ಬೆಳ್ತಂಗಡಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಯವರ 8 ವರ್ಷಗಳ ಆಡಳಿತದ ಸಲುವಾಗಿ ಯುವ ಮೋರ್ಚಾ ಬೆಳ್ತಂಗಡಿ ವತಿಯಿಂದ ಬಿ.ಸಿ ರೋಡ್ ವರೆಗೆ ವಿಕಾಸ್ ತೀರ್ಥ ಬೈಕ್ ರ್ಯಾಲಿ ನಡೆಯಿತು. ಬಿ.ಸಿ. ರೋಡ್ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಸಮಾರೋಪ ಹಾಗೂ ಜಿಲ್ಲಾಮಟ್ಟದ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕಿನ ವಿವಿಧ ಸಾಧಕರಿಗೆ ಸನ್ಮಾನ ನಡೆಯಿತು.
ಚಂದ್ರಹಾಸ ಚಾರ್ಮಾಡಿ ಪತ್ರಿಕೋದ್ಯಮ, ಸುರಕ್ಷಾ ಆಚಾರ್ಯ ಮಂಡಲ ಆರ್ಟ್ ಇಂಡಿಯ ಬುಕ್ ಆಫ್ ರೆಕಾರ್ಡ್, ಮಹಂತ್ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್, ಪದ್ಮನಾಭ ಸಮಾಜ ಸೇವೆ, ಶ್ರೀಕಾಂತ್ ಬಡೆಕಾಯಿಲ್ ಕೊಕ್ಕಡ ಸ್ವ ಉದ್ಯೋಗ, ಕುಮಾರಿ ಚಿತ್ತಾರ ಬೆಳಾಲು ಸ್ಟಾರ್ ಸಿಂಗರ್ ಆವಾರ್ಡ್, ಕೀರ್ತಿ. ಎಸ್. ಸಾವ್ಯ ಉತ್ತಮ ನಿರೂಪಕಿ, ಗಣೇಶ್ ಆಚಾರ್ಯ ಗುಂಪಲಾಜೆ ಕಲಾ ಕ್ಷೇತ್ರ ಹಾಗೂ ಕೃಷಿಕ, ಕೋಳಿ ಸಾಕಣೆ, ಹೈನುಗಾರಿಕೆ ಮೀನು ಸಾಕಣೆ, ಪ್ರಾಣಿ ಪಕ್ಷಿಗಳ ಸಾಕಣೆ, ಹಣ್ಣು ಹಂಪಲು ಗಿಡಗಳ ಪೋಷಣೆ ಭತ್ತದ ಗದ್ದೆ, ಕೃಷಿ ಉದ್ಯಮ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ದೇವಿ ಪ್ರಸಾದ್ ಗೌಡ ಕಡಮ್ಮಾಜೆ ಸೇರಿದಂತೆ ಜಿಲ್ಲೆಯ ಹಲವಾರು ಸಾಧಕರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ರಾಜಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್,ಯುವಮೋರ್ಚಾ ರಾಜ್ಯಾಧ್ಯಕ್ಷ ಡಾ.ಸಂದೀಪ್ ಕುಮಾರ್,ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ಉಳಿಪ್ಪಾಡಿ, ಯುವಮೋರ್ಚಾ ಜಿಲ್ಲಾಧ್ಯಕ್ಷ ಗುರುದತ್ ಕಾಮತ್,ಬೆಳ್ತಂಗಡಿ ಯುವಮೋರ್ಚಾ ಅಧ್ಯಕ್ಷ ಯಶವಂತ ಗೌಡ ಬೆಳಾಲು ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.