ಜಾರಕಿಹೊಳಿ ಸಚಿವ ಸ್ಥಾನದ ಬಗ್ಗೆ ಸಿ.ಎಂ ಬೇಟಿ ಮಾಡಿದ ಶಾಸಕರಿಗೆ ಸ್ಪಷ್ಟ ಸೂಚನೆ ನೀಡಿದ ಬಿ.ಎಸ್.ವೈ!

ಬೆಂಗಳೂರು: ಸಿ.ಡಿ ಪ್ರಕರಣದ ಹಿನ್ನೆಲೆಯಲ್ಲಿ ಸಚಿವಸ್ಥಾನಕ್ಕೆ ರಾಜಿನಾಮೆ ನೀಡಿರುವ ರಮೇಶ ಜಾರಕಿಹೊಳಿ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಒತ್ತಾಯಿಸಲು 20 ಶಾಸಕರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ.

ಶಾಸಕ ಮಹೇಶ ಕುಮಟಳ್ಳಿ ಸೇರಿದಂತೆ 20 ಶಾಸಕರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದು, ಒಂದೊಮ್ಮೆ ರಮೇಶ ಜಾರಕಿಹೊಳಿ ಅವರನ್ನು ಸೇರಿಸಿಕೊಳ್ಳಲು ಸಾಧ್ಯವಾಗದಿದ್ದರೆ ಬಾಲಚಂದ್ರ ಜಾರಕಿಹೊಳಿ ಅವರನ್ನು ಮಂತ್ರಿ ಮಾಡುವಂತೆ ಕೋರಿದ್ದಾರೆ.

READ ALSO

ರಾಸಲೀಲೆ ಪ್ರಕರಣದ ವಿಡೀಯೋ ಹೊರಬೀಳುತ್ತಿದ್ದಂತೆ ಪಕ್ಷಕ್ಕೆ ಮುಜುಗರವಾಗಬಾರದೆನ್ನುವ ಕಾರಣಕ್ಕೆ ರಮೇಶ ಜಾರಕಿಹೊಳಿ ಸಚಿವಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.

ಮುಖ್ಯಮಂತ್ರಿ ಬಿ.ಎಸ್.ವೈ ಯವರನ್ನು ಬೇಟಿಯಾದ ಶಾಸಕರಿಗೆ ಸಿ.ಎಂ ಖಡಕ್ ಸೂಚನೆ ರವಾನಿಸಿದ್ದು ನಿರ್ಧಾರ ನಾನೊಬ್ಬನೇ ಕೈಗೊಳ್ಳಲು ಸಾಧ್ಯವಿಲ್ಲ ಈ ಬಗ್ಗೆ ಹೈ ಕಮಾಂಡ್ ಒಪ್ಪಿಗೆ ಬೇಕು ಎಂಬ ಸ್ಪಷ್ಟ ಸೂಚನೆ ರವಾನಿಸಿದ್ದಾರೆ.