ಬಟರ್ ಫ್ರೂಟ್ ನಲ್ಲಿದೆ ದಿವ್ಯ ಔಷಧ ! ಬಟರ್ ಫ್ರೂಟ್ ತಿನ್ನಿರಿ ಆರೋಗ್ಯ ವೃದ್ದಿಸಿಕೊಳ್ಳಿರಿ…

ಮುಂಗಾರು ಚುರುಕಾಗುವ ಮುನ್ನ ಕೃಷಿ ಚಟುವಟಿಕೆಗಳು ಚುರುಕುಗೊಳ್ಳ ಬೇಕಾಗಿದೆ. ಗಿಡ ಮರ ನೆಡುವ ಮುನ್ನ ಸಾಕಷ್ಟು ತಯಾರಿ ನಡೆಸಬೇಕಾಗುತ್ತದೆ. ಪ್ಲಾಸ್ಟಿಕ್ ಚೀಲಗಳಲ್ಲಿ ಬೀಜಗಳನ್ನು ನೆಟ್ಟು ಸಸಿಗಳನ್ನು ಮಾಡಿಕೊಳ್ಳಬೇಕು. ತಯಾರಾದ ಸಸಿ ನೆಡಲು ಮುಂಗಾರಿನ ಸಮಯ ಸುಸಮಯ. ತೇವಾಂಶ ಉಪಯೋಗಿಸಿಕೊಂಡು ಬೇರುಗಳು ಆಳಕ್ಕಿಳಿದು ಬೆಳೆಯುವುದು ಸುಲಭವಾಗುತ್ತದೆ. ಕನಸಿನ ತೋಟದ ನಿರ್ಮಾಣಕ್ಕಿದು ಸಕಾಲ. ಇದಕ್ಕೆ ಯಾವ ಹೊಸ ಗಿಡಗಳಿವೆ? ಹುಡುಕಾಟ ಶುರು ಮಾಡಿದರೆ ಸಕಾಲದಲ್ಲಿ ಸಿದ್ಧತೆ ಮಾಡಿಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಹಣ್ಣು ಅವಕ್ಯಾಡೋ ಅಥವಾ ಬೆಣ್ಣೆ ಹಣ್ಣು.

ಈ ಗಿಡವನ್ನು ಎಲ್ಲ ತರಹದ ವಾತಾವರಣಗಳಲ್ಲೂ ಬೆಳೆಯಬಹುದು. ಹೆಚ್ಚಿನ ನೀರು, ಗೊಬ್ಬರ ಬೇಡದೆ ಬೆಳೆಯುವ ಗಿಡ. ಅಲ್ಲದೆ ವರ್ಷದಲ್ಲಿ ಎರಡು ಬಾರಿ ಫಲ ನೀಡುವ, ಯಾವುದೇ ರೋಗ ರುಜಿನ ಇಲ್ಲದ, ನೋಡಲು ಆಕರ್ಷಕವಾದ ಗಿಡ. ಇದರ ಬೀಜದಿಂದ ಸಸ್ಯಾಭಿವೃದ್ಧಿ ಸಾಧ್ಯ. ಇತ್ತೀಚೆಗೆ ಇದರ ಗ್ರಾಫ್ಟೆಡ್ ಗಿಡಗಳೂ ದೊರೆಯುತ್ತಿವೆ. ಮೂಲತಃ ವೆಸ್ಟ್ ಇಂಡೀಸ್, ಮೆಕ್ಸಿಕೊ, ದಕ್ಷಿಣ ಅಮೆರಿಕ ದೇಶಗಳಲ್ಲಿ ಬೆಳೆಯುತ್ತಿದ್ದ ಗಿಡವನ್ನು ಈಗೀಗ ಭಾರತದ ಬಹುತೇಕರಾಜ್ಯಗಳಲ್ಲಿ ಬೆಳೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಹಾಪ್ಕಾಮ್ಸ್ ಮತ್ತು ಸಾವಯವ ಮಳಿಗೆಗಳಲ್ಲೂ ಈ ಹಣ್ಣು ಮಾರಾಟವಾಗುತ್ತಿವೆ. ಕಳೆದೆರಡು ವರ್ಷಗಳಿಂದ ತಳ್ಳುಗಾಡಿಗಳಲ್ಲೂ ಮಾರಾಟವಾಗುತ್ತಿರುವುದು ಇದರ ಜನಪ್ರಿಯತೆ ಹೆಚ್ಚುತ್ತಿರುವುದಕ್ಕೆ ಸಾಕ್ಷಿ. ತಂಪು ಪಾನೀಯ ಮಾರುವವರ ಅಂಗಡಿಯಲ್ಲಿ ಈ ಬೆಣ್ಣೆ ಹಣ್ಣಿನ ಪಾನೀಯಕ್ಕೆ ಹೆಚ್ಚಿನ ಬೇಡಿಕೆ. ಚೀನಾ ಮತ್ತು ಭಾರತದ ಹಲವು ಭಾಗಗಳಲ್ಲಿ ಬೆಳೆಯುವ ಈ ಹಣ್ಣಿಗೆ ಬಟರ್ ಫ್ರೂಟ್ ಎಂಬ ಹೆಸರೂ ಇದೆ.

READ ALSO

ಬಲಿತ ಹಣ್ಣುಗಳ ಬೀಜ ತೆಗೆದು ಮಣ್ಣು ಮರಳು ಗೊಬ್ಬರದ ಮಿಶ್ರಣ ತುಂಬಿರುವ ಪ್ಲಾಸ್ಟಿಕ್ ಚೀಲದಲ್ಲಿ ನಾಟಿ ಮಾಡಿ. ಕೆಲವೇ ದಿನಗಳಲ್ಲಿ ಮೊಳಕೆಯೊಡೆದು ಹೊಸ ಎಲೆಗಳು ಬರುತ್ತವೆ. ಗಿಡ ಒಂದರಿಂದ ಒಂದೂವರೆ ಅಡಿ ಎತ್ತರ ಬೆಳೆದ ಮೇಲೆ, ಮುಂಗಾರಿನ ಸಮಯದಲ್ಲಿ ನಾಟಿ ಮಾಡಬಹುದು. ಗಿಡ ದೊಡ್ಡದಾಗಲು ನಾಲ್ಕೈದು ವರ್ಷಗಳಾದರೂ ಬೇಕು. ಐದಾರು ವರ್ಷದಲ್ಲಿ ಗಿಡ ಫಲ ಕೊಡಲಾರಂಭಿಸುತ್ತದೆ. ಗಿಡ ದೊಡ್ಡದಾಗುವವರೆಗೆ ದ್ವಿದಳ ಧಾನ್ಯಗಳನ್ನೋ, ಹಸಿರೆಲೆ ಗೊಬ್ಬರಗಳನ್ನೋ ಬೆಳೆದುಕೊಳ್ಳಬಹುದು. ಅತಿ ಹೆಚ್ಚಿನ ಬಯೋಮಾಸ್ ಇದ್ದು, ಸದಾ ಹಸಿರಾಗಿರುತ್ತದೆ. ನವೆಂಬರ್ ಡಿಸೆಂಬರ್ನಲ್ಲಿ ಒಣಗಿದ ಎಲೆಗಳನ್ನೆಲ್ಲ ಉದುರಿಸಿಕೊಂಡು ಭೂಮಿ ಫಲವತ್ತತೆಗೆ ದಾರಿ ತೋರಿಸುತ್ತದೆ. ಹೊಸ ಚಿಗುರು, ಮೊಗ್ಗು ಹೂವುಗಳಿಂದ ಗಿಡ ಸಂಭ್ರಮಿಸುತ್ತದೆ. ಒಂದು ದೊಡ್ಡ ಗಿಡ ನೂರರಿಂದ ನೂರ ಇಪ್ಪತ್ತು ಹಣ್ಣುಬಿಡಬಲ್ಲದು.

ಬೆಣ್ಣೆ ಹಣ್ಣಿನ ಬಾಡಿ ಸ್ಕ್ರಬ್: ಬೆಣ್ಣೆ ಮತ್ತು ಕೋಕಾ ಬೆಣ್ಣೆ ( ಕೋಕಾ ಬಟರ್) ಜೊತೆ ಬೆಣ್ಣೆ ಹಣ್ಣಿನ ಎಣ್ಣೆಯನ್ನು ಮಿಶ್ರ ಮಾಡಿ ದೇಹಕ್ಕೆ ಮಸಾಜ್ ಮಾಡಲು ಬಳಸಬಹುದು. ಈ ಮಿಶ್ರಣ ಎಲ್ಲಾ ರೀತಿಯ ಚರ್ಮದವರು ಬಳಸಬಹುದಾಗಿದ್ದು, ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ.

ಬಿಸಿ ನೀರಿನಲ್ಲಿಸ್ನಾನ ಮಾಡಿ ಬೆಣ್ಣೆ ಹಣ್ಣಿನ ಮಾಯಿಶ್ಚರೈಸರ್ ಹಚ್ಚಬೇಕು. ಇದು ಚರ್ಮದ ಒಳಗೆ ಹೋಗಿ ಚರ್ಮವನ್ನು ಮೃದು ಮತ್ತು ಸುಂದರ ಮಾಡುವಲ್ಲಿ ತುಂಬಾ ಪರಿಣಾಮಕಾರಿ. ಇದನ್ನು ಹಚ್ಚಿ ದೂಳಿಗೆ ಹೋಗಬಾರದು. ಸ್ವಲ್ಪ ಹೊತ್ತು ಬಿಟ್ಟು ಟವಲ್ನಿಂದಒರೆಸಿ 15 ನಿಮಿಷದ ಬಳಿಕ ಸ್ನಾನ ಮಾಡಬೇಕು.ಮಾಯಿಶ್ಚರೈಸರ್ ಮಾಡುವ ವಿಧಾನ

ಬೆಣ್ಣೆ ಹಣ್ಣು -1, ಬಾಳೆಹಣ್ಣು 1, ಮೊಸರು 1/4 ಕಪ್ ಈ 3 ವಸ್ತುಗಳನ್ನು ಚೆನ್ನಾಗಿ ಮಿಶ್ರ ಮಾಡಿದರೆ ಪೇಸ್ಟ್ ತರ ಆಗುತ್ತದೆ. ಈ ಮಾಯಿಶ್ಚರೈಸರ್ ಹಚ್ಚಿದರೆ ಚರ್ಮ ಸುಂದರವಾಗುವುದು.

ಬೆಣ್ಣೆ ಹಣ್ಣು, ಓಟ್ ಮೀಲ್, ನಿಂಬೆರಸದೊಂದಿಗೆ ಸ್ವಲ್ಪ ನೀರು ಬೆರೆಸಿ ಚೆನ್ನಾಗಿ ಕಲಸಿ ನಂತರ ಅದನ್ನು ದೇಹ ಮತ್ತು ಮುಖಕ್ಕೆ ಹಚ್ಚಿ 20 ನಿಮಿಷ ಉಜ್ಜಬೇಕು. ನಂತರ ಹದ ಬಿಸಿ ನೀರಿನಲ್ಲಿ ಸ್ನಾನ ಮಾಡಬೇಕು. ಒಣ ಚರ್ಮ ಇರುವವರು ಈ ರೀತಿ ಮಾಡಿದರೆ ಚರ್ಮ ಮೃದುವಾಗುವುದು.

 • ವಿಟಮಿನ್ ಎ 2%
 • ವಿಟಮಿನ್ ಸಿ 16%
 • ಕ್ಯಾಲ್ಸಿಯಂ 1%
 • ಕಬ್ಬಿಣ 3%
 • ವಿಟಮಿನ್ ಬಿ 6 ರಿಂದ15%
 • ಮ್ಯಾಗ್ನೀಷಿಯಂ 7%
 • ಬೆಣ್ಣೆ ಹಣ್ಣಿನಲ್ಲಿ ಕ್ಯಾಲೊರಿ ಮತ್ತು ಆರೋಗ್ಯಕರ ಕೊಬ್ಬು ಸಮೃದ್ಧವಾಗಿದ್ದು ತೂಕ ಹೆಚ್ಚಳಕ್ಕೆ ಸಹಕಾರಿಯಾಗಿದೆ.
 • ಇದರಲ್ಲಿ ವಿಟಮಿನ್ ಬಿ6 ಮತ್ತು ಫಾಲಿಕ್ ಆ್ಯಸಿಡ್ ಹೃದಯಸಂಬಂಧಿ ಕಾಯಿಲೆಗಳನ್ನು ತಡೆಗಟ್ಟಲು ಉಪಕಾರಿ.
 • ಚರ್ಮಕ್ಕೆ ಹೊಳಪು ತರುವಲ್ಲಿ ಈ ಹಣ್ಣಿನದ್ದು ಪ್ರಮುಖ ಪಾತ್ರ. ಅದರಲ್ಲೂ ತಿರುಳಿಗಿಂತ ಇದರ ಸಿಪ್ಪೆ ಸೌಂದರ್ಯವರ್ಧಕ.
 • ಗರಿಷ್ಠ ಪ್ರಮಾಣದ ಕೊಬ್ಬು ಇದ್ದು ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಆದ್ದರಿಂದ ಮಧುಮೇಹಿಗಳಿಗೆ ಉತ್ತಮ ಹಣ್ಣು.
 • ಸಂಧಿವಾತದಿಂದ ಆಗುವ ಕೀಲು ಉರಿಯೂತ ನೋವಿಗೆ ಇದು ಪ್ರಯೋಜನಕಾರಿ.
 • ಮೇ ತಿಂಗಳಿಂದ ಸೆಪ್ಟೆಂಬರ ವರೆಗೆ ಇದರ ಸೀಸನ್.

ಎಲೆಗಳ ಪ್ರಯೋಜನಶೀತ, ಹೊಟ್ಟೆನೋವು, ಸಂಧಿವಾತ, ಕಿಡ್ನಿ ಸಮಸ್ಯೆ, ಬೇಧಿ ಸಮಸ್ಯೆಯಿದ್ದಾಗ ಬೆಣ್ಣೆ ಹಣ್ಣಿನ ಎಲೆಗಳಿಂದ ತಯಾರಿಸಿದ ಟೀ ಸೇವಿಸಿದರೆ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ. ಈ ಎಲೆಗಳಲ್ಲಿ ವಿಷಕಾರಿ ಅಂಶಗಳನ್ನು ಹೀರಿಕೊಳ್ಳುವ ಗುಣವಿದೆ. ಉರಿ ನಿವಾರಕವಾಗಿರುವ ಈ ಎಲೆಗಳಿಂದ ಬೆನ್ನು ನೋವು ಹಾಗೂ ಅತಿಯಾದ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರಬಹುದು. ಹಲ್ಲು ನೋವಿಗೂ ಇದು ಔಷಧ.