಪುರ: ಬಾಳುಪೇಟೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

    • By admin
    • August 6, 2026
    • 5 views
    ಸಕಲೇಶಪುರ: ಬಾಳುಪೇಟೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

    ಬೆಸ್ಟ್ ಎಂಎಲ್ಎ ಪ್ರಶಸ್ತಿ ಪುರಸ್ಕೃತ ಶಾಸಕ ಹರೀಶ್ ಪೂಂಜರಿಗೆ ಬಿಜೆಪಿ ಮೋರ್ಚಾಗಳಿಂದ ಅಭಿನಂದನೆ

    • By admin
    • August 6, 2026
    • 7 views
    ಬೆಸ್ಟ್ ಎಂಎಲ್ಎ ಪ್ರಶಸ್ತಿ ಪುರಸ್ಕೃತ ಶಾಸಕ ಹರೀಶ್ ಪೂಂಜರಿಗೆ ಬಿಜೆಪಿ ಮೋರ್ಚಾಗಳಿಂದ ಅಭಿನಂದನೆ

    ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಿ: ಶಾಸಕ ಹರೀಶ್ ಪೂಂಜ ಕರೆ

    • By admin
    • August 6, 2026
    • 5 views
    ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಿ: ಶಾಸಕ ಹರೀಶ್ ಪೂಂಜ ಕರೆ

    ಮೀನುಗಾರರ ಬದುಕಲ್ಲಿ ಪವಾಡ – ಧರ್ಮಸ್ಥಳ ಮಂಜುನಾಥ ಸ್ವಾಮಿಗೆ 770 ಗ್ರಾಂ ಬೆಳ್ಳಿಯ ಬೆಳ್ಳಿಯ ‘ರಾಣಿ ಮೀನು’ ಹಾರ ಅರ್ಪಣೆ

    • By admin
    • August 4, 2026
    • 6 views
    ಮೀನುಗಾರರ ಬದುಕಲ್ಲಿ ಪವಾಡ – ಧರ್ಮಸ್ಥಳ ಮಂಜುನಾಥ ಸ್ವಾಮಿಗೆ 770 ಗ್ರಾಂ ಬೆಳ್ಳಿಯ ಬೆಳ್ಳಿಯ ‘ರಾಣಿ ಮೀನು’ ಹಾರ ಅರ್ಪಣೆ