ಬೆಳ್ತಂಗಡಿಯಲ್ಲಿ “ಪಲ್ಲಕ್ಕಿ” ಗೆ ಶಾಸಕ ಹರೀಶ್ ಪೂಂಜಾ ರಿಂದ ಚಾಲನೆ

READ ALSO

ಬೆಳ್ತಂಗಡಿ: ಬೆಳ್ತಂಗಡಿ- ಬೆಂಗಳೂರು ಸುಗಮ ಸಂಚಾರಕ್ಕೆ ಸಾರಿಗೆ ನಿಗಮದ ಪಲ್ಲಕ್ಕಿ ಬಸ್ ಸೇವೆ ಇಂದಿನಿಂದ ಪ್ರಾರಂಭವಾಗಿದೆ. ಇಂದು ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ ರವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪಲ್ಲಕ್ಕಿ ಬಸ್ಸ್ ಗೆ ಚಾಲನೆ ನೀಡಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಸಾರಿಗೆ ಸಂಸ್ಥೆಯ ಅಧಿಕಾರಿಗಳು ಹಾಗೂ ಬೆಳ್ತಂಗಡಿಯ ನಾಗರೀಕರು ಉಪಸ್ಥಿತರಿದ್ದರು.