ಕಲ್ಪನಾಶಕ್ತಿಯು ಜ್ಞಾನಕ್ಕಿಂತ ಬಲಶಾಲಿ: ಡಾ.ಎಸ್. ಸತೀಶ್ಚಂದ್ರ “ದರ್ಪಣ ಇದು ಅರಿವಿನ ದೀವಿಗೆ” ತಂಡ ರಾಜ್ಯ ಮಟ್ಟದ ಕೃಷಿ ಅನುಭವ ಚಿತ್ರಬರಹ ಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ

ಉಜಿರೆ: ದರ್ಪಣ ಇದು ಅರಿವಿನ ದೀವಿಗೆ ತಂಡ ಮಡಿಲು ಸಾಂಸ್ಕೃತಿಕ ಟ್ರಸ್ಟ್ ಹಾಗೂ ರೇಡಿಯೋ ನಿನಾದದ ಸಹಯೋಗದೊಂದಿಗೆ ಆಯೋಜಿಸಿದ್ದ ರಾಜ್ಯ ಮಟ್ಟದ ಕೃಷಿ ಅನುಭವ ಚಿತ್ರಬರಹ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವು ಉಜಿರೆಯ ಎಸ್‌.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ನೆರವೇರಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎಸ್. ಸತೀಶ್ಚಂದ್ರ ಮಾತನಾಡಿ ಮುಖ್ಯವಾಹಿನಿಯ ಅವಕಾಶಗಳನ್ನು ವಿಸ್ತರಿಸುತ್ತಾ, ಸವಾಲುಗಳನ್ನು ಎದುರಿಸುತ್ತಾ ಮುನ್ನಡೆಯಬೇಕು‌. ಕಲ್ಪನೆಗಳಿಗೆ ಕಡಿವಾಣ ಇರಬಾರದು, ಕಲ್ಪನಾಶಕ್ತಿಯು ಜ್ಞಾನಕ್ಕಿಂತ ಬಲಶಾಲಿ. ಮಾನವ ಸಂಪನ್ಮೂಲವಾಗುವುದು ಒಬ್ಬ ವ್ಯಕ್ತಿಯು ಪರಿಪೂರ್ಣ ಆದಾಗ ಮಾತ್ರ. ಉದಾತ್ತ ಚಿಂತನೆಗಳನ್ನು ಎಲ್ಲಾ ಕಡೆಯಿಂದಲೂ ಪಡೆದುಕೊಳ್ಳುವಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು ಎಂದರು.
ವೇದಿಕೆಯಲ್ಲಿ ಅಂತರರಾಜ್ಯ ಮಟ್ಟದ ಕ್ರೀಡಾ ನಿರೂಪಕ ವಿಜಯ ಗೌಡ ಅತ್ತಾಜೆ ಉಪಸ್ಥಿತರಿದ್ದು ವಿಜೇತರಿಗೆ ಬಹುಮಾನ ವಿತರಿಸಿದರು.

ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ್ ಹೆಗ್ಡೆ ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ದರ್ಪಣ ತಂಡದ ಸದಸ್ಯರು, ಪದ್ಮಶ್ರೀ ಫೌಂಡೇಶನ್ ತಂಡದ ಸದಸ್ಯರು, ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ದರ್ಪಣ ಇದು ಅರಿವಿನ ದೀವಿಗೆ ತಂಡ ರಾಜ್ಯ ಮಟ್ಟದ ಕೃಷಿ ಅನುಭವ ಚಿತ್ರಬರಹ ಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆಯನ್ನು ಲಾಕ್ ಡೌನ್ ಅವಧಿಯಲ್ಲಿ ಅಂತರ್ಜಾಲದ ಮೂಲಕ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿತ್ತು. ರಾಜ್ಯದ ವಿವಿಧ ಭಾಗಗಳಿಂದ 150ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪೃಥ್ವೀಶ್ ಧರ್ಮಸ್ಥಳ ವಂದಿಸಿ, ವಿದ್ಯಾರ್ಥಿ ಶಂತನು ಕಾರ್ಯಕ್ರಮ ನಿರೂಪಿಸಿದರು.

✍🏻 ವರದಿ : ರಶ್ಮಿಯಾದವ್

Spread the love
  • Related Posts

    ಬೆಳ್ತಂಗಡಿ: ‘ಡ್ರಗ್ಸ್ ಮುಕ್ತ ಬೆಳ್ತಂಗಡಿ’ ಜಾಗೃತಿ ಅಭಿಯಾನಕ್ಕೆ ಯುವ ಕಾಂಗ್ರೆಸ್ ಚಾಲನೆ

    ಬೆಳ್ತಂಗಡಿ:ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಯುವಜನರಲ್ಲಿ ಜಾಗೃತಿ ಮೂಡಿಸುವ ಹಾಗೂ ಬೆಳ್ತಂಗಡಿ ತಾಲೂಕನ್ನು ಮಾದಕ ವಸ್ತು ಮುಕ್ತಗೊಳಿಸುವ ಉದ್ದೇಶದಿಂದ ಯುವ ಕಾಂಗ್ರೆಸ್ ಬೆಳ್ತಂಗಡಿ ವತಿಯಿಂದ ‘ಡ್ರಗ್ಸ್ ಮುಕ್ತ ಬೆಳ್ತಂಗಡಿ’ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. “ನಶೆ ಬೇಡ… ನಾಳೆಯ ಭವಿಷ್ಯ ಬೇಕು” ಹಾಗೂ…

    Spread the love

    ಚಾರ್ಮಾಡಿ ಘಾಟಿಯಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವ ಏಕದಂತ

    ಬೆಳ್ತಂಗಡಿ: ಚಾರ್ಮಾಡಿ ಘಾಟಿಯಲ್ಲಿ ಭಾನುವಾರ ರಾತ್ರಿ ಮತ್ತೆ ದೈತ್ಯ ಗಾತ್ರದ ಕಾಡಾನೆ ಕಂಡುಬಂದಿದೆ. ಘಾಟಿ ಭಾಗದಲ್ಲಿ ಆಗಾಗ ಕಾಣಸಿಗುವ ಈ ಕಾಡಾನೆ ರಸ್ತೆ ಬದಿ ನಿಂತಿದ್ದು ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ತೆರಳಿದ್ದು ಕಾಡಾನೆಯನ್ನು ಕಾಡಿಗಟ್ಟುವ…

    Spread the love

    You Missed

    ಬೆಳ್ತಂಗಡಿ: ‘ಡ್ರಗ್ಸ್ ಮುಕ್ತ ಬೆಳ್ತಂಗಡಿ’ ಜಾಗೃತಿ ಅಭಿಯಾನಕ್ಕೆ ಯುವ ಕಾಂಗ್ರೆಸ್ ಚಾಲನೆ

    • By admin
    • August 10, 2026
    • 4 views
    ಬೆಳ್ತಂಗಡಿ: ‘ಡ್ರಗ್ಸ್ ಮುಕ್ತ ಬೆಳ್ತಂಗಡಿ’ ಜಾಗೃತಿ ಅಭಿಯಾನಕ್ಕೆ ಯುವ ಕಾಂಗ್ರೆಸ್ ಚಾಲನೆ

    ಚಾರ್ಮಾಡಿ ಘಾಟಿಯಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವ ಏಕದಂತ

    • By admin
    • August 10, 2026
    • 6 views
    ಚಾರ್ಮಾಡಿ ಘಾಟಿಯಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವ ಏಕದಂತ

    ಪಶ್ಚಿಮ ಘಟ್ಟದ ಪ್ರಕೃತಿ ಮಡಿಲಿನ ‘ನೇತ್ರಾವತಿ ಹೋಂ ಸ್ಟೇ’ – ಪ್ರವಾಸಿಗರಿಗಾಗಿ ಪರಿಪೂರ್ಣ ತಾಣ

    • By admin
    • August 9, 2026
    • 6 views

    ಬೆಳ್ತಂಗಡಿ: ಅನಾರೋಗ್ಯದಿಂದ ಬಳಲುತ್ತಿರುವ 2 ತಿಂಗಳ ಮಗುವಿನ ಚಿಕಿತ್ಸೆಗೆ ಸಹೃದಯಿಗಳ ತುರ್ತು ನೆರವಿನ ಹಸ್ತ ಅಗತ್ಯ

    • By admin
    • August 8, 2026
    • 12 views
    ಬೆಳ್ತಂಗಡಿ: ಅನಾರೋಗ್ಯದಿಂದ ಬಳಲುತ್ತಿರುವ 2 ತಿಂಗಳ ಮಗುವಿನ ಚಿಕಿತ್ಸೆಗೆ ಸಹೃದಯಿಗಳ ತುರ್ತು ನೆರವಿನ ಹಸ್ತ ಅಗತ್ಯ

    “ಬೆಳಾಲು ಶ್ರೀ ಧ.ಮಂ. ಪ್ರೌಢಶಾಲೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ: ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಬೆಳೆಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ”

    • By admin
    • August 8, 2026
    • 8 views
    “ಬೆಳಾಲು ಶ್ರೀ ಧ.ಮಂ. ಪ್ರೌಢಶಾಲೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ: ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಬೆಳೆಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ”

    ಭಾರಿ ಮಳೆ ಹಿನ್ನೆಲೆ: ಪುತ್ತೂರು ಉಪವಿಭಾಗದ ವ್ಯಾಪ್ತಿಯ ಶಾಲಾ-ಕಾಲೇಜುಗಳಿಗೆ ನಾಳೆ ರಜೆ ಘೋಷಣೆ

    • By admin
    • August 7, 2026
    • 11 views
    ಭಾರಿ ಮಳೆ ಹಿನ್ನೆಲೆ: ಪುತ್ತೂರು ಉಪವಿಭಾಗದ ವ್ಯಾಪ್ತಿಯ ಶಾಲಾ-ಕಾಲೇಜುಗಳಿಗೆ ನಾಳೆ ರಜೆ ಘೋಷಣೆ