ಬೆಳ್ತಂಗಡಿ: ಸವಣಾಲು ಬಳಿ ಚಿರತೆಯೊಂದು ಬೋನಿಗೆ ಬಿದ್ದ ಘಟನೆ ನಡೆದಿದೆ. ಸವಣಾಲು ಗ್ರಾಮದಲ್ಲಿ ಕಳೆದ ಎರಡು ತಿಂಗಳ ಹಿಂದೆ ಚಿರತೆಯೊಂದು ಕಾಣಿಸಿದ್ದು, ಸ್ಥಳೀಯರಿಗೆ ಆತಂಕ ಎದುರಾಗಿತ್ತು. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದಾಗ ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ ಗುರಿಕಂಡ ಆನಂದ ಶೆಟ್ಟಿ ಎಂಬವರ ಮನೆಯ ಬಳಿ ಎರಡು ತಿಂಗಳ ಹಿಂದೆ ಚಿರತೆ ಹಿಡಿಯಲು ಬೋನ್ ಅಳವಡಿಸಿ ಅದರಲ್ಲಿ ಕೋಳಿ ಇಡಲಾಗಿತ್ತು. ಕಳೆದ ಮಧ್ಯರಾತ್ರಿ ಚಿರತೆ ಕೋಳಿ ಹಿಡಿಯಲು ಬೋನಿನೊಳಗೆ ಹೋಗಿ ಸೆರೆಯಾಗಿದೆ. ಈಗಾಗಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು , ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಚಿರತೆ ಸೇರೆಯಾಗಿದ್ದು ಸ್ಥಳೀಯರ ಆತಂಕ ಕೊಂಚ ಮಟ್ಟಿಗೆ ದೂರವಾಗಿದೆ.
2024ರಲ್ಲಿ ಪೂಜಿಸಲ್ಪಟ್ಟ ಗಣಪ
2024ರಲ್ಲಿ ವಿವಿಧೆಡೆ ಸಂಭ್ರಮದಿಂದ ಪೂಜಿಸಲ್ಪಟ್ಟ ಗಣಪ 1.ಸೌತಡ್ಕ ಮಹಾಗಣಪತಿ ವಿಶೇಷ ಅಲಂಕಾರದಲ್ಲಿ 2.ಶ್ರೀ ಅರ್ಧನಾರೀಶ್ವರ ದೇವಸ್ಥಾನ ಇಂದಬೆಟ್ಟುವಿನಲ್ಲಿ ಪೂಜಿಸಲ್ಪಟ್ಟ ಗಣಪ 3.ಬೆಳ್ತಂಗಡಿಯ ಲಾಯಿಲಾ ದಲ್ಲಿ ಪೂಜಿಸಲ್ಪಟ್ಟ ಬಲಮುರಿ ಗಣಪ 4. ಉಜಿರೆಯ ಸಿದ್ದವನ ಗುರುಕುಲದಲ್ಲಿ ಪೂಜಿಸಲ್ಪಟ್ಟ ಗಣಪ 5.ಪಡಂಗಡಿಯಲ್ಲಿ ಪೂಜಿಸಲ್ಪಟ್ಟ ಗಣಪ…