ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಸಮಿತಿಯಿಂದ ಗ್ರಾಮ ಸಮಿತಿ , ಬೂತ್ ಸಮಿತಿ ಮತ್ತು ವಿವಿಧ ಘಟಕಗಳಿಗೆ ಪದಾಧಿಕಾರಿಗಳ ನೇಮಕ

ಬೆಳ್ತಂಗಡಿ : ಕುಕ್ಕಳ ಗ್ರಾಮ ಸಮಿತಿ, ಬೂತ್ ಸಮಿತಿಗಳ ಪುನರ್ ರಚನೆ ಹಾಗೂ ವಿವಿಧ ಘಟಕಗಳಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಸಮಿತಿ ಅಧ್ಯಕ್ಷ ಶ್ರೀ.ಕೆ. ಶೈಲೇಶ್ ಕುಮಾರ್ ಕುರ್ತೋಡಿ ಅವರ ನೇತೃತ್ವದಲ್ಲಿ ಹಾಗೂ ಹಿರಿಯರಾದ ಲಿಂಗಪ್ಪ ನಾಯಕ ಗೌರವ ಉಪಸ್ಥಿತಿಯಲ್ಲಿ ಸಭೆ ನಡೆಯಿತು.

READ ALSO

ಯೂತ್ ಕಾಂಗ್ರೆಸ್ ಘಟಕ, ಹಿಂದುಳಿದ ವರ್ಗಗಳ ಘಟಕ, ಮಹಿಳಾ ಕಾಂಗ್ರೆಸ್ ಘಟಕ, ಅಲ್ಪಸಂಖ್ಯಾತ ಘಟಕ, ಎಸ್ ಸಿ ಘಟಕ, ಎಸ್ ಟಿ ಘಟಕ, ಕಾರ್ಮಿಕ ಸಂಘಟಿತ ಘಟಕ, ಕಾರ್ಮಿಕ ಅಸಂಘಟಿತ ಘಟಕ ಎನ್ ಎಸ್ ಯು ಐ, ಅಲ್ಪಸಂಖ್ಯಾತ ಘಟಕ, ಕಿಸಾನ್ ಕಾಂಗ್ರೆಸ್ ಘಟಕ, ಸೇವಾದಳ ಘಟಕ, ಸಾಮಾಜಿಕ ಜಾಲತಾಣ ಘಟಕ( ಡಿಜಿಟಲ್ ಯೂತ್) ಬಿಎಲ್ ಎ ಸೇರಿದಂತೆ ಗ್ರಾಮ ಮತ್ತು ಬೂತ್ ವ್ಯಾಪ್ತಿಗಳಲ್ಲಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾಲಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬೇಬಿ ಸುವರ್ಣ ಮಡಂತ್ಯಾರು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶೈಲೇಶ್ ಪುಲಿಮಜಲು, ರಾಜ್ಯ ಅಸಂಘಟಿತ ಕಾರ್ಮಿಕ ಘಟಕ ಕಾರ್ಯದರ್ಶಿಯಾದ ಅಬ್ದುಲ್ ರಹಿಮಾನ್ ಪಡ್ಪು, ಸತೀಶ್ ಶೆಟ್ಟಿ ಕುರ್ಡುಮೆ ಗಣೇಶ್ ಪದ್ಮ ಮೂಲ್ಯ, ಮಹಮ್ಮದ್ ರಫೀಕ್, ಪೆಲಿಕ್ಸ್ ಡಿಸೋಜ, ಅಲೆಕ್ಸ್ ಪೆರ್ಕಳ ಮುಂತಾದ ನಾಯಕರು ಉಪಸ್ಥಿತರಿದ್ದರು.