ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯುತ್ ಶುಲ್ಕ ಪಾವತಿಸಲು ಆರು ತಿಂಗಳ ಕಾಲಾವಕಾಶ ಎಂಬ ವಿಡಿಯೋ ವೈರಲ್! ಚಾವಿಸನಿನಿ ದಿಂದ ಸ್ಪಷ್ಟನೆ

ವಿದ್ಯುತ್ ಶುಲ್ಕ ಪಾವತಿಸಲು ಆರು ತಿಂಗಳ ಕಾಲಾವಕಾಶ ಇರುವುದಾಗಿ ಸಾಮಾಜಿಕ ಜಾಲತಾಣ/ದೃಶ್ಯ ಮಾಧ್ಯಮಗಳಲ್ಲಿ ವಿದ್ಯುತ್ ಗ್ರಾಹಕಲಿಗ ಸುಳ್ಳು ಮಾಹಿತಿ/ವದಂತಿ ಹರಡುತ್ತಿರುವ ಬಗ್ಗೆ.

ಮೈಸೂರು: ಗೌರವಾನ್ವಿತ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಕಾಲಕಾಲಕ್ಕೆ ಅನುಮೋದಿಸುವ ಜಕಾತಿ ದರದಲ್ಲ ಗ್ರಾಹಕರು ಬಳಸುವ ವಿದ್ಯುತ್‌ಗೆ ಚಾವಿಸನಿನಿ ವತಿಯಿಂದ ವಿದ್ಯುತ್ ಶುಲ್ಕ ಬೇಡಿಕೆ ಮಾಡಿ ವಿದ್ಯುತ್ ಶುಲ್ಕವನ್ನು ನಿಗದಿತ ಅವಧಿಯಲ್ಲಿ ಪಾವತಿಸಿಕೊಳ್ಳುತ್ತಿದೆ. ಆದಾಗ್ಯೂ ಸಾಮಾಜಿಕ ಜಾಲತಾಣದಲ್ಲಿ ವಿದ್ಯುತ್ ಇಲಾಖೆ/ಚಾವಿಸನಿನಿಯ ಗ್ರಾಹಕರು ಬಳಸಿರುವ ವಿದ್ಯುತ್‌ಗೆ ಬೇಡಿಕೆ ಮಾಡಿರುವ “ವಿದ್ಯುತ್ ಶುಲ್ಕದ ಬಿಲ್ಲುಗಳನ್ನು ಪಾವತಿಸಲು ಗ್ರಾಹಕರಿಗೆ 6 ತಿಂಗಳುಗಳ ಕಾಲಾವಕಾಶವಿರುತ್ತದೆ ಎಂಬ ಸುಳ್ಳು ವದಂತಿಯುಳ್ಳ ವೀಡಿಯೋ/ ಸಂದೇಶಗಳು ದೃಶ್ಯ ಮಾಧ್ಯಮದಲ್ಲ ಹರಿದಾಡುತ್ತಿರುವುದನ್ನು ಗಮನಿಸಲಾಗಿರುತ್ತದೆ.

READ ALSO

ಗೌರವಾನ್ವಿತ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಕರ್ನಾಟಕ ರಾಜ್ಯದಲ್ಲಿ ವಿದ್ಯುತ್ ಸರಬರಾಜುವಿಗಾಗಿ ವಿತರಣಾ ಲೈಸೆನ್ಸ್‌ದಾರರ ಷರತ್ತುಗಳು 2004 ಅನುಬಂಧ-04 ರ ಕಂಡಿಕ 2.11 ರ ಪ್ರಕಾರ “ಅಂತಿಮ ಗಡುವು ಎಂದರೆ ಚಿಲ್ಲು ಬಿತ್ತರಸಿದ ದಿನಾಂಕದಿಂದ 15 ದಿನಗಳ ಅವಧಿಯಾಗಿರುತ್ತದೆ.” ಹಾಗೂ “ಗ್ರಾಹಕರಿಗೆ ನೀಡುವ ಮಾಸಿಕ ಇಲ್ಲಿನ ಹಿಂಬವಿಯ ಸೂಚನೆ 1 ರಲ್ಲಿ ವಾಯಿದೆಯೊಳಗೆ ಹಣ ಪಾವತಿಮಾಡದಿದ್ದಲ್ಲಿ ಈ ಬಿಲ್ಲನ್ನ ಸರಬರಾಜು ನಿಲ್ಲಿಸುವ 15 ದಿನಗಳ ನೋಟೀಸ್ ಎಂದು ಪರಿಗಣಿಸತಕ್ಕದ್ದು, ವಾಯಿದ ದಿನಾಂಕವು ಹಿಂದಿನ ಬಾರಿಗೆ ಅನ್ವಯಿಸುವುದಿಲ್ಲ” ಎಂದು ನಮೂದಿಸಲಾಗಿರುತ್ತದೆ. ಹಾಗೂ 15 ದಿನಗಳ ಅವಧಿಯ ನಂತರ ಕಂಣಿಕ 4.18(ಜೆ) ಪ್ರಕಾರ “ಗ್ರಾಹಕರು ಅಲ್ಲು ಪಾವತಿಸಲು ನೀಡಿರುವ ಗಡುವು ದಿನಾಂಕದೊಳಗೆ ಚಿಲ್ಲು ಪಾವತಿಸದಿದ್ದಲ್ಲ, ಗಡುವು ದಿನಾಂಕದ ನಂತರ ಶುಲ್ಕ ಪಾವತಿಸದಿರುವ ಗ್ರಾಹಕರಿಗೆ 15 ದಿನಗಳ ಸ್ಪಷ್ಟ ನೋಟೀಸ್ ಜಾರಿ ಮಾಡಿ ಬಾಕಿ ಪಾವತಿಸದ ಪ್ರಯುಕ್ತ ವಿದ್ಯುತ್ ಸ್ಥಾವರದ ವಿದ್ಯುತ್ ಸಂಪರ್ಕ ಕಡಿತಗೊಳಸುವ ಹಕ್ಕನ್ನು ಲೈಸನ್ಸುದಾರರು ಹೊಂದಿರುತ್ತಾರೆ” ಎಂದು ಇರುವುದರಿಂದ ಗ್ರಾಹಕರು ಸುಳ್ಳು ವದಂತಿಗಳನ್ನು ಪರಿಗಣಿಸಬಾರದಾಗಿ ಗ್ರಾಹಕರಲ್ಲಿ ಚಾವಿಸನಿನಿ ಮನವಿ ಮಾಡಿಕೊಳ್ಳುತ್ತಿದೆ.

ಆದ್ದರಿಂದ ಚಾವಿಸನಿನಿಯು ಗ್ರಾಹಕರರಲ್ಲಿ ಮನವಿ ಮಾಡಿಕೊಳ್ಳುವುದನೆಂದರೆ ಬಿಲ್ಲು ನೀಡಿದ ದಿನಾಂಕದಿಂದ 15 ದಿನಗಗಳೊಳಗೆ ಬಿಲ್ಲಿನ ಮೊತ್ತವನ್ನು ಚಾವಿಸನಿನಿಯ ಅಧಿಕೃತ ನಗದು ಕೌಂಟರ್/ಆನ್‌ಲೈನ್ ಮೂಲಕ ಪಾವತಿಸುವಂತೆ ಈ ಪ್ರಕಟಣೆಯ ಮೂಲಕ ಕೋರಲಾಗಿದೆ.

ಸೂಚನೆ: ಈ ಮೇಲಿನ ರೀತಿ ಚಾವಿಸನಿನಿಯ ವಿರುದ್ಧ ಅಪಪ್ರಚಾರ ಮಾಡಿದ್ದು/ಮಾಡುತ್ತಿರುವುದು ಕಂಡುಬಂದಲ್ಲಿ ಚಾವಿಸನಿನಿಯ ಪೋಲಿಸ್ ಅಧೀಕ್ಷಕರು, ಜಾಗೃತದಳ, ಮೈಸೂರು ರವರ ದೂರವಾಣಿ ಸಂಖ್ಯೆ 9448499964 / ಕಾರ್ಯನಿರ್ವಾಹಕ ಇಂಜಿನಿಯರ್(ವಿ),ಜಾಗೃತದಳ, ಮೈಸೂರು ರವರ ದೂರವಾಣಿ ಸಂಖ್ಯೆ 9448994716 ಕ್ಕೆ ದೂರು ಸಲ್ಲಿಸಲು ಕೋರಲಾಗಿದೆ.