ಅವಧಿ ಮೀರಿದ ಆಹಾರ ಸೇವನೆ 5ಹಸುಗಳು ಸಾವು 25ಕ್ಕೂ ಅಧಿಕ ಹಸುಗಳು ಅಸ್ವಸ್ಥ!

ಕಾರ್ಕಳ: ಅವಧಿ ಮೀರಿದ ಆಹಾರವನ್ನು ಹೊಳೆ ಬದಿಯಲ್ಲಿ ಎಸೆದ ಪರಿಣಾಮ ಅವುಗಳನ್ನು ತಿಂದ ಹಸುಗಳು ಮೃತಪಟ್ಟ ಘಟನೆ ಕಾರ್ಕಳದಲ್ಲಿ ನಡೆದಿದೆ.

ಕಾರ್ಕಳದ ಜೋಹಲ್ಬೆಟ್ಟು ನದಿಯ ಹತ್ತಿರ ಸುಮಾರು 25 ಗೋಣಿ ಕಡಲೆ ಹಿಟ್ಟನ್ನು ಬಿಸಾಕಿ ಹೋಗಿದ್ದು, ಇದನ್ನು ತಿಂದ ಐದು ಹಸುಗಳು ಸಾವನಪ್ಪಿದ್ದು, ಸುಮಾರು 25-30 ಹಸುಗಳು ಅಸ್ವಸ್ಥಗೊಂಡಿವೆ.

READ ALSO

ದುರುಳರ ಕೃತ್ಯಕ್ಕೆ ಮೂಕ ಪ್ರಾಣಿಗಳು ಬಲಿಯಾಗಿದ್ದು, ಘಟನೆಗೆ ಸಂಬಂಧಿಸಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ತಕ್ಷಣವೇ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ವಹಿಸಬೇಕು ಎಂದು ಸ್ಥಳೀಯರು, ಹಿಂದೂ ಸಂಘಟನೆಯವರು ಆಗ್ರಹಿಸಿದ್ದಾರೆ.