ತೆಂಗು ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿಸಿದ ಕೊಬ್ಬರಿ ಧಾರಣೆ ಕೊಬ್ಬರಿ ಬೆಲೆಯಲ್ಲೀ ದಿಢೀರ್ ಏರಿಕೆ

ತುಮಕೂರು: ಕೊಬ್ಬರಿ ಬೆಳೆಗಾರರಿಗೆ ಸಿಹಿ ಸುದ್ದಿ ಇಲ್ಲಿದೆ. ಕೊಬ್ಬರಿ ಬೆಲೆ ದಿಢೀರ್ ಏರಿಕೆ ಕಂಡಿದ್ದು, 16 ಸಾವಿರ ರೂಪಾಯಿ ತಲುಪಿದೆ.

ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಕ್ವಿಂಟಾಲ್ ಗೆ 13 ಸಾವಿರ ರೂಪಾಯಿಗೆ ಮಾರಾಟವಾಗುತ್ತಿದ್ದ ಕೊಬ್ಬರಿ ದರ 16 ಸಾವಿರ ರೂಪಾಯಿಗೆ ತಲುಪಿದೆ. ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಇತ್ತೀಚೆಗೆ ಕಡಿಮೆಯಾಗಿತ್ತು. ಮಾರ್ಚ್ ನಿಂದ ಜೂನ್ ವರೆಗೆ ಒಂದು ಕ್ವಿಂಟಾಲ್ ಗೆ 10 ಸಾವಿರ ರೂಪಾಯಿಯವರೆಗೆ ದರ ಇತ್ತು.

READ ALSO

ಬಲಿಕ ದಿಢೀರನೆ ದರ ಕುಸಿದು 9200 ರೂಪಾಯಿ ತಲುಪಿತು. ಬೆಳೆಗಾರರು ಸಹಾಯಧನದೊಂದಿಗೆ ಖರೀದಿ ಕೇಂದ್ರಕ್ಕೆ ಒತ್ತಾಯ ಮಾಡಿದ್ದರು. ದೀಪಾವಳಿ ನಂತರ ಏರಿಕೆ ಹಾದಿ ಹಿಡಿದ ಕೊಬ್ಬರಿ ದರ 12 ರಿಂದ 13 ಸಾವಿರ ರೂಪಾಯಿಗೆ ಮಾರಾಟವಾಗಿದ್ದು, ಈಗ 16 ಸಾವಿರ ರೂಪಾಯಿಗೆ ತಲುಪಿದೆ ಎಂದು ಹೇಳಲಾಗಿದೆ.