ದ.ಕ ಶಾಮಿಯಾನ ಮಾಲಕರ ಸಂಘ (ರಿ) ಬೆಳ್ತಂಗಡಿ ಮತ್ತು ಭಾರತೀಯ ರೇಡ್ ಕ್ರಾಸ್ ದ.ಕ ಜಿಲ್ಲೆ ಸಹಯೋಗದಲ್ಲಿ ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರಬೆಳ್ತಂಗಡಿ: ದ.ಕ ಶಾಮಿಯಾನ ಮಾಲಕರ ಸಂಘ (ರಿ) ಬೆಳ್ತಂಗಡಿ ಘಟಕ ಇದರ ವತಿಯಿಂದ ಭಾರತೀಯ ರೇಡ್ ಕ್ರಾಸ್ ದ.ಕ ಜಿಲ್ಲೆ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರವು ಶ್ರೀ ಕೃಷ್ಣ ಆಸ್ಪತ್ರೆ ಕಕ್ಕಿಂಜೆಯಲ್ಲಿ ನಡೆಯಿತು.


ಕಾರ್ಯಕ್ರಮ ಉದ್ಘಾಟಿಸಿ ಶ್ರೀ ಕೃಷ್ಣ ಆಸ್ಪತ್ರೆ ವೈದ್ಯಕೀಯ ಅದೀಕ್ಷಕರಾದ ಡಾ.ಮುರಳಿಕೃಷ್ಣ ಇರ್ವತ್ರಾಯ ಮಾತನಾಡಿ ರಕ್ತ ದಾನ ಶ್ರೇಷ್ಠ ದಾನ ಪ್ರತಿ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡುವ ಮೂಲಕ ತನ್ಮೂಲಕ ಸಮಾಜ ಸೇವೆ ಮಾಡಬಹುದು, ದ.ಕ ಶಾಮಿಯಾನ ಮಾಲಕರ ಸಂಘಟನೆಯ ಇಂತಹ ಸಮಾಜಮುಖಿ ಕಾರ್ಯವನ್ನು ಮಾಡುತ್ತಿದೆ ಎಂದರು.

READ ALSO

ಕಾರ್ಯಕ್ರಮ ದಲ್ಲಿ ಡಾ ಮುರಳಿಕೃಷ್ಣ ಇರ್ವತ್ರಾಯ,ಡಾ.ಶಿವಾನಂದ ಸ್ವಾಮಿ ಮೊದಲಾದ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ದ.ಕ ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಬಾಬು. ಕೆ ವಹಿಸಿದ್ದರು, ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಶಿವಾನಂದ ಸ್ವಾಮಿ ಶ್ರೀ ಲಕ್ಷ್ಮೀ ಕ್ಲಿನಿಕ್ ಎರ್ಮಾಲಪಲ್ಕೆ ,ದ.ಕ ರೆಡ್ ಕ್ರಾಸ್ ಮೆಡಿಕಲ್ ಆಫಿಸರ್ ಡಾ.ಜೆ ಎನ್ ಭಟ್, ದ.ಕ ಜಿಲ್ಲಾ ಕಾರ್ಯದರ್ಶಿ ಭಾರತೀಯ ರೆಡ್ ಕ್ರಾಸ್ ಶ್ರೀ ಪ್ರಭಾಕರ ಶರ್ಮಾ ,ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಭಾರತೀಯ ರೆಡ್ ಕ್ರಾಸ್ ಯಶವಂತ ಪಟವರ್ಧನ್ ಮೊದಲಾದವರು ಉಪಸ್ಥಿತರಿದ್ದರು.