ಇಂದು ಕೇಂದ್ರ ವಿತ್ತ ಸಚಿವರಿಂದ ಬಜೆಟ್​ ಮಂಡನೆ; ಹೆಚ್ಚಿದ ನಿರೀಕ್ಷೆ

ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಇಂದು ಪ್ರಸಕ್ತ ವರ್ಷದ ಬಜೆಟ್​ (Budget 2022) ಮಂಡಿಸಲಿದ್ದಾರೆ. ವಿತ್ತ ಸಚಿವರ ನಾಲ್ಕನೇ ಬಜೆಟ್ ಭಾಷಣ ಇದಾಗಿದೆ. ಕೋವಿಡ್​ ಮೂರನೇ ಅಲೆ ಸಂದರ್ಭದಲ್ಲಿ ಮಂಡನೆಯಾಗುತ್ತಿರುವ ಈ ಬಜೆಟ್​ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ.

ಇಂದು ಬೆಳಗ್ಗೆ ಅವರು 11 ಗಂಟೆಗೆ ಬಜೆಟ್ ಮಂಡಿಸಲಿದ್ದಾರೆ. ಇದಕ್ಕೂ ಮುನ್ನ ಅವರು ಸಂಪುಟ ಸಭೆಯಲ್ಲಿ ಬಜೆಟ್​​ಗೆ ಅನುಮೋದನೆ ಪಡೆಯಲಿದ್ದಾರೆ. ಬಜೆಟ್​ ಮೊದಲ ದಿನ ಜಂಟಿ ಅಧಿವೇಶನದ ​ ಬಳಿಕ ಅವರು ಆರ್ಥಿಕ ಸಮೀಕ್ಷೆ (Economic Survey) ಮಂಡಿಸಿದ್ದಾರೆ. ಆರ್ಥಿಕತೆ 8 ರಿಂದ 8.5ರಷ್ಟು ಬೆಳವಣಿಗೆ ದರ ಕಂಡಿದೆ. ರಾಷ್ಟ್ರೀಯ ಅಂಕಿ ಅಂಶ ಕಚೇರಿ ಯೋಜಿಸಿರುವ ಪ್ರಸಕ್ತ ವರ್ಷದಲ್ಲಿನ 9.2ರಷ್ಟು ಜಿಡಿಪಿ ಕುಸಿತಗೊಂಡಿದೆ.

ಈ ಬಾರಿ ಬಜೆಟ್ ನಲ್ಲೂ ವೆಚ್ಚಕ್ಕೆ ಒತ್ತು ನೀಡಲಾಗಿದೆ. ಕೆಲವು ವರದಿಗಳು ಈ ಬಾರಿಯ ಸಾಮಾನ್ಯ ಬಜೆಟ್ 2001 ರ ಬಜೆಟ್‌ಗಿಂತ ಸುಮಾರು 14 ಪ್ರತಿಶತದಷ್ಟು ದೊಡ್ಡದಾಗಿದೆ ಎಂದು ಹೇಳಲಾಗಿದೆ. ಬಜೆಟ್​ ಮೇಲಿನ ಚರ್ಚೆಯ ಮೊದಲ ಅಧಿವೇಶನ ಫೆಬ್ರವರಿ 2 ಮತ್ತು 11 ರ ನಡುವೆ ನಡೆಯುತ್ತದೆ. ನಂತರ ಮಾರ್ಚ್ 14 ರಂದು ಮತ್ತು ಏಪ್ರಿಲ್ 8 ರಂದು ಕೊನೆಗೊಳ್ಳುತ್ತದೆ. ಈ ಬಾರಿ ಬಜೆಟ್​ ಅನ್ನು 90 ರಿಂದ 120 ನಿಮಿಷಗಳ ಕಾಲ ಸಚಿವರು ಮಂಡಿಸಲಿದ್ದಾರೆ.

ಪೇಪರ್ ಲೆಸ್​ ಬಜೆಟ್!​

ಕಳೆದ ವರ್ಷ ಕೋವಿಡ್‌ನಿಂದಾಗಿ ಮೊದಲ ಬಾರಿ ಕೇಂದ್ರ ಸಚಿವರು ಸಂಪೂರ್ಣ ಪೇಪರ್‌ ಲೆಸ್‌ ಬಜೆಟ್‌ ಅನ್ನು ಮಂಡಿಸಿ ಎಲ್ಲರ ಗಮನ ಸೆಳೆದಿದ್ದರು. ಈ ಬಾರಿಯೂ ಕೂಡ ಅವರು ಪೇಪರ್‌ಲೆಸ್‌ ಬಜೆಟ್‌ ಮಂಡನೆ ಮಾಡಲಿದ್ದಾರೆ

ಉದ್ಯೋಗ ಹೆಚ್ಚಳಕ್ಕೆ ಒತ್ತು
ಇನ್ನು ಈ ಬಾರಿ ಬಜೆಟ್​ನಲ್ಲಿ ಮೂಲಸೌಕರ್ಯಗಳ ಬಲ ಮತ್ತು ಉದ್ಯೋಗವನ್ನು ಹೆಚ್ಚಿಸಲು ಸರ್ಕಾರವು ಹೆಚ್ಚಿನ ಒತ್ತು ನೀಡಲಿದೆ. ಇದರ ಜೊತೆಗೆ ತೆರಿಗೆ ದರಗಳ ಮೇಲೆ ಪರಿಹಾರವನ್ನು ನೀಡುವ ಭರವಸೆ ಇದೆ. ಕೋವಿಡ್​ ಆರ್ಧಿಕತೆ ಮೇಲೆ ಪರಿಣಾಮ ಬೀರಿದ್ದು, ಹೊಸ ಯೋಜನೆಗಳ ಘೋಷಣೆಗಳ ಬಗ್ಗೆ ಹೆಚ್ಚಿನ ನಿರೀಕ್ಷೆ ಇಲ್ಲದಂತೆ ಮಾಡಿದೆ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ.

ಮೂಲಭೂತ ಸೌಕರ್ಯ ವಲಯದ ದೊಡ್ಡ ಯೋಜನೆಗಳಿಗೆ ಹಣವನ್ನು ಒದಗಿಸಲು, ಈ ಬಾರಿಯೂ ಸರ್ಕಾರವು ಹೆಚ್ಚಾಗಿ ಸಾಲದ ಮೇಲೆ ಅವಲಂಬಿತವಾಗಿದೆ. ಬಜೆಟ್‌ನಲ್ಲಿ ಮತ್ತೊಮ್ಮೆ ಬಂಡವಾಳ ಹಿಂತೆಗೆದುಕೊಳ್ಳುವ ಮೂಲಕ ಸರ್ಕಾರಿ ಆಸ್ತಿಗಳನ್ನು ಮಾರಾಟ ಮಾಡುವ ಮೂಲಕ ನಿಧಿ ಸಂಗ್ರಹಕ್ಕೆ ಒತ್ತು ನೀಡಲಾಗುವುದು. ಇದಲ್ಲದೇ 13 ಲಕ್ಷ ಕೋಟಿಯಷ್ಟು ದೊಡ್ಡ ಸಾಲವನ್ನೂ ಪಡೆಯಬಹುದು. 2021 ರ ಬಜೆಟ್‌ನಲ್ಲಿ ಸರ್ಕಾರವು 12.05 ಲಕ್ಷ ಕೋಟಿ ರೂಪಾಯಿ ಸಾಲವನ್ನು ಘೋಷಿಸಿತ್ತು.

ಆರೋಗ್ಯ ಸೌಲಭ್ಯಕ್ಕೆ ಒತ್ತು

ಕೊರೊನಾ ಮಹಾಮಾರಿಯಲ್ಲಿ ಆರೋಗ್ಯ ಸೇವೆಗಳ ವೆಚ್ಚ ಗಣನೀಯವಾಗಿ ಏರಿಕೆಯಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಸರ್ಕಾರವು ಆರೋಗ್ಯ ವಿಮೆಯ ಮೇಲೆ ಲಭ್ಯವಿರುವ ತೆರಿಗೆ ವಿನಾಯಿತಿಯ ವ್ಯಾಪ್ತಿಯನ್ನು ಹೆಚ್ಚಿಸಬಹುದು. ಇದರಿಂದ ಜನಸಾಮಾನ್ಯರಿಗೆ ನೆಮ್ಮದಿ ಸಿಗುವುದಲ್ಲದೆ, ಆರೋಗ್ಯ ವಿಮೆಯ ಬೇಡಿಕೆಯೂ ಹೆಚ್ಚಾಗಬಹುದು. ಸ್ಥಗಿತಗೊಂಡಿರುವ ಮತ್ತು ಚಾಲ್ತಿಯಲ್ಲಿರುವ ಮೂಲಸೌಕರ್ಯ ಯೋಜನೆಗಳ ದೀರ್ಘಾವಧಿಯ ಹಣಕಾಸು ಅಗತ್ಯಗಳನ್ನು ಪೂರೈಸಲು ಅನಿವಾರ್ಯವಾಗಿದೆ.

ಆದಾಯ ತೆರಿಗೆಯ ಹೊಸ ಸ್ಲ್ಯಾಬ್
ಈ ಬಾರಿ ಬಜೆಟ್ ನಲ್ಲಿ ಆದಾಯ ತೆರಿಗೆಯ ಹೊಸ ಸ್ಲ್ಯಾಬ್ ಅನ್ನು ಆಕರ್ಷಕವಾಗಿಸಲು, ಅದಕ್ಕೆ ಕೆಲವು ಪರಿಹಾರಗಳನ್ನು ಸೇರಿಸಬಹುದು. ಹೊಸ ಸ್ಲ್ಯಾಬ್‌ನಲ್ಲಿ ಹೆಚ್ಚಿನ ಆದಾಯದ ಮಿತಿಯನ್ನು 15 ಲಕ್ಷದಿಂದ 20 ಲಕ್ಷಕ್ಕೆ ಹೆಚ್ಚಿಸಬಹುದು. ಹೊಸ ಸ್ಲ್ಯಾಬ್‌ನಲ್ಲಿ ಗೃಹ ಸಾಲದ ರಿಯಾಯಿತಿಗಳನ್ನು ಸಹ ಸೇರಿಸಬಹುದು. ಹಳೆಯ ಸ್ಲ್ಯಾಬ್‌ನಲ್ಲಿರುವ ಕೆಲವು ವಿಭಾಗಗಳಲ್ಲಿ ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸಬಹುದು.

Spread the love
  • Related Posts

    ದ.ಕ ಜಿಲ್ಲೆಯಲ್ಲಿ ಮುಂದುವರಿದ ಮಳೆ ಹಿನ್ನೆಲೆ ಆಗಸ್ಟ್ 30 ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    ಮಂಗಳೂರು: ಬಾರಿ ಮಳೆ ಹಿನ್ನೆಲೆಯಲ್ಲಿ 30/08/2025ನೇ ಶುಕ್ರವಾರ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಡಳಿತ ಆದೇಶವನ್ನು ಹೊರಡಿಸಿದೆ. Spread the love

    Spread the love

    ಉಚಿತ ಟೈಲರಿಂಗ್ ತರಬೇತಿ ಉದ್ಘಾಟನೆ

    ಸಕಲೇಶಪುರ: ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹಾನುಬಾಳು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಸಕಲೇಶಪುರ ವತಿಯಿಂದ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಉಚಿತ ಟೈಲರಿಂಗ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಪರಮ ಪೂಜ್ಯ ಶ್ರೀ ಡಾ.ಡಿ ವಿರೇಂದ್ರ…

    Spread the love

    You Missed

    ದ.ಕ ಜಿಲ್ಲೆಯಲ್ಲಿ ಮುಂದುವರಿದ ಮಳೆ ಹಿನ್ನೆಲೆ ಆಗಸ್ಟ್ 30 ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    • By admin
    • August 29, 2025
    • 279 views
    ದ.ಕ ಜಿಲ್ಲೆಯಲ್ಲಿ ಮುಂದುವರಿದ ಮಳೆ ಹಿನ್ನೆಲೆ ಆಗಸ್ಟ್ 30 ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    ಉಚಿತ ಟೈಲರಿಂಗ್ ತರಬೇತಿ ಉದ್ಘಾಟನೆ

    • By admin
    • August 29, 2025
    • 45 views
    ಉಚಿತ ಟೈಲರಿಂಗ್ ತರಬೇತಿ ಉದ್ಘಾಟನೆ

    ಬಾರಿ ಮಳೆ ಹಿನ್ನೆಲೆಯಲ್ಲಿ ನಾಳೆ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ,PUಕಾಲೇಜಿಗೆ ರಜೆ ಘೋಷಣೆ

    • By admin
    • August 28, 2025
    • 315 views
    ಬಾರಿ ಮಳೆ ಹಿನ್ನೆಲೆಯಲ್ಲಿ ನಾಳೆ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ,PUಕಾಲೇಜಿಗೆ ರಜೆ ಘೋಷಣೆ

    ಬೆಳ್ತಂಗಡಿ ತಾಲೂಕಿನ ನಿರಂತರ ಮಳೆ ಹಿನ್ನೆಲೆಯಲ್ಲಿ ಪ್ರಾಥಮಿಕ, ಪ್ರೌಢ ಶಾಲೆಗೆ ರಜೆ ಘೋಷಣೆ

    • By admin
    • August 28, 2025
    • 53 views
    ಬೆಳ್ತಂಗಡಿ ತಾಲೂಕಿನ ನಿರಂತರ ಮಳೆ ಹಿನ್ನೆಲೆಯಲ್ಲಿ ಪ್ರಾಥಮಿಕ, ಪ್ರೌಢ ಶಾಲೆಗೆ ರಜೆ ಘೋಷಣೆ

    ನಾಡಿನ ವಿವಿಧೆಡೆ ಗಣೇಶೋತ್ಸವದ ಸಂಭ್ರಮ ಸಡಗರ ಒಂದೆಡೆ ವೀಕ್ಷಿಸಿ ಹಲವು ಗಣಪ

    • By admin
    • August 27, 2025
    • 110 views
    ನಾಡಿನ ವಿವಿಧೆಡೆ ಗಣೇಶೋತ್ಸವದ ಸಂಭ್ರಮ ಸಡಗರ ಒಂದೆಡೆ ವೀಕ್ಷಿಸಿ ಹಲವು ಗಣಪ

    ಶ್ರೀ ಮಹಾಗಣಪತಿ ದೇವಸ್ಥಾನ ಸುಂಕದ ಕಟ್ಟೆ ಅಳದಂಗಡಿ ಇದರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಶಶಿಧರ ಡೋಂಗ್ರೆ ಆಯ್ಕೆ

    • By admin
    • August 25, 2025
    • 52 views
    ಶ್ರೀ ಮಹಾಗಣಪತಿ ದೇವಸ್ಥಾನ ಸುಂಕದ ಕಟ್ಟೆ ಅಳದಂಗಡಿ ಇದರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಶಶಿಧರ ಡೋಂಗ್ರೆ  ಆಯ್ಕೆ