ಕಲ್ಚೆರ್ಪೆ ಗ್ರಾಮದಲ್ಲಿ ಬಾವಿಗೆ ಬಿದ್ದಿದ್ದ ಕಾಡಾನೆಯ ರಕ್ಷಣಾಕಾರ್ಯ ಯಶಸ್ವಿ

ಸುಳ್ಯ: ಸುಳ್ಯ ತಾಲೂಕು ಕಲ್ಚೆರ್ಪೆ ಗ್ರಾಮದಲ್ಲಿ ಬಾವಿಗೆ ಬಿದ್ದಿದ್ದ ಕಾಡಾನೆಯನ್ನು ಯಶಸ್ವಿಯಾಗಿ ರಕ್ಷಿಸಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ರಕ್ಷಣೆ ಬಳಿಕ ಕಾಡಾನೆ ಜನವಸತಿ ಪ್ರದೇಶದತ್ತ ದೌಡಾಯಿಸಿದ್ದು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ನಿನ್ನೆ ರಾತ್ರಿ ಕಲ್ಚೆರ್ಪೆಯ ಪ್ರಜ್ವಲ್ ಎಂಬವರ ಬಾವಿಗೆ ಕಾಡಾನೆ ಬಿದ್ದಿರುವ ಮಾಹಿತಿ ದೊರಕುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆ ಆರಂಭಿಸಿದ್ದರು.

ಇಂದು ಬೆಳಿಗ್ಗೆ ಸುಮಾರು 8 ಗಂಟೆಗೆ ಜೆಸಿಬಿ ಯಂತ್ರದ ಸಹಾಯದಿಂದ ಬಾವಿಯ ಬಳಿ ಅಗಲು ತೋಡುವ ಕಾರ್ಯ ಆರಂಭಿಸಲಾಯಿತು. ಸುಮಾರು ಮಧ್ಯಾಹ್ನ 12.50ರ ವೇಳೆಗೆ ಕಾಡಾನೆ ಬಾವಿಯಿಂದ ಮೇಲೆದ್ದು ಹೊರಬಂದಿದ್ದು, ನಂತರ ಜನವಸತಿ ಪ್ರದೇಶದತ್ತ ಓಡಿದ ಘಟನೆ ನಡೆದಿದೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ಜೆಸಿಬಿ ಯಂತ್ರವನ್ನು ಲಕ್ಷ್ಮೀ ಪ್ರಸಾದ್ ತೊಡಿಕಾನ ಹಾಗೂ ತೇಜಸ್ ಚೆಮ್ನೂರು ನಿರ್ವಹಿಸಿದರು. ಅರಣ್ಯ ಇಲಾಖೆಯ ಸಿಸಿಎಫ್ ಕರಿಕಾಳನ್, ಡಿಎಫ್‌ಒ ಆಂಥೋನಿ ಎಸ್. ಮರಿಯಪ್ಪ, ಎಸಿಎಫ್ ಪ್ರಶಾಂತ್ ಪೈ, ಪುತ್ತೂರು ಎಸಿಎಫ್ ಸುಬ್ಬಯ್ಯ ನಾಯ್ಕ್, ರೇಂಜರ್‌ಗಳಾದ ಕಿರಣ್, ವಿಮಲ್ ಬಾಬು ಹಾಗೂ ಇತರ ಸಿಬ್ಬಂದಿಗಳು ಭಾಗವಹಿಸಿದ್ದರು. ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳೂ ಸಹಕರಿಸಿದರು.

Spread the love
  • Related Posts

    ಬೆಳ್ತಂಗಡಿ : ಅತಿ ಹಿಂದುಳಿದ ಮಠಾಧೀಶರ ಮಹಾಸಭಾವತಿಯಿಂದ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಭೇಟಿ

    ಬೆಳ್ತಂಗಡಿ: ಇತ್ತೀಚಿನ ದಿನಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ವಿರುದ್ಧ ಕೇಳಿಬರುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ಅತಿ ಹಿಂದುಳಿದ ಮಠಾಧೀಶರ ಮಹಾಸಭೆ (ರಿ.) ಕೋರ್ ಕಮಿಟಿಯ ಸದಸ್ಯರಾದ ಸ್ವಾಮೀಜಿಗಳು ಧರ್ಮಸ್ಥಳಕ್ಕೆ ಜು.10 ರಂದು ಭೇಟಿ ನೀಡಿ,…

    Spread the love

    ಬೆಳ್ತಂಗಡಿ ತಹಶೀಲ್ದಾರ್ ಆಗಿ ಎಸ್.ಎನ್.ನರಗುಂದ ಅಧಿಕಾರ ಸ್ವೀಕಾರ

    ಬೆಳ್ತಂಗಡಿ : ತಹಶೀಲ್ದಾರ್ ಪೃಥ್ವಿ ಸಾನಿಕಂ ವರ್ಗಾವಣೆಯಾದ ಜಾಗಕ್ಕೆ ಹೊಸ ತಹಶೀಲ್ದಾರ್ ಆಗಿ ಎಸ್.ಎನ್.ನರಗುಂದ ಅವರನ್ನು ಸರಕಾರ ನೇಮಕ ಮಾಡಿ ಜು.2 ರಂದು ಆದೇಶ ಹೊರಡಿಸಿತ್ತು.‌ ಇದೀಗ ಮೈಸೂರು ಜಿಲ್ಲೆಯ ಅಭಿವೃದ್ಧಿ ಪ್ರಾಧಿಕಾರದ ವಿಶೇಷ ಗ್ರೇಡ್-1 ತಹಶೀಲ್ದಾರ್ ಆಗಿರುವ ಎಸ್.ಎನ್.ನರಗುಂದ ಅವರು…

    Spread the love

    You Missed

    ಚಿರಂಜೀವಿ ಯುವಕ ಮಂಡಲ(ರಿ), ಕಾನರ್ಪ ಇದರ 35ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

    • By admin
    • July 16, 2026
    • 6 views
    ಚಿರಂಜೀವಿ ಯುವಕ ಮಂಡಲ(ರಿ), ಕಾನರ್ಪ ಇದರ 35ನೇ ವರ್ಷದ  ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

    ಬಂಟ್ವಾಳದಲ್ಲಿ ಬೆಚ್ಚಿಬೀಳಿಸಿದ ಭೀಕರ ಹತ್ಯೆ: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲೇ ಯುವತಿ ಕೊಲೆ, ಆರೋಪಿ ಪರಾರಿ

    • By admin
    • July 16, 2026
    • 9 views
    ಬಂಟ್ವಾಳದಲ್ಲಿ ಬೆಚ್ಚಿಬೀಳಿಸಿದ ಭೀಕರ ಹತ್ಯೆ: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲೇ ಯುವತಿ ಕೊಲೆ, ಆರೋಪಿ ಪರಾರಿ

    “ರೀಚಾರ್ಜ್ ಇಲ್ಲದೆ ಆರಿದ ಹೆದ್ದಾರಿ ದಾರಿದೀಪಗಳು; ಪೋಸ್ಟ್‌ಪೇಯ್ಡ್ ಮೀಟರ್‌ಗೆ ಮನವಿ” ಹೆದ್ದಾರಿ ಬದಿ ದಾರಿದೀಪಕ್ಕೆ ಪ್ರೀ-ಪೇಯ್ಡ್ ರೀಚಾರ್ಜ್: ಕತ್ತಲಲ್ಲಿ ದಾರಿಹೋಕರ ಪರದಾಟ

    • By admin
    • July 15, 2026
    • 9 views
    “ರೀಚಾರ್ಜ್ ಇಲ್ಲದೆ ಆರಿದ ಹೆದ್ದಾರಿ ದಾರಿದೀಪಗಳು; ಪೋಸ್ಟ್‌ಪೇಯ್ಡ್ ಮೀಟರ್‌ಗೆ ಮನವಿ” ಹೆದ್ದಾರಿ ಬದಿ ದಾರಿದೀಪಕ್ಕೆ ಪ್ರೀ-ಪೇಯ್ಡ್ ರೀಚಾರ್ಜ್: ಕತ್ತಲಲ್ಲಿ ದಾರಿಹೋಕರ ಪರದಾಟ

    ಬಿ.ಟಿ. ರಂಜನ್ ವಾರ್ಷಿಕ ಪ್ರಶಸ್ತಿಗೆ ಅರವಿಂದ ಹೆಬ್ಬಾರ್ ಮುಂಡಾಜೆ ಆಯ್ಕೆ

    • By admin
    • July 15, 2026
    • 16 views
    ಬಿ.ಟಿ. ರಂಜನ್ ವಾರ್ಷಿಕ ಪ್ರಶಸ್ತಿಗೆ ಅರವಿಂದ ಹೆಬ್ಬಾರ್ ಮುಂಡಾಜೆ ಆಯ್ಕೆ

    ಮಾರುವೇಷ ಯಾಕೆ ಸ್ವಾಮಿ.. ಇದು ಚಿಲ್ಲರೆ ಕಾಲವಲ್ಲ, ಕ್ಯೂಆರ್ ಕೋಡ್ ಕಾಲ: ಸಚಿವ ಸುರೇಶ್‌ಗೆ ಶಾಸಕ ಸುರೇಶ್ ಕುಮಾರ್ ಪಾಠ

    • By admin
    • July 13, 2026
    • 10 views
    ಮಾರುವೇಷ ಯಾಕೆ ಸ್ವಾಮಿ.. ಇದು ಚಿಲ್ಲರೆ ಕಾಲವಲ್ಲ, ಕ್ಯೂಆರ್ ಕೋಡ್ ಕಾಲ: ಸಚಿವ ಸುರೇಶ್‌ಗೆ ಶಾಸಕ ಸುರೇಶ್ ಕುಮಾರ್ ಪಾಠ

    ನಾರಾವಿ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆ ಹಾಗೂ ಹಳೆಕೋಟೆ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ತಲಾ ರೂ.2 ಕೋಟಿ; ಸರ್ಕಾರಕ್ಕೆ ಶಾಸಕ ಹರೀಶ್ ಪೂಂಜ ಕೃತಜ್ಞತೆ.

    • By admin
    • July 12, 2026
    • 16 views
    ನಾರಾವಿ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆ ಹಾಗೂ ಹಳೆಕೋಟೆ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ತಲಾ ರೂ.2 ಕೋಟಿ; ಸರ್ಕಾರಕ್ಕೆ ಶಾಸಕ ಹರೀಶ್ ಪೂಂಜ ಕೃತಜ್ಞತೆ.