ಬಂಟ್ವಾಳ: ನಿನ್ನೆ ತಡರಾತ್ರಿ ಇಲ್ಲಿ ಯುವಕನಿಗೆ ಚೂರಿಯಿಂದ ಇರಿದ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಯುವಕನಿಗೆ ತಾನೇ ಇರಿದಿರೋದಾಗಿ ಇರಿತಕ್ಕೆ ಒಳಗಾದ ಯುವಕ ಮನೋಜ್ ಸಹೋದರ ಕಿಶೋರ್ ಒಪ್ಪಿಕೊಂಡಿದ್ದಾನೆ ಎನ್ನುವ ಸಂದೇಶವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸುಮಾರು ಆರು ತಿಂಗಳಿಂದ ನನ್ನ ಹೆಂಡತಿಗೆ ಮನೋಜ್ ಅಶ್ಲೀಲ ಮೆಸೇಜ್, ವಿಡಿಯೋ ,ಫೊಟೊ ಕಳುಹಿಸಿ ದೈಹಿಕ ಸಂಪರ್ಕಕ್ಕೆ ಬೆಳೆಸೋದಕ್ಕೆ ಒತ್ತಾಯಿಸುತ್ತಿದ್ದ. ಈ ಬಗ್ಗೆ ನನ್ನ ತಮ್ಮನಿಗೆ ಕಿಶೋರ್ ತುಂಬಾ ಬುದ್ದಿ ಮಾತು ಹೇಳಿದ್ದ. ಆದ್ರೂ ಅವನ ವಿಕೃತ ಕಮ್ಮಿಯಾಗಿರಲಿಲ್ಲ. ಇದರಿಂದ ಕೋಪಗೊಂಡ ಕಿಶೋರ್ ತಾನೇ ನನ್ನ ತಮ್ಮನಿಗೆ ಚೂರಿಯಿಂದ ಇರಿದಿದ್ದಾನೆ, ಅಲ್ಲದೇ ಮನೋಜ್ ಅಣ್ಣ ಕಿಶೋರ್ ಬಂಟ್ವಾಳ ಪೋಲಿಸ್ ಠಾಣೆಗೆ ಬಂದು ತಪ್ಪೊಪ್ಪಿಕೊಂಡಿದ್ದಾನೆ ಎನ್ನುವ ಸಂದೇಶವೊಂದು ಎಲ್ಲರ ವಾಟ್ಸಾಪ್ ನಲ್ಲಿ ಇಂದು ಹರಿದಾಡುತ್ತಿದೆ.
ಆದರೆ ಇದಕ್ಕೆ ಪೂರಕವೆಂಬಂತೆ ಮತ್ತೊಂದು ಸಂದೇಶವು ಹೆಚ್ಚು ಶೇರ್ ಆಗುತ್ತಿದ್ದು, ವಾಸ್ತವದಲ್ಲಿ ಮನೋಜ್ ಗೆ ಅಣ್ಣತಮ್ಮಂದಿರು ಯಾರೂ ಇಲ್ಲ. ಮನೋಜ್ ಯಾವುದೇ ಸಂಘಟನೆ, ಪಕ್ಷಗಳಲ್ಲಿ ಗುರುತಿಸಿಕೊಂಡವರೂ ಅಲ್ಲ. ತನ್ನ ಪಾಡಿಗೆ ಪರವೂರಿನಲ್ಲಿ ನಿಷ್ಠೆಯಿಂದ ದುಡಿದು ನಾಲ್ಕು ತಿಂಗಳ ಹಿಂದೆ ಊರಿಗೆ ಬಂದಿದ್ದು, ಮನೆಯಿಂದಲೇ ಕಚೇರಿ ಕೆಲಸ ನಿರ್ವಹಿಸುತ್ತಿದ್ದರು. ಸರಳ, ಸಜ್ಜನ ವ್ಯಕ್ತಿಯಾಗಿರುವ ಮನೋಜ್ ಬಗ್ಗೆ ಮಿಥ್ಯಾರೋಪಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲಕಿಡಿಗೇಡಿಗಳು ತಮ್ಮ ತೀಟೆ ತೀರಿಸುತ್ತಿದ್ದು, ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ನೀಡಲಾಗಿದೆ. ಕಿಡಿಗೇಡಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಹಾಗೂ ಆರೋಪಿಗಳನ್ನು ಕೂಡಲೇ ಬಂಧಿಸಿ ವಾಸ್ತವಾಂಶವನ್ನು ಜನರಿಗೆ ತಿಳಿಸಿ ಮನೋಜ್ ಗೆ ನ್ಯಾಯ ದೊರಕಿಸಿಕೊಡಬೇಕು ಎಂದು ವಿನಂತಿ ಮಾಡಿದ್ದಾರೆ.