ಕನ್ನಡ ಚಿತ್ರರಂಗಕ್ಕೆ ಮತ್ತೆ ಶಾಕ್ ಕೊಟ್ಟ ಕೊರೋನಾ! ಕನ್ನಡದ ಪ್ರತಿಭಾವಂತ ನಿರ್ದೇಶಕ ಭರತ್ ಕೊರೋನಾಗೆ ಬಲಿ!

ಬೆಂಗಳೂರು: ಕಂಠಿ, ಸಾಹೇಬ ಚಿತ್ರಗಳನ್ನು ನಿರ್ದೇಶಿಸಿದ ಪ್ರತಿಭಾವಂತ ನಿರ್ದೇಶಕ ಭರತ್ ಹಠಾತ್ ಅಸುನೀಗಿದ್ದಾರೆ. ಅವರಿಗೆ 45 ವರ್ಷ ವಯಸ್ಸಾಗಿತ್ತು. ಅರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಭರತ್ ಚಾಮರಾಜನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಕೊರೊನ ಪೀಡಿತರಾಗಿದ್ದ ಭರತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಭರತ್ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

2004 ರಲ್ಲಿ ಕಂಠಿ ಚಿತ್ರದ ಮೂಲಕ ಭರತ್ ಚಿತ್ರರಂಗ ಪ್ರವೇಶಿಸಿದರು. ಶ್ರೀ ಮುರಳಿ ಮತ್ತು ರಮ್ಯ ಅಭಿನಯದ ಈ ಚಿತ್ರ ಹಿಟ್ ಆಗಿತ್ತು. ಇದಾದ ಮೇಲೆ ಹಲವು ವರ್ಷಗಳ ಕಾಲ ಭರತ್ ಯಾವುದೇ ಚಿತ್ರವನ್ನು ನಿರ್ದೇಶನ ಮಾಡಿರಲಿಲ್ಲ. ಮತ್ತೆ 2017 ರಲ್ಲಿ ಮನೋರಂಜನ್ ರವಿಚಂದ್ರನ್ ಹಾಗು ಶಾನ್ವಿ ಶ್ರೀವತ್ಸ ಅಭಿನಯದ ಸಾಹೇಬ ಚಿತ್ರದ ಮೂಲಕ ಭರತ್ ಮತ್ತೆ ನಿರ್ದೇಶನಕ್ಕೆ ಮರಳಿದ್ದರು. ಸಾಹೇಬ ಚಿತ್ರ ಸಾಧಾರಣ ಯಶಸ್ಸು ಕಂಡಿತು. ಜೀವನಾಧಾರಕ್ಕೆ ಸಿನಿಮಾವನ್ನೇ ಭರತ್ ವೃತ್ತಿಯಾಗಿ ಪರಿಗಣಿಸಿದ್ದರು.

ಮೂಲತಃ ರಾಮನಗರದ ಚಿಕ್ಕಮುಳವಾಡಿ ಗ್ರಾಮದವರಾಗಿದ್ದ ಭರತ್ ಹಲವು ವರ್ಷಗಳಿಂದ ಬೆಂಗಳೂರಿನ ವಿಜಯನಗರದ ಅತ್ತಿಗುಪ್ಪೆಯಲ್ಲಿ ವಾಸವಿದ್ದರು. ಅವರು ತಮ್ಮ ಮುಂದಿನ ಚಿತ್ರದ ತಯಾರಿಯಲ್ಲಿರುವಾಗಲೇ ಇಹಲೋಕ ತ್ಯಜಿಸಿರುವುದು ಖೇದಕರ ಸಂಗತಿಯಾಗಿದೆ.

ಗೀತರಚನೆಕಾರ ಕವಿರಾಜ್ ಗೆಳೆಯ ಹಾಗು ನಿರ್ದೇಶಕ ಭರತ್ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ. ಕವಿರಾಜ್ ಕಂಠಿ ಚಿತ್ರದ ಜಿನು ಜಿನುಗೋ ಹಾಗು ಬಾನಿಂದ ಬಾ ಚಂದಿರ ಹಾಡುಗಳು ತಮಗೆ ಆರಂಭದ ದಿನಗಳಲ್ಲಿ ಒಂದು ಹೆಸರು ತಂದು ಕೊಟ್ಟಿದ್ದವು. ಅಂಥ ಒಳ್ಳೆಯ ಚಿತ್ರವನ್ನು ಕೊಟ್ಟ ನಿರ್ದೇಶಕ ಇಂದು ತಮ್ಮನ್ನು ಅಗಲಿರುವುದು ದುಃಖಕರ ವಿಷಯ ಎಂದು ಕವಿರಾಜ್ ತಿಳಿಸಿದ್ದಾರೆ.

Spread the love
  • Related Posts

    ಕನ್ಯಾಡಿಯ ಸೇವಾನಿಕೇತನಕ್ಕೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿ:

    ಕನ್ಯಾಡಿ : ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಸದಸ್ಯರಾಗಿರುವ ಶ್ರೀ ಕ್ಯಾಪ್ಟನ್ ಬ್ರಿಜೇಶ್ ಚೌಟ ತಂಡವು ಕನ್ಯಾಡಿಯ ಸೇವಾನಿಕೇತನಕ್ಕೆ ಫೆಬ್ರವರಿ 8 ರಂದು ಭೇಟಿ ನೀಡಿದರು. ಸೇವಾಭಾರತಿ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಕೆ. ವಿನಾಯಕ ರಾವ್ ಸಂಸ್ಥೆಯ ಬಗ್ಗೆ ಮಾತನಾಡಿ, ಬೆನ್ನುಹುರಿ…

    Spread the love

    ಯುವ ಸಿರಿ ರೈತ ಭಾರತದ ಐಸಿರಿ ಎಂಬ ಪರಿಕಲ್ಪನೆಯೊಂದಿಗೆ ಏಕಕಾಲದಲ್ಲಿ 1000ಕ್ಕೂ ಮಿಕ್ಕಿ ಯುವ ಜನತೆಯಿಂದ ಭತ್ತ ಕಟಾವು ಕಾರ್ಯಕ್ರಮ

    ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರ ಹಾಗೂ ಮಾತೃ ಶ್ರೀ ಹೇಮಾವತಿ.ವಿ.ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ಶ್ರೀ.ಧ.ಮಂ.ಕಾಲೇಜು(ಸ್ವಾಯತ್ತ) ಉಜಿರೆ, ಶ್ರೀ.ಧ.ಮಂ.ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು, ಶ್ರೀ.ಧ.ಮಂ.ಸ್ಪೋರ್ಟ್ಸ್ ಕ್ಲಬ್ ಉಜಿರೆ, ರೋಟರಿ ಕ್ಲಬ್ ಬೆಳ್ತಂಗಡಿ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘ(ರಿ) ಬೆಳ್ತಂಗಡಿ, ವ್ಯವಸ್ಥಾಪನಾ ಸಮಿತಿ…

    Spread the love

    You Missed

    ಕನ್ಯಾಡಿಯ ಸೇವಾನಿಕೇತನಕ್ಕೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿ:

    • By admin
    • February 9, 2025
    • 16 views
    ಕನ್ಯಾಡಿಯ ಸೇವಾನಿಕೇತನಕ್ಕೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿ:

    ಯುವ ಸಿರಿ ರೈತ ಭಾರತದ ಐಸಿರಿ ಎಂಬ ಪರಿಕಲ್ಪನೆಯೊಂದಿಗೆ ಏಕಕಾಲದಲ್ಲಿ 1000ಕ್ಕೂ ಮಿಕ್ಕಿ ಯುವ ಜನತೆಯಿಂದ ಭತ್ತ ಕಟಾವು ಕಾರ್ಯಕ್ರಮ

    • By admin
    • February 9, 2025
    • 15 views
    ಯುವ ಸಿರಿ ರೈತ ಭಾರತದ ಐಸಿರಿ ಎಂಬ ಪರಿಕಲ್ಪನೆಯೊಂದಿಗೆ ಏಕಕಾಲದಲ್ಲಿ 1000ಕ್ಕೂ ಮಿಕ್ಕಿ ಯುವ ಜನತೆಯಿಂದ ಭತ್ತ ಕಟಾವು ಕಾರ್ಯಕ್ರಮ

    ರಾಷ್ಟ್ರಮಟ್ಟದ ರಸ್ತೆ ಸುರಕ್ಷತಾ ಕಾರ್ಟೂನ್ ಸ್ಪರ್ಧೆಯಲ್ಲಿ ವಿಶೇಷ ಬಹುಮಾನ ಪಡೆದ ಶೈಲೇಶ್ ಉಜಿರೆ

    • By admin
    • February 7, 2025
    • 46 views
    ರಾಷ್ಟ್ರಮಟ್ಟದ ರಸ್ತೆ ಸುರಕ್ಷತಾ ಕಾರ್ಟೂನ್ ಸ್ಪರ್ಧೆಯಲ್ಲಿ ವಿಶೇಷ ಬಹುಮಾನ ಪಡೆದ ಶೈಲೇಶ್ ಉಜಿರೆ

    ಮೈಕ್ರೋ ಫೈನಾನ್ಸ್ ವಿರುದ್ಧದ ಸುಗ್ರೀವಾಜ್ಞೆಗಿಲ್ಲ ರಾಜ್ಯಪಾಲರ ಅಂಕಿತ

    • By admin
    • February 7, 2025
    • 35 views
    ಮೈಕ್ರೋ ಫೈನಾನ್ಸ್ ವಿರುದ್ಧದ ಸುಗ್ರೀವಾಜ್ಞೆಗಿಲ್ಲ ರಾಜ್ಯಪಾಲರ ಅಂಕಿತ

    ಒಟ್ಲ ಶ್ರೀ ಧರ್ಮರಸು ಉಳ್ಳಾಕ್ಲು ಬ್ರಹ್ಮ ಬೈದೇರುಗಳ ಗರಡಿ ಹಾಗೂ ಪರಿವಾರ ದೈವಗಳ ಕ್ಷೇತ್ರ ಶಿಶಿಲದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ

    • By admin
    • February 2, 2025
    • 85 views
    ಒಟ್ಲ ಶ್ರೀ ಧರ್ಮರಸು ಉಳ್ಳಾಕ್ಲು ಬ್ರಹ್ಮ ಬೈದೇರುಗಳ ಗರಡಿ ಹಾಗೂ ಪರಿವಾರ ದೈವಗಳ ಕ್ಷೇತ್ರ ಶಿಶಿಲದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ

    ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ (ನಿ.) ಆಡಳಿತ ಮಂಡಳಿ ಚುನಾವಣೆಯಲ್ಲಿ ಸಹಕಾರ ಭಾರತೀಯ ಅಭ್ಯರ್ಥಿಗಳ ಪ್ರಚಂಡ ಗೆಲುವು

    • By admin
    • February 2, 2025
    • 276 views
    ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ (ನಿ.) ಆಡಳಿತ ಮಂಡಳಿ ಚುನಾವಣೆಯಲ್ಲಿ   ಸಹಕಾರ ಭಾರತೀಯ ಅಭ್ಯರ್ಥಿಗಳ ಪ್ರಚಂಡ ಗೆಲುವು