ಯೆನೇಪೋಯಾ ಶಿಕ್ಷಣ ಸಂಸ್ಥೆಗೆ ಕೊರೋನಾ ಶಾಕ್! 9 ಶಿಕ್ಷಣ ಸಂಸ್ಥೆಗಳನ್ನು ಬಂದ್ ಮಾಡಲು ಆಡಳಿತ ಮಂಡಳಿಯ ನಿರ್ಧಾರ!

ಮಂಗಳೂರು: ಯೆನೇಪೋಯಾ ಶಿಕ್ಷಣ ಸಂಸ್ಥೆಗೆ ಕೊರೋನಾ ಶಾಕ್ ನೀಡಿದ್ದು ಕಳೆದ 4ದಿನಗಳಲ್ಲಿ 20ಕ್ಕೂ ಅಧಿಕ ಪಾಸಿಟಿವ್ ವರದಿ ಬಂದ ಹಿನ್ನಲೆಯಲ್ಲಿ 9 ಶಿಕ್ಷಣ ಸಂಸ್ಥೆಗಳನ್ನು ಬಂದ್ ಮಾಡಲು ಆಡಳಿತ ಮಂಡಳಿಯ ನಿರ್ಧರಿಸಿದೆ. ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರಿನ ಯೇನಪೋಯ ಡೀಮ್ಡ್ ಯುನಿವರ್ಸಿಟಿಗೆ ಒಳಪಟ್ಟ ಬಹುತೇಕ ಮೆಡಿಕಲ್ ಕಾಲೇಜು ವಿಭಾಗಗಳನ್ನು ದಿಢೀರ್ ಆಗಿ ಮುಚ್ಚಲಾಗಿದೆ. 

ಈ ಬಗ್ಗೆ ಯೇನಪೋಯ ವಿವಿಯ ರಿಜಿಸ್ಟ್ರಾರ್ ಡಾ. ಗಂಗಾಧರ ಸೋಮಯಾಜಿ ಆಯಾ ಕಾಲೇಜುಗಳಿಗೆ ಸುತ್ತೋಲೆ ಕಳುಹಿಸಿದ್ದು ಮುಂದಿನ ಆದೇಶದ ವರೆಗೆ ಕಾಲೇಜು ಮುಚ್ಚುವಂತೆ ಸೂಚನೆ ನೀಡಿದ್ದಾರೆ. 

READ ALSO

ಯೇನಪೋಯ ಮೆಡಿಕಲ್ ಕಾಲೇಜು, ಯೇನಪೋಯ ಡೆಂಟಲ್, ನರ್ಸಿಂಗ್, ಫಿಸಿಯೋಥೆರಪಿ, ಫಾರ್ಮಸಿ ಮತ್ತು ರೀಸರ್ಚ್ ಸೆಂಟರ್, ಅಲೈಡ್ ಹೆಲ್ತ್ ಕೇರ್ ಪ್ರೊಫೆಶನಲ್, ಆಯುರ್ವೇದ ಕಾಲೇಜು, ಹೋಮಿಯೋಪತಿ ಮತ್ತು ನ್ಯಾಚುರೋಪತಿ ಕಾಲೇಜು ವಿಭಾಗವನ್ನು ಮುಚ್ಚುವಂತೆ ಆದೇಶದಲ್ಲಿ ಸೂಚನೆ ನೀಡಿದ್ದಾರೆ. 

Not wearing a mask is now a public offence in Bengaluru - The Week

ಹೀಗಿದ್ದರೂ ಪಿಜಿ ಕಲಿಯುವ ವಿದ್ಯಾರ್ಥಿಗಳು ಮತ್ತು ನರ್ಸಿಂಗ್ ಸ್ಟಾಫ್ ಕಾಲೇಜಿಗೆ ಹಾಜರಾಗಲು ಸೂಚಿಸಲಾಗಿದೆ. ಮೆಡಿಕಲ್ ಕಾಲೇಜು ಆಸ್ಪತ್ರೆಯೂ ಎಂದಿನಂತೆ ಕಾರ್ಯ ನಿರ್ವಹಿಸಲಿದೆ. ಶಿಕ್ಷಕ ಮತ್ತು ಶಿಕ್ಷಕೇತರ ಸಿಬಂದಿಯೂ ಕರ್ತವ್ಯಕ್ಕೆ ಹಾಜರಾಗಬೇಕು. ವಿದ್ಯಾರ್ಥಿಗಳಿಗೆ ಆನ್ಲೈನ್ ಕ್ಲಾಸ್ ಮುಂದುವರಿಯಲಿದೆ ಎಂದು ಆದೇಶದಲ್ಲಿ ಹೇಳಿರುವ ರಿಜಿಸ್ಟ್ರಾರ್, ಆದೇಶ ಪತ್ರದಲ್ಲಿ ಕೊರೊನಾ ಸೋಂಕಿನ ಬಗ್ಗೆ ಉಲ್ಲೇಖ ಮಾಡಿಲ್ಲ. ಅದರ ಕಾರಣ ಕಾಲೇಜು ಬಂದ್ ಮಾಡುತ್ತಿದ್ದೇವೆ ಎಂದೂ ತಿಳಿಸಿಲ್ಲ. 

ಮಾಹಿತಿ ಪ್ರಕಾರ ಯೇನಪೋಯ ಕಾಲೇಜಿನ ಹಾಸ್ಟೆಲಿನಲ್ಲಿ 20 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ನಿನ್ನೆ ದೃಢಪಟ್ಟಿತ್ತು. ಆದರೆ, ಇಂದು ಅತಿ ಹೆಚ್ಚು ಮಂದಿಗೆ ಸೋಂಕು ಹರಡಿರುವ ಸಾಧ್ಯತೆಯಿದ್ದು ಇಡೀ ಮೆಡಿಕಲ್ ಕಾಲೇಜನ್ನೇ ಬಂದ್ ಮಾಡಿದ್ದಾರೆ.