ಜೀವನದಲ್ಲಿ ಹಂಬಲವಿದ್ದರೆ ಸಾಧನೆಗೆ ಅಸಾಧ್ಯವಾದುದ್ದು ಯಾವುದು ಇಲ್ಲ ಯೋಚನೆ ಯೋಜನೆಯೊಂದಿಗೆ ಸಾಧನೆ ಮಾಡಿ ಗುರಿಮುಟ್ಟಿ ಇತರರಿಗೂ ಮಾದರಿಯಾಗಿ : ವಿವೇಕ್. ವಿ. ಪಾಯಸ್

ತುಮಕೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ಕಚೇರಿ ಬೆಂಗಳೂರು, ಜನಜಾಗೃತಿ ಪ್ರಾದೇಶಿಕ ಕಚೇರಿ ಬೆಳ್ತಂಗಡಿ ಹಾಗೂ SBI ಬ್ಯಾಂಕ್, Rsetiಸಂಸ್ಥೆ ತುಮಕೂರು ಇದರ ಸಹಯೋಗದೊಂದಿಗೆ ಪಾನಮುಕ್ತ ನವಜೀವನ ಸದಸ್ಯರಿಗೆ ಹಮ್ಮಿಕೊಂಡ ಉದ್ಯಮಶೀಲತಾ ತರಬೇತಿ ಕಾರ್ಯಗಾರದ ಸಮಾರೋಪ ಸಮಾರಂಭ ಕಾರ್ಯಕ್ರಮವು rsetiಸಂಸ್ಥೆ ತುಮಕೂರಿನಲ್ಲಿ ನಡೆಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ವೇದಿಕೆಯಿಂದ ನಡೆದ ಮಧ್ಯವರ್ಜನ ಶಿಬಿರಗಳಲ್ಲಿ ಭಾಗವಹಿಸಿದ ತುಮಕೂರು ಜಿಲ್ಲೆಯ ಪಾನಮುಕ್ತ ಸದಸ್ಯರಿಗೆ ವಿಶೇಷವಾಗಿ ಸ್ವಉದ್ಯೋಗದಲ್ಲಿ ಉದ್ಯಮಶೀಲತಾ ತರಬೇತಿ ಕಾರ್ಯಗಾರವನ್ನು ಫೆಬ್ರವರಿ 4ರಿಂದ ಫೆಬ್ರವರಿ 9ನೇ ತಾರೀಕಿನ ವರೆಗೆ ವಿಶೇಷ ತರಬೇತಿ ಕಾರ್ಯಗಾರ ನಡೆಸಲಾಯಿತು.

READ ALSO

ತರಬೇತಿ ಕಾರ್ಯಗಾರದ ಸಮಾರೋಪ ಸಮಾರಂಭದಲ್ಲಿ ಜನಜಾಗೃತಿ ಪ್ರಾದೇಶಿಕ ಕಚೇರಿ ಬೆಳ್ತಂಗಡಿ ಇದರ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ ಪಯಾಸ್ ರವರು ಮಾತನಾಡುತ್ತಾ ಈ ತರಬೇತಿ ಕಾರ್ಯಗಾರ ದಿಂದ ನಿಮಗೆ ಬದ್ಧತೆ ಬಂದಿರುತ್ತದೆ ಜೀವನದಲ್ಲಿ ಹಂಬಲವಿದ್ದರೆ ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ನೀವು ಇಲ್ಲಿಂದ ಹೋಗಬೇಕಾದರೆ ಗುರಿಯನ್ನಿಟ್ಟುಕೊಂಡು ಹೋಗಬೇಕು ಜೊತೆಗೆ ಇತರರಿಗೆ ಮಾದರಿ ವ್ಯಕ್ತಿಗಳಾಗಬೇಕು ಎಂದು ಶುಭ ಹಾರೈಸಿದರು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಇದರ ರಾಜ್ಯಧ್ಯಕ್ಷರಾದ ವಿ. ರಾಮಸ್ವಾಮಿಯವರು ಮಾತನಾಡುತ್ತಾ ತಾನು ಕೂಡ ಈ ಸಂಸ್ಥೆಯಲ್ಲಿ ತರಬೇತಿಯನ್ನು ಪಡೆದುಕೊಂಡ ಬಳಿಕ ಅಲ್ಲಿ ತಿಳಿಸಿದ 15 ಸೂತ್ರಗಳನ್ನು ತನ್ನಜೀವನದಲ್ಲಿ ಅಳವಡಿಸಿಕೊಂಡ ಕಾರಣ ಇವತ್ತು ಸಮಾಜದಲ್ಲಿ ಮಾದರಿ ಮತ್ತು ಉತ್ತಮ ಉದ್ಯಮಿಯಾಗಲು ಕಾರಣವಾಗಿದೆ ಎಂದು ತನ್ನ ಜೀವನದ ಅನುಭವಗಳನ್ನು ವ್ಯಕ್ತಪಡಿಸಿ ತಾವೂ ಜೀವನದಲ್ಲಿ ಯಶಸ್ವಿ ಉದ್ಯಮಿಗಳಾಗಿ ಎಂದು ಶುಭಹಾರೈಸಿದರು.

ತರಬೇತಿ ಕಾರ್ಯಾಗಾರದ ಬಗ್ಗೆ ಶಿಬಿರಾರ್ಥಿಗಳಾದ ಉಮಾಪತಿ ಮಂಜುನಾಥ ಜಗದೀಶ್ ಹಾಗೂ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಈ ಸಂದರ್ಭ rseti ಸಂಸ್ಥೆಯ ನಿರ್ದೇಶಕರಾದ ರಾಮಚಂದ್ರ ರವರು, ಬೆಂಗಳೂರು ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆಯ ಯೋಜನಾಧಿಕಾರಿಗಳಾದ ಗಣೇಶ್ ಆಚಾರ್ಯ, ಉಪನ್ಯಾಸಕರಾದ ಶ್ರೀಮತಿ ರಮ್ಯಾ, ಮಂಜುನಾಥ್ ಹಾಗೂ ಮನೋಜ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸುದೀಪ್ ನಿರೂಪಿಸಿ, ಗಣೇಶ್ ಆಚಾರ್ಯರವರು ಸ್ವಾಗತಿಸಿ, ಉಮಾಪತಿಯವರು ಧನ್ಯವಾದವಿತ್ತರು.