ಮಂಗಳೂರಿನ ಖ್ಯಾತ ಸ್ಯಾಕ್ಸೋಫೋನ್ ಕಲಾವಿದ ಮಚೇಂದ್ರನಾಥ್ ಕೊರೋನಾಗೆ ಬಲಿ!

ಮಂಗಳೂರು: ಖ್ಯಾತ ಸ್ಯಾಕ್ಸೋಫೋನ್ ಕಲಾವಿದ ಮಚೇಂದ್ರನಾಥ್ ಭಾನುವಾರ ಸಂಜೆ ಮಾರಕ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.

ದೇರಳಕಟ್ಟೆಯ ಖಾಸಗಿ ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಿಕಾರಿಯಾಗದೆ ಇಂದು ಕೋವಿಡ್ ಸೋಂಕಿನಿಂದ ಮೃತರಾಗಿದ್ದಾರೆ. ಕೆಲದಿನಗಳ ದಿನ ಹಿಂದೆ ಅವರ ಪತ್ನಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದರು.

READ ALSO

ಸ್ಯಾಕ್ಸೋಫೋನ್ ಕಲಾವಿದರಾಗಿದ್ದ ಮಚೇಂದ್ರನಾಥ್ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಸಂಘಟನೆಗಳು ಅವರನ್ನು ಸನ್ಮಾನಿಸಿದ್ದವು. ದೇಶ ವಿದೇಶಗಳಲ್ಲಿ ಹಲವಾರು ಸಂಗೀತ ಕಚೇರಿಗಳನ್ನು ನಡೆಸಿದ್ದರು. ಮಚೇಂದ್ರನಾಥ್ ಅವರ ಮಗಳು ಸಿಂಧು ಭೈರವಿ ಅಂತರಾಷ್ಟ್ರಮಟ್ಟದ ಸ್ಯಾಕ್ಸೋಫೋನ್ ಕಲಾವಿದೆಯಾಗಿದ್ದಾರೆ.