ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ತೀವ್ರ ಮಟ್ಟದಲ್ಲಿ ಏರಿಕೆಯಾಗ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಲೋಕಸೇವಾ ಆಯೋಗವು ಜೂನ್ 27, 2021 ಕ್ಕೆ ನಿಗದಿಯಾಗಿದ್ದ ಯುಪಿಎಸ್ಸಿ ಪ್ರಿಲಿಮ್ಸ್ 2021 ಪರೀಕ್ಷೆಯನ್ನ ಮುಂದೂಡಿದೆ.
‘ಕೊರೊನಾ ಸೋಂಕಿನಿಂದ ಉಂಟಾದ ಪ್ರಸ್ತುತ ಪರಿಸ್ಥಿತಿಗಳಿಂದಾಗಿ, ಕೇಂದ್ರ ಲೋಕಸೇವಾ ಆಯೋಗವು ನಾಗರಿಕ ಸೇವೆಗಳ (ಪೂರ್ವಭಾವಿ) ಪರೀಕ್ಷೆ 2021 ಅನ್ನು ಮುಂದೂಡಿದೆ. ಇದು 2021 ರ ಜೂನ್ 27 ರಂದು ನಡೆಯಬೇಕಾಗಿತ್ತು. ಈಗ ಈ ಪರೀಕ್ಷೆ ಅಕ್ಟೋಬರ್ 10, 2021 ರಂದು ನಡೆಯಲಿದೆ ‘ಎಂದು ಯುಪಿಎಸ್ಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಎಸ್ ಎಸ್ಸಿ ಸಿಜಿಎಲ್ ನಂತಹ ಇತರ ನಡೆಯುತ್ತಿರುವ ಸರ್ಕಾರಿ ನೇಮಕಾತಿ ಪರೀಕ್ಷೆಗಳು ಮತ್ತು ಎಸ್‌ಎಸ್ಸಿ ಸಿಎಚ್‌ಎಸ್‌ಎಲ್ ನ ಕೆಲವು ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಕೋವಿಡ್ ಪ್ರಕರಣಗಳ ಹೆಚ್ಚಳದ ನಡುವೆ ಹಲವಾರು ಅಭ್ಯರ್ಥಿಗಳು ಪರೀಕ್ಷೆಯನ್ನು ಮುಂದೂಡಲು ಅಥವಾ ರದ್ದುಗೊಳಿಸಲು ಒತ್ತಾಯಿಸುತ್ತಿದ್ದರು.