ಕಲ್ಪತರು ನಾಡಿನ ತಿಪಟೂರಿನಲ್ಲಿ ವಿವಿಧ ಕಾಮಗಾರಿಗಳ ಲೋಕಾರ್ಪಣೆಗೊಳಿಸಿದ ಸಿ.ಎಂ ಬಿಎಸ್ ವೈ

ತಿಪಟೂರು: ಕಲ್ಪತರು ನಾಡಿನ ತಿಪಟೂರು ವಿಧಾನ ಸಭಾಕ್ಷೇತ್ರ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರವರು ಇಂದು ಮಿನಿ ವಿಧಾನಸೌಧ, ನೂತನ ನಗರಸಭೆ ಕಟ್ಟಡ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ರಾಜ್ಯದಲ್ಲಿ ಕೊರೋನಾ ಹೆಚ್ಚಾಗುವ ಭೀತಿ ಇದ್ದು ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪಾಸಿಟಿವ್ ಆಗುತ್ತಿದ್ದು ಎಲ್ಲರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರಕಾಯ್ದುಕೊಳ್ಳುವಂತದ್ದು, ಹಾಗೂ ವ್ಯಾಕ್ಸೀನೇಷನ್ ಪಡೆದುಕೊಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

READ ALSO

ಕರ್ನಾಟಕದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಉತ್ತಮ ಬಜೆಟ್ ಮಂಡನೆ ಮಾಡಿದ್ದು ಮಹಿಳಾಸಬಲೀಕರಣದ ಬಗ್ಗೆ ಹೆಚ್ಚಿನ ಮಹತ್ವವನ್ನು ನೀಡಿದ್ದು ಕಡಿಮೆ ಬಡ್ಡಿದರದಲ್ಲಿ ಹೆಚ್ಚಿನ ಆರ್ಥಿಕ ನೆರವು ಸಿಕ್ಕಿ ಮಹಿಳೆಯರು ಸ್ವಾವಲಂಬಿಗಳಾಗಬೇಕೆಂಬ ದೃಷ್ಟಿಯಿಂದ ಈ ಬಜೆಟ್ಟಿನಲ್ಲಿ ಮಹಿಳೆಯರಿಗೆ ವಿಶೇಷ ಆದ್ಯತೆಯನ್ನು ನೀಡಿದ್ದು ಇದರ ಸದುಪಯೋಗ ಮಾಡುವಂತೆ ಜಿಲ್ಲಾಡಳಿತ ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕೆಂದರು.

ಪ್ರಧಾನಿ ಮೋದಿಯವರ ಅಪೇಕ್ಷೆಯಂತೆ ರೈತನ ಉತ್ಪನ್ನ ಎರಡು ಪಟ್ಟು ಹೆಚ್ಚಾಗಬೇಕೆಂಬ ಬಗ್ಗೆಯು ಕೆಲಸ ಕಾರ್ಯ ನಡೆಯುತ್ತಿದ್ದು ಕೇಂದ್ರದಿಂದ 6ಸಾವಿರ ನೀಡುತ್ತಿದ್ದು, ರಾಜ್ಯ ಸರಕಾರವು 4ಸಾವಿರ ವನ್ನು ಈ ಕೋವಿಡ್ ಸಂಕಷ್ಟದ ಸಂಧರ್ಭದಲ್ಲಿ ನೀಡುತ್ತಿದ್ದು, ಇದರಂತೆ ರೈತರಿಗೆ ಉತ್ತಮ ಗುಣಮಟ್ಟದ ರಸಗೊಬ್ಬರ ಹಾಗೂ ಇತರೇ ಅನುಕೂಲಗಳು ಸಿಗುವಂತ ಪ್ರಯತ್ನ ಮಾಡುತಿದ್ದು, 2021-2022ನೇ ಆಯವ್ಯಯದಲ್ಲಿ ತುಮಕೂರು ಜಿಲ್ಲೆಗೆ ನೀರಾವರಿ ಹಾಗೂ ಕುಡಿಯುವ ನೀರಿನ ಯೋಜನೆಗೆ ಅನುದಾನ ಮೀಸಲಿಟ್ಟಿದ್ದು, ಎತ್ತಿನ ಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಪ್ರಥಮ ಹಂತದ ಏತ ನೀರಾವರಿ ಯೋಜನೆಯ ಕಾಮಗಾರಿ ಮುಕ್ತಾಯದ ಹಂತದಲ್ಲಿದ್ದು ಆದಷ್ಟು ಬೇಗ ಎಲ್ಲೆಡೆ ಎತ್ತಿನಹೊಳೆ ನೀರು ಬರುವ ರೀತಿ ಕ್ರಮ ಕೈ ಗೊಳ್ಳುವ ಭರವಸೆ ನೀಡಿದರು.

ತುಮಕೂರು ಜಿಲ್ಲೆಯ ರೈತರಿಗೆ ಅನುಕೂಲವಾಗುವ ಭಧ್ರ ಮೇಲ್ದಂಡೆ ಯೋಜನೆ ಶೀಘ್ರವಾಗಿ ಪೂರ್ಣಗೊಳಿಸಲು ಆದ್ಯತೆ ನೀಡುವ ಹಾಗೂ ಬೆಂಗಳೂರು ನಗರದಲ್ಲಿ ಶೋಭಾವತಿ ಕಣಿವೆಯಿಂದ ಸಂಸ್ಕರಿಸಿದ ನೀರನ್ನು ತುಮಕೂರು ಸೇರಿದಂತೆ 4 ಜಿಲ್ಲೆಯ 234 ಕೆರೆ ತುಂಬಿಸುವ ಯೋಜನೆಗೆ 500 ಕೋಟಿ ಮೀಸಲಿರಿಸಲಾಗಿದೆ.

ಶಾಸಕರು ಸಂಸದರು ಇನ್ನೂ ಈ ತಾಲೂಕು ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯದ ಬಗ್ಗೆ ಗಮನಸೆಳೆದಿದ್ದು ಪ್ರಸ್ತುತ ಕೋವಿಡ್ ಸಂಕಷ್ಟದಲ್ಲಿ ಹಣಕಾಸಿನ ಇತಿ ಮಿತಿ ನೋಡಿಕೊಂಡು ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡುವ ಬಗ್ಗೆ ತಿಳಿಸಿದರು.

ಬಜೆಟ್ ಮುಗಿದ ಕೂಡಲೇ ಪ್ರತಿ ಜಿಲ್ಲೆಗಳಿಗೂ ಬೇಟಿ ನೀಡಿ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುತ್ತದೆ. ಈಗಾಗಲೇ ಜಿಲ್ಲಾಧಿಕಾರಿಗಳು ಪ್ರತಿ ತಿಂಗಳ ಕೊನೆಯ ಶುಕ್ರವಾರ ತಾಲೂಕಿನ ಹಳ್ಳಿಗೆ ಬೇಟಿನೀಡಿ ಅಲ್ಲಿ ರೈತರ ಸಂಕಷ್ಟ ತಿಳಿಯುವಂತೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಕಾರ್ಯಕ್ರಮ ಮಾಡಿದ್ದು ರೈತನ ಮನೆ ಬಾಗಿಲಿಗೆ ಬಂದು ಅವರ ಸಮಸ್ಯೆಗೆ ಸ್ಪಂದಿಸುವುದು ಸರಕಾರದ ಕರ್ತವ್ಯ ಈ ನಿಟ್ಟಿನಲ್ಲಿ ಮುಖ್ಯ ಕಾರ್ಯದರ್ಶಿಯವರು ತಿಂಗಳಿಗೊಮ್ಮೆ ಜಿಲ್ಲೆಗಳಿಗೆ ಬೇಟಿ ನೀಡುವಂತೆ ಸೂಚಿಸಿದ್ದು ಸಚಿವರು ಕೂಡ ಬೇಟಿ ನೀಡಿ ಸಮಸ್ಯೆ ಪರಿಹರಿಸುವಲ್ಲಿ ಪ್ರಮು ಪಾತ್ರ ವಹಿಸಬೇಕು ಹಾಗೂ ಕೆಲವೆಡೆ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು ಅಧಿಕಾರಿಗಳು ಯಾವುದೇ ಪೈಲು 15ದಿನ 1 ತಿಂಗಳು ಎಂದು ದಿನ ದೂಡದೇ ಸಕಾಲದಲ್ಲಿ ಸೇವೆ ನೀಡುವ ಅಗತ್ಯತೆಯಿದೆ ಅನಗತ್ಯವಾಗಿ ಅಧಿಕಾರಿಗಳು ರೈತರನ್ನು ಸತಾಯಿಸದೆ ಉತ್ತಮ ಸೇವೆ ನೀಡಲು ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

ಶಾಸಕ ಬಿ.ಸಿ. ನಾಗೇಶ್, ಸಂಸದ ಜಿ.ಎಸ್.ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.