ಉಡುಪಿ: ಕಾರ್ಕಳ ತಾಲೂಕಿನ ಅಂಡಾರು ಗ್ರಾಮದ ಪೈತಾಳ ದೇವಿಕೃಪಾ ಮನೆ ನಿವಾಸಿ ಕೂಲಿ ಕಾರ್ಮಿಕ ದಂಪತಿ, ಆದಿವಾಸಿ ಕುಟುಂಬದ ಕೂಲಿ ಕಾರ್ಮಿಕ ಪದ್ಮನಾಭ ಮಲೆಕುಡಿಯ ಮತ್ತು ಗೃಹಿಣಿ ಜ್ಯೋತಿ ಇವರ ಎಂಟು ತಿಂಗಳ ಪ್ರಾಪ್ತಿ ಎಂಬ ಹಸುಗೂಸುವಿಗೆ ಈಗ ಹೃದಯ ಚಿಕಿತ್ಸೆಗಾಗಿ ಮಂಗಳೂರಿನ ಎಜೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.
ಹೃದಯ ಚಿಕಿತ್ಸೆಗೆ ಸಂಬಂಧಿಸಿದ ಆಪರೇಷನ್ ಗಾಗಿ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಬೇಕಾಗಬಹುದೆಂದು ವೈದ್ಯರು ನೀಡಿದ ಸಲಹೆಯಿಂದ ಕಂಗಾಲಾಗಿರುವ ಕುಟುಂಬ ಬಾಲೆಯ ರಕ್ಷಣೆಗಾಗಿ ತಲೆಮೇಲೆ ಕೈ ಹೊತ್ತು ಕುಳಿತುಕೊಂಡಿದೆ. ಈಗಾಗಲೇ ಮೊದಲ ಆಪರೇಷನ್ ಗಾಗಿ 3 ಲಕ್ಷ ರೂಪಾಯಿಗಳನ್ನು ಸಾಲ ಮಾಡಿ ಖರ್ಚು ಮಾಡಿದ್ದು ಇದೀಗ ಮತ್ತೆ ಎರಡನೇ ಆಪರೇಶನ್ ಗಾಗಿ 3 ಲಕ್ಷ ರೂಪಾಯಿ ಬೇಕಾಗಿದೆ ಎಂಬ ವೈದ್ಯರ ಸಲಹೆ ಈ ಆದಿವಾಸಿ ಕುಟುಂಬಕ್ಕೆ ಬರ ಸಿಡಿಲು ಬಡಿದಂತಾಗಿದೆ. ಇದುವರೆಗೆ ಲಕ್ಷಾಂತರ ರೂ ವ್ಯಯಿಸಿ ಸಾಲದ ಸುಳಿಗೆ ಸಿಲುಕಿರುವ ಈ ಕುಟುಂಬ ಮುಂದಿನ ಚಿಕಿತ್ಸೆಗೆ ಹಣ ಹೊಂದಿಸುವ ಚಿಂತೆಯಲ್ಲಿ ಹೈರಾಣಾಗಿದೆ. ವಿವಿಧ ಸಂಘ ಸಂಸ್ಥೆಗಳು, ಮಹನೀಯರು, ದಾನಿಗಳಿಂದ ನೆರವಿಗಾಗಿ ಯಾಚಿಸುತ್ತಿರುವ ಈ ಕುಟುಂಬ ತಮ್ಮ ಮಗಳ ಕಣ್ಣಲ್ಲಿ ಆಶಾಕಿರಣ ಮೂಡಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ತಮ್ಮ ಕೈಯಲ್ಲಾದ ಸಹಾಯ, ಸಹಕಾರ ಮಾಡುವ ಮೂಲಕ ಪ್ರಾಪ್ತಿಯ ಹೃದಯ ಬೆಸೆಯುವ ಹೃದಯವಂತಿಗೆ ಪ್ರದರ್ಶಿಸಲು ತಮ್ಮಲ್ಲಿ ವಿನಂತಿಸಿಕೊಳ್ಳತ್ತೆವೆ.
“8 ತಿಂಗಳ ಮಗು ಪ್ರಾಪ್ತಿಳ ಹೃದಯ ಬೆಸೆಯಲು ಹೃದಯವಂತಿಗೆಯ ಸಹಾಯ,ಸಹಕಾರ ಮಾಡೋಣ…“
ಬನ್ನಿ ಸಹಕರಿಸಿ ಬಡಕುಟುಂಬದ ಕಣ್ಣೀರು ಒರೆಸುವ ಮಹತ್ಕಾರ್ಯದಲ್ಲಿ ಪಾಲ್ಗೋಳ್ಳಿ
ನೆರವು ನೀಡುವ ದಾನಿಗಳು ಈ ಕೆಳಗಿನ ಬ್ಯಾಂಕ್ ಖಾತೆಗೆ ಧನ ಸಹಾಯ ನೀಡಬಹುದು.
ಬ್ಯಾಂಕ್ ಹೆಸರು:- ಕರ್ನಾಟಕ ಬ್ಯಾಂಕ್
ಬ್ಯಾಂಕ್ ಖಾತೆ ಸಂಖ್ಯೆ:- 7232500100849501
ಬ್ರಾಂಚ್:- ಶಿರ್ಲಾಲು
IFSC CODE : KARB0000723
ಹೆಸರು:- ಜ್ಯೋತಿ W/o ಪದ್ಮನಾಭ
ವಿಳಾಸ :- ದೇವಿಕೃಪಾ ಪೈತಾಳ ಮನೆ ಅಂಡಾರು ಗ್ರಾಮ ಮತ್ತು ಅಂಚೆ -574101
ಸಂಪರ್ಕ ಸಂಖ್ಯೆ:
8861440915
8281440915
9164115563