ಬಂಗಾಲದ ಪ್ರಖರ ಹಿಂದುತ್ವನಿಷ್ಠ ನಾಯಕ ತಪನ ಘೋಷ ಇವರಿಗೆ ದೇಶದಾದ್ಯಂತದ ಹಿಂದುತ್ವನಿಷ್ಠ ಮುಖಂಡರಿಂದ ಶ್ರದ್ಧಾಂಜಲಿ

ಬೆಂಗಳೂರು: ಬಂಗಾಲದ ಪ್ರಖರ ಹಿಂದುತ್ವನಿಷ್ಠ ಮುಖಂಡ ಹಾಗೂ ‘ಹಿಂದೂ ಸಂಹತಿ’ ಈ ಸಂಘಟನೆಯ ಸಂಸ್ಥಾಪಕರು ಹಾಗೂ ‘ಸಿಂಹ ವಾಹಿನಿ’ಯ ಸಂಸ್ಥಾಪಕ ಅಧ್ಯಕ್ಷ ಶ್ರೀ. ತಪನ ಘೋಷ ಇವರು (೬೭ ವರ್ಷ) ಇವರು ಜುಲೈ ೧೨ ರಂದು ಕೊರೊನಾ ಸೋಂಕಿನಿಂದಾಗಿ ನಿಧನರಾದರು.

ತಪನದಾ ಇವರು ಬಂಗಾಲದ ಹಿಂದೂಗಳಿಗೆ ದೊಡ್ಡ ಆಧಾರಸ್ತಂಭವಾಗಿದ್ದರು. ತಪನದಾ ಇವರ ಸ್ಮರಣೆ ಹಾಗೂ ಗುಣವೈಶಿಷ್ಟ್ಯಗಳಿಗೆ ಬೆಳಕು ಚೆಲ್ಲುತ್ತಾ ಅವರ ಧರ್ಮರಕ್ಷಣೆಯ ಮತ್ತು ಹಿಂದೂಸಂಘಟನೆಯ ಕಾರ್ಯವನ್ನು ಸಮರ್ಥವಾಗಿ ಮುಂದೆ ಕೊಂಡೊಯ್ಯುವುದಾಗಿ ದೇಶದಾದ್ಯಂತ ಹಿಂದುತ್ವನಿಷ್ಠ ಮುಖಂಡರು ಆನ್‌ಲೈನ್ ಶ್ರದ್ಧಾಂಜಲಿ ಸಭೆಯಲ್ಲಿ ನಿರ್ಧಾರ ಕೈಗೊಂಡರು. ಘೋಷ ಇವರಿಗೆ ಶ್ರದ್ಧಾಂಜಲಿಯನ್ನು ನೀಡಲು ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಜುಲೈ ೧೬ ರಂದು ಆಯೋಜಿಸಲಾಗಿದ್ದ ಸಭೆಯಲ್ಲಿ ಹಿಂದುತ್ವನಿಷ್ಠರು ಮಾತನಾಡುತ್ತಿದ್ದರು. ಈ ಸಮಯದಲ್ಲಿ ಅವರ ಕಾರ್ಯದ ಧ್ವನಿಚಿತ್ರಮುದ್ರಿಕೆಯನ್ನು ಎಲ್ಲರಿಗೆ ತೋರಿಸಲಾಯಿತು.

ಈ ವೇಳೆ ಮಾತನಾಡಿದ ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಶ್ರೀ.ಪ್ರಮೋದ ಮುತಾಲಿಕರು, ‘ಬಂಗಾಲದ ಹಿಂದೂ ವಿರೋಧಿ ಪರಿಸ್ಥಿತಿಯಲ್ಲಿ ಶ್ರೀ. ತಪನ ಘೋಷ ಇವರು ಮಾಡಿದ ಹಿಂದೂ ಸಂಘಟನೆಯ ಕಾರ್ಯವು ಪ್ರೇರಣಾದಾಯಕವಾಗಿದೆ’ ಎಂದರು.

ಭಾಜಪದ ತೆಲಂಗಾಣದ ಶಾಸಕ ಶ್ರೀ. ಟಿ. ರಾಜಾಸಿಂಹರು ತಮ್ಮ ಮನೋಗತದಲ್ಲಿ, ‘ತಪನ ಘೋಷ ಇವರು ಬಂಗಾಲದಲ್ಲಿ ಹಿಂದುತ್ವಕ್ಕಾಗಿ ಪ್ರತಿಕೂಲ ವಾತಾವರಣವಿರುವಾಗಲೂ ಅಲ್ಲಿ ಹಿಂದುತ್ವದ ಪತಾಕೆಯನ್ನು ಹಾರಿಸಿದರು. ಅವರ ಹಿಂದುತ್ವದ ಕಾರ್ಯವನ್ನು ಮುಂದೆ ಕೊಂಡೊಯ್ಯುವುದು ಈಗ ನಮ್ಮ ಜವಾಬ್ದಾರಿಯಾಗಿದೆ’ ಎಂದು ತಿಳಿಸಿದರು.


ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆ ಇವರು ಮಾತನಾಡುತ್ತಾ, ‘ಹಿಂದುತ್ವಕ್ಕಾಗಿ ಸಂಪೂರ್ಣ ಜೀವನವನ್ನು ಸಮರ್ಪಿಸಿದ ತಪನ ಘೋಷರು ಹಿಂದುತ್ವನಿಷ್ಠರಿಗೆ ಸ್ಫೂರ್ತಿಯ ಸೆಲೆಯಾಗಿದ್ದರು. ಅವರು ಧರ್ಮಕ್ಕಾಗಿ ಸಮರ್ಪಣಾಭಾವದಿಂದ ಕಾರ್ಯ ಮಾಡುವ ಅನೇಕ ಹಿಂದುತ್ವನಿಷ್ಠರನ್ನು ತಯಾರಿಸಿದರು’, ಎಂದರು.

ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ ರಾಜಹಂಸ ಇವರು ಮಾತನಾಡುತ್ತಾ, ‘ತಪನಜಿಯವರು ಯಾವಾಗಲೂ ‘ಹಿಂದೂಗಳಿಗಾಗಿ ಸಂಘರ್ಷ ಒಂದೇ ಆಶಾಕಿರಣವಾಗಿದೆ’ ಎನ್ನುತ್ತಿದ್ದರು. ಅವರ ತತ್ತ್ವಜ್ಞಾನವನ್ನು ಕೃತಿಯಲ್ಲಿ ತರುವುದೇ ಅವರಿಗೆ ಅರ್ಪಿಸುವ ನಿಜವಾದ ಶ್ರದ್ಧಾಂಜಲಿಯಾಗಿದೆ’ ಎಂದರು.

ತಪನ ಘೋಷರ ಕಾರ್ಯದ ಉತ್ತರಾಧಿಕಾರಿ ಶ್ರೀ.ಪ್ರಕಾಶ ದಾಸರು ಮಾತನಾಡುತ್ತಾ, ‘ಕಾಶ್ಮೀರದ ಹಿಂದೂಗಳ ಸ್ಥಳಾಂತರವನ್ನು ಸರಕಾರಕ್ಕೆ ತಡೆಗಟ್ಟಲಾಗದಿರುವಾಗ ದೆಹಲಿಯಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಬಂಗಾಲದ ಹಿಂದೂಗಳನ್ನು ಯಾರು ಕಾಪಾಡುವರು ? ಈ ವಿಚಾರವನ್ನು ಇಟ್ಟುಕೊಂಡು ತಪನದಾ ಇವರು, ಬಂಗಾಲದಲ್ಲಿ ‘ಹಿಂದೂ ಸಂಹತಿ’ ಸಂಘಟನೆಯ ಸ್ಥಾಪನೆಯನ್ನು ಮಾಡಿದರು. ಇಲ್ಲಿ ಹಿಂದುತ್ವದ ಧ್ವನಿಯನ್ನು ಬಲಗೊಳಿಸಿದರು. ಬಂಗಾಲದಲ್ಲಿ ಪೀಡಿತ ಹಿಂದೂಗಳ ರಕ್ಷಣೆಯನ್ನು ಮಾಡುವುದರ ಜೊತೆಗೆ ಅಲ್ಲಿನ ಸಾಮಾನ್ಯ ಹಿಂದೂಗಳಲ್ಲಿ ಅವರು ಉತ್ಸಾಹವನ್ನು ತುಂಬಿದರು. ಅವರ ಧರ್ಮರಕ್ಷಣೆಯ ಕನಸನ್ನು ನನಸಾಗಿಸಲು ನಾವು ಕಾರ್ಯನಿರತರಾಗುವೆವು ಎಂದರು.

‘ರೂಟ್ಸ್ ಇನ್ ಕಾಶ್ಮೀರ’ ನ ಸಹಸಂಸ್ಥಾಪಕ ಶ್ರೀ.ಸುಶೀಲ ಪಂಡಿತರು ತಮ್ಮ ಮನೋಗತವನ್ನು ವ್ಯಕ್ತಪಡಿಸುತ್ತಾ, ‘ತಪನ ಘೋಷರು ಹಿಂದುತ್ವಕ್ಕಾಗಿ ಪ್ರಾಮಾಣಿಕ, ಧ್ಯೇಯನಿಷ್ಠ, ಸಂವೇದನಾಶೀಲ,ಕರ್ತವ್ಯನಿಷ್ಠ ಮತ್ತು ಋಷಿಸಮಾನ ವ್ಯಕ್ತಿತ್ವವನ್ನು ಹೊಂದಿದ್ದರು’ ಎಂದರು.

ಈ ಸಮಯದಲ್ಲಿ ಬಂಗಾಲದ ಭಾರತ ಸೇವಾಶ್ರಮದ ಸಂಘದ ಸ್ವಾಮಿ ಪ್ರದಿಪ್ತಾನಂದರು ಮಾತಾಡುತ್ತಾ, ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಪೂ. ಹರಿಶಂಕರ ಜೈನ, ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ವಕ್ತಾರ ಶ್ರೀ. ವಿನೋದ ಬನ್ಸಲ್, ‘ಪನೂನ ಕಾಶ್ಮೀರ’ದ ಅಧ್ಯಕ್ಷ ಡಾ.ಅಜಯ ಚ್ರೋಂಗೂ, ತಮಿಳುನಾಡಿನ ‘ಹಿಂದೂ ಮಕ್ಕಲ ಕಚ್ಛಿ’ಯ ಸಂಸ್ಥಾಪಕ ಅಧ್ಯಕ್ಷ ಶ್ರೀ. ಅರ್ಜುನ ಸಂಪಥ, ‘ಸುದರ್ಶನ’ ವಾಹಿನಿಯ ಮುಖ್ಯ ಸಂಪಾದಕ ಶ್ರೀ.ಸುರೇಶ ಚವ್ಹಾಣಕೆ, ಝಾರ್ಖಂಡದ ‘ತರುಣ ಹಿಂದೂ’ ಈ ಸಂಸ್ಥೆಯ ಸಂಸ್ಥಾಪಕ ಡಾ.ನೀಲ ಮಾಧವ ದಾಸ, ಓಡಿಯಾದ ಭಾರತ ರಕ್ಷಾ ಮಂಚದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ.ಅನಿಲ ಧೀರ, ‘ಇಂಟರಫೇಥ್ ಸ್ಟ್ರೇಂಥ್’ ನ ಸಂಸ್ಥಾಪಕ ಡಾ.ರಿಚರ್ಡ್ ಬೆಂಕಿನ್ ಮುಂತಾದವರು ಸಹ ತಮ್ಮ ಮನೋಗತವನ್ನು ವ್ಯಕ್ತಪಡಿಸಿದರು.

ಕಾಲನಿರ್ಣಯನ್ಯೂಸ್ ವಾಟ್ಸಾಪ್ ಗ್ರೂಫ್ ಸೇರಲು ಇಲ್ಲಿ ಕ್ಲಿಕ್ ಮಾಡಿ https://chat.whatsapp.com/CTDH16qVW5RL023JwWgknA

Spread the love
  • Related Posts

    ಬೆಳ್ತಂಗಡಿ ತಾಲೂಕಿನಾದ್ಯಂತ ಗುಡುಗು-ಸಿಡಿಲು ಸಹಿತ ಮಳೆ: ನಿಡ್ಲೆ–ಕಳೆಂಜ ರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ಲೈನ್ ಹಾನಿ

    Belthangady: ತಾಲೂಕಿನ ಹಲವೆಡೆ ಶನಿವಾರ ಸಂಜೆ ಉತ್ತಮ ಮಳೆಯಾಗಿದೆ.Shishila, Kokkada, Dharmasthala, Arasinamakki, Ujire ಹಾಗೂ Nidle ಮೊದಲಾದ ಕಡೆಗಳಲ್ಲಿ ಗುಡುಗು-ಸಿಡಿಲು ಸಹಿತ ಉತ್ತಮ ಮಳೆ ಸುರಿದಿದೆ. ಉಳಿದ ಕೆಲವು ಪ್ರದೇಶಗಳಲ್ಲಿ ತುಂತುರು ಹಾಗೂ ಸಾಮಾನ್ಯ ಮಳೆಯಾಗಿದೆ.ತಾಲೂಕಿನಲ್ಲಿ ಫೆಬ್ರವರಿ 21ರಂದು ಕೆಲವೆಡೆ…

    Spread the love

    “ಬಂಗಾಡಿ ಕೊಲ್ಲಿ” 28ನೇ ವರ್ಷದ ‘ಸೂರ್ಯ – ಚಂದ್ರ’ ಜೋಡುಕರೆ ಕಂಬಳ

    ಬಂಗಾಡಿ: ಸೂರ್ಯ-ಚಂದ್ರ ಹೋಡುಕರೆ ಕಂಬಳ ಸಮಿತಿ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಶನ್, ಕರ್ನಾಟಕ ಸರಕಾರ ಮತ್ತು ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಭಾಗಿತ್ವದೊಂದಿಗೆ 28ನೇ ವರ್ಷದ ಹೊನಲು ಬೆಳಕಿನ ಸೂರ್ಯ-ಚಂದ್ರ ಜೋಡುಕರೆ “ಬಂಗಾಡಿ ಕೊಲ್ಲಿ” ಬಯಲು ಕಂಬಳವು ಶ್ರೀ…

    Spread the love

    You Missed

    ಬೆಳ್ತಂಗಡಿ ತಾಲೂಕಿನಾದ್ಯಂತ ಗುಡುಗು-ಸಿಡಿಲು ಸಹಿತ ಮಳೆ: ನಿಡ್ಲೆ–ಕಳೆಂಜ ರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ಲೈನ್ ಹಾನಿ

    • By admin
    • March 15, 2026
    • 65 views
    ಬೆಳ್ತಂಗಡಿ ತಾಲೂಕಿನಾದ್ಯಂತ ಗುಡುಗು-ಸಿಡಿಲು ಸಹಿತ ಮಳೆ: ನಿಡ್ಲೆ–ಕಳೆಂಜ ರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ಲೈನ್ ಹಾನಿ

    “ಬಂಗಾಡಿ ಕೊಲ್ಲಿ” 28ನೇ ವರ್ಷದ ‘ಸೂರ್ಯ – ಚಂದ್ರ’ ಜೋಡುಕರೆ ಕಂಬಳ

    • By admin
    • March 14, 2026
    • 106 views
    “ಬಂಗಾಡಿ ಕೊಲ್ಲಿ” 28ನೇ ವರ್ಷದ ‘ಸೂರ್ಯ – ಚಂದ್ರ’ ಜೋಡುಕರೆ ಕಂಬಳ

    ಹಾವು ಕಡಿತಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರೆಗುಡ್ಡೆಯ ಮಹೇಶ್ ಮನೆಗೆ ಡಿ.ಕಿರಣ್ ಚಂದ್ರ ಪುಷ್ಪಗಿರಿ ಭೇಟಿ

    • By admin
    • March 14, 2026
    • 45 views
    ಹಾವು ಕಡಿತಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರೆಗುಡ್ಡೆಯ ಮಹೇಶ್ ಮನೆಗೆ  ಡಿ.ಕಿರಣ್ ಚಂದ್ರ ಪುಷ್ಪಗಿರಿ ಭೇಟಿ

    KSRTC ಬಸ್ ಹಾಗೂ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಮೂವರು ಸಾವು

    • By admin
    • March 13, 2026
    • 615 views
    KSRTC ಬಸ್ ಹಾಗೂ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಮೂವರು ಸಾವು

    ಎಕ್ಸೆಲ್ ಪಿ.ಯು ಕಾಲೇಜಿನಲ್ಲಿ ಎಲೆಕ್ಟ್ರಿಷಿಯನ್ ಮತ್ತು ಪ್ಲಂಬರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

    • By admin
    • March 10, 2026
    • 152 views
    ಎಕ್ಸೆಲ್ ಪಿ.ಯು ಕಾಲೇಜಿನಲ್ಲಿ ಎಲೆಕ್ಟ್ರಿಷಿಯನ್ ಮತ್ತು ಪ್ಲಂಬರ್ ಹುದ್ದೆಗಳಿಗೆ  ಅರ್ಜಿ ಆಹ್ವಾನ

    ಗುರುವಾಯನಕೆರೆ ಎಕ್ಸೆಲ್ ಟೆಕ್ ಶಾಲೆಯಲ್ಲಿ ಕೆ.ಜಿ ಮಕ್ಕಳ ಘಟಿಕೋತ್ಸವ

    • By admin
    • March 10, 2026
    • 64 views
    ಗುರುವಾಯನಕೆರೆ ಎಕ್ಸೆಲ್ ಟೆಕ್ ಶಾಲೆಯಲ್ಲಿ ಕೆ.ಜಿ ಮಕ್ಕಳ ಘಟಿಕೋತ್ಸವ