ಬೆಳ್ತಂಗಡಿ: ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಉಜಿರೆ ನಿಡಿಗಲ್ ಸೀಟು ಕಾಡು ಬಳಿ ರಿಡ್ಜ್ ಕಾರು ಮತ್ತು ಬೈಕ್ ನಡುವೆ ಇಂದು ಬೆಳಗ್ಗೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಹಾಗೂ ಸಹಸವಾರ ಗಂಭೀರ ಗಾಯಗೊಂಡಿದ್ದಾರೆ.
ಬೈಕ್ ಸವಾರ ದಿಡುಪೆಯ ನೋಣಯ್ಯ ಗೌಡರ ಮಗ ಆನಂದ ಗೌಡ ಗಂಭೀರ ಗಾಯಗೊಂಡಿದ್ದು ಇವರನ್ನು ಉಜಿರೆಯ ಖಾಸಗಿ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ, ಹಿಂಬದಿ ಸವಾರ ದಿಡುಪೆಯ ಚಿಂಕ್ರ ಗೌಡರ ಮಗ ಹರೀಶ್ ಗೆ ಕೂಡ ಗಾಯವಾಗಿದ್ದು ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪದೆ ಪದೇ ನಡೆಯುತ್ತಿದೆ ಅಪಘಾತ: ಕೆಲ ದಿನಗಳ ಹಿಂದೆ ಇದೆ ಸ್ಥಳದಲ್ಲಿ ಬಸ್ ಬೈಕ್ ಅಪಘಾತ ನಡೆದು ಸವಾರ ಮೃತಪಟ್ಟಿದ್ದು ಈ ರಸ್ತೆಯಲ್ಲಿರುವ ನ್ಯೂನ್ಯತೆ ಅಪಘಾತಕ್ಕೆ ಪ್ರಮುಖ ಕಾರಣವಾಗಿದೆ. ಈ ಬಗ್ಗೆ ಸಂಬಂದ ಪಟ್ಟ ಇಲಾಖಾ ಅಧಿಕಾರಿಗಳು ಗಮನಹರಿಸ ಬೇಕಿದೆ.