ಕೊರೋನಾದಿಂದ ಮೃತಪಟ್ಟ ಮಹಿಳೆಯ ಮೊಬೈಲ್ ನಾಪತ್ತೆ! ಆ ಮೊಬೈಲ್ ನಲ್ಲಿತ್ತು ಅಮ್ಮನ ಸವಿ ನೆನಪುಗಳ ಪೋಟೋ…! ದಯವಿಟ್ಟು ಅಮ್ಮನ ಮೊಬೈಲ್ ಹುಡಕಿಕೊಡಿ ಎಂದು ಜಿಲ್ಲಾಧಿಕಾರಿಗೆ ಪತ್ರ ಬರೆದ ಮಗಳು…

ಕೊಡಗು: ಕೊರೊನಾದಿಂದ ಸಾವನ್ನಪ್ಪಿದ ಮಹಿಳೆಯ ಮೊಬೈಲ್ ಕಳ್ಳತನ ಮಾಡಿರುವ ಘಟನೆ ಕೊಡಗು ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಕೊಡಗು ಜಿಲ್ಲೆಯ ಕುಶಾಲನಗರದ ಗುಮ್ಮನಕೊಲ್ಲಿ ಗ್ರಾಮದ ಪ್ರಭಾ ಎಂಬವರು ಕೊರೊನಾ ಹಿನ್ನೆಲೆ ಮೇ 6 ರಂದು ಕೊಡಗು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಮೇ  16 ರಂದು ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು.  ಈ ವೇಳೆ ಅವರ ಮೊಬೈಲ್ ನ್ನು ಪಾಪಿಗಳು ಯಾರೋ ಕದ್ದಿದ್ದಾರೆ. ಇದೀಗ ಅವರ ಪುಟ್ಟ ಮಗಳು ಅಮ್ಮನ ಮೊಬೈಲ್ ದಯವಿಟ್ಟು ಹುಡುಕಿ ಕೊಡಿ, ತೆಗೆದುಕೊಂಡವರು ದಯವಿಟ್ಟು ವಾಪಾಸ್ ಕೊಡಿ ಎಂದು ಅಂಗಲಾಚುತ್ತಿದ್ದಾಳೆ.

ಅಲ್ಲದೇ ಅದರಲ್ಲಿ ನನ್ನ ಅಮ್ಮನ ಸವಿ ನೆನಪುಗಳಿವೆ. ಅದರಲ್ಲಿ ಆಕೆಯ ಫೋಟೋಗಳಿವೆ ಎಂದು  ಬೇಡಿಕೊಂಡಿದ್ದಾಳೆ. ಅಲ್ಲದೇ ಪತ್ರ ಕೂಡ ಬರೆದಿದ್ದಾಳೆ.

ಪತ್ರದಲ್ಲಿ ಏನಿದೆ?

ಕೊಡಗು ಜಿಲ್ಲಾಧಿಕಾರಿಗಳು ಮತ್ತು ಶಾಸಕರುಗಳು ಹಾಗೂ ಜಿಲ್ಲಾ ಕೋವಿಡ್ ಆಸ್ಪತ್ರೆ ಸಿಬ್ಬಂದಿಗಳಲ್ಲಿ ಮನವಿ..

ಸುಮಾರು 15 ದಿನಗಳ ಹಿಂದೆ ನಾನು ಮತ್ತು ಅಪ್ಪ, ಅಮ್ಮ ಅವರು ಕೋವಿಡ್ ಗೆ ತುತ್ತಾಗಿದ್ದು, ತಾಯಿಯವರು 15 ದಿನಗಳ ಹಿಂದೆ ಕೋವಿಡ್ ಆಸ್ಪತ್ರೆ, ಮಡಿಕೇರಿ ಇಲ್ಲಿಗೆ ಕಾಯಿಲೆ ಉಲ್ಬಣಗೊಂಡು, ಸೇರಿರುತ್ತಾರೆ.

ನಾನು ಮತ್ತು ಅಪ್ಪ, ಹೋಂ ಕ್ವಾರೆಂಟ್ ಆಗಿದ್ದು, ಹೊರಗೆ ಬರಲಾರದ ಸ್ಥಿತಿಯಲ್ಲಿದ್ದು, ತಂದೆಯವರು ದಿನಗೂಲಿ ನೌಕರರಾಗಿದ್ದು, ಅಕ್ಕ-ಪಕ್ಕದವರ ಸಹಾಯದಿಂದ ಈ ದಿನಗಳನ್ನು ಕಳೆದೆವು.

ದಿನಾಂಕ 16-05-2021ರಂದು ನಮ್ಮ ತಾಯಿಯವರು ಮೃತರಾದರು. ಅವರ ಜೊತೆಯಲ್ಲಿ ಇದ್ದಂತಹ ಮೊಬೈಲ್ ಅನ್ನು ಯಾರೋ ತೆಗೆದುಕೊಂಡಿರುತ್ತಾರೆ. ನಾನು ತಬ್ಬಲಿಯಾಗಿದ್ದು, ನನ್ನ ತಾಯಿಯ ನೆನಪುಗಳು ಆ ಮೊಬೈಲ್ ನಲ್ಲಿ ಇರುತ್ತದೆ. ಆದ್ದರಿಂದ ಯಾರಾದರೂ ತೆಗೆದುಕೊಂಡಿದ್ದಾರೆ ಅಥವಾ ಸಿಕ್ಕಿದ್ದರೆ, ದಯವಿಟ್ಟು ಈ ತಬ್ಬಲಿಯ ವಿಳಾಸ ಹಾರಂಗಿ ರಸ್ತೆ, ಗುಮ್ಮನಕೊಲ್ಲಿ ಗ್ರಾಮ, ಬಸಪ್ಪ ಬಡಾವಣೆ, ಕುಶಾಲನಗರ-571234, ಕೊಡಗು ಜಿಲ್ಲೆ ಇಲ್ಲಿಗೆ ತಲುಪಿಸಿ ಕೊಡಬೇಕಾಗಿ ಕೇಳಿಕೊಳ್ಳುತ್ತೇನೆ.

ಇಂತಿ……… ತಾಯಿಯನ್ನು ಕಳೆದುಕೊಂಡ ನತದೃಷ್ಟೆ, ಹೃತಿಕ್ಷ

ಹೀಗೆಂದು ಬರೆದುಕೊಂಡಿದ್ದು ಬಾಲಕಿಯ ಮನವಿ ಪತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೇ ಅನೇಕರು ಮೊಬೈಲ್ ಕದ್ದವರು ದಯವಿಟ್ಟು ವಾಪಾಸ್ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

Spread the love
  • Related Posts

    ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಪ್ರಮುಖರ ಸಭೆ ಆಯೋಜಿಸಿದ ಕೇಂದ್ರ ಸಚಿವ ಎಚ್ ಡಿ ಕೆ

    ನವದೆಹಲಿ: ಕೇಂದ್ರ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಮೂವರು ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಪ್ರಮುಖರನ್ನು ನವದೆಹಲಿಗೆ ಕರೆಸಿ, ಅವರ ಜತೆಯಲ್ಲಿ ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ…

    Spread the love

    ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ನೂತನ ಧ್ವಜಸ್ತಂಭಕ್ಕೆ ಧರ್ಮಸ್ಥಳದಲ್ಲಿ ವಿಷೇಶ ಪೂಜೆ

    ಧರ್ಮಸ್ಥಳ: ಶ್ರೀ ಸದಾಶಿವೇಶ್ವರ ದೇವಸ್ಥಾನ ಸಂಗಮ ಕ್ಷೇತ್ರಕ್ಕೆ ಮುಂಚಾನ ಶ್ರೀ ಮಹಾದೇವಿಕೃಪಾ ಮನೆಯ ಸುಕನ್ಯಾ ಮತ್ತು ಜಯರಾಮ ರಾವ್ ಮತ್ತು ಮಕ್ಕಳು ಸಮರ್ಪಿಸಲಿರುವ ನೂತನ ಶಿಲಾಮಯ ಧ್ವಜಸ್ಥಂಭವು ಕಾರ್ಕಳದಿಂದ ಹೊರಟು ಬೆಳ್ತಂಗಡಿ ಮಾರ್ಗವಾಗಿ ಡಿ.4ರಂದು ಧರ್ಮಸ್ಥಳ ತಲುಪಿ ಧರ್ಮಸ್ಥಳ ಅಣ್ಣಪ್ಪ ಬೆಟ್ಟದಲ್ಲಿ…

    Spread the love

    You Missed

    ಜೇಸಿ ಉತ್ಸವ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ: ಪುಷ್ಠಿ ಮುಂಡಾಜೆ ಪ್ರಥಮ

    • By admin
    • December 8, 2025
    • 16 views
    ಜೇಸಿ ಉತ್ಸವ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ: ಪುಷ್ಠಿ ಮುಂಡಾಜೆ ಪ್ರಥಮ

    ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಪ್ರಮುಖರ ಸಭೆ ಆಯೋಜಿಸಿದ ಕೇಂದ್ರ ಸಚಿವ ಎಚ್ ಡಿ ಕೆ

    • By admin
    • December 4, 2025
    • 34 views
    ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಪ್ರಮುಖರ ಸಭೆ ಆಯೋಜಿಸಿದ ಕೇಂದ್ರ ಸಚಿವ ಎಚ್ ಡಿ ಕೆ

    ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ನೂತನ ಧ್ವಜಸ್ತಂಭಕ್ಕೆ ಧರ್ಮಸ್ಥಳದಲ್ಲಿ ವಿಷೇಶ ಪೂಜೆ

    • By admin
    • December 4, 2025
    • 55 views
    ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ನೂತನ ಧ್ವಜಸ್ತಂಭಕ್ಕೆ ಧರ್ಮಸ್ಥಳದಲ್ಲಿ ವಿಷೇಶ ಪೂಜೆ

    ಸೇವಾ ಭಾರತಿಯ ನೂತನ ಕಾರ್ಯಾಲಯ ಸೇವಾನಿಕೇತನ’ದ ಉದ್ಘಾಟನೆ ಹಾಗೂ 21ನೇ ವರ್ಷದ ಸಂಭ್ರಮ ಕಾರ್ಯಕ್ರಮ

    • By admin
    • December 4, 2025
    • 36 views
    ಸೇವಾ ಭಾರತಿಯ ನೂತನ ಕಾರ್ಯಾಲಯ ಸೇವಾನಿಕೇತನ’ದ ಉದ್ಘಾಟನೆ ಹಾಗೂ 21ನೇ ವರ್ಷದ ಸಂಭ್ರಮ ಕಾರ್ಯಕ್ರಮ

    ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ಉಪರಾಷ್ಟ್ರಪತಿ ಭೇಟಿ

    • By admin
    • December 4, 2025
    • 43 views
    ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ಉಪರಾಷ್ಟ್ರಪತಿ ಭೇಟಿ

    ಯುವಜನತೆ ದುಶ್ಚಟಗಳಿಂದ ದೂರವಿದ್ದು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ: ಡಾ.ನವೀನ್ ಚಂದ್ರ ಶೆಟ್ಟಿ

    • By admin
    • December 2, 2025
    • 72 views
    ಯುವಜನತೆ ದುಶ್ಚಟಗಳಿಂದ ದೂರವಿದ್ದು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ: ಡಾ.ನವೀನ್ ಚಂದ್ರ ಶೆಟ್ಟಿ