ಉಜಿರೆ : ‘ದರ್ಪಣ ಇದು ಅರಿವಿನ ದೀವಿಗೆ’ ತಂಡ ‘ಮಡಿಲು ಸಾಂಸ್ಕೃತಿಕ ಟ್ರಸ್ಟ್’ ಮತ್ತು ವಿಸ್ತಾರ ನ್ಯೂಸ್ ಇದರ ಸಹಯೋಗದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯ ವಿಜೇತರನ್ನು ಫೇಸ್‌ಬುಕ್ ಲೈವ್ ಮುಖಾಂತರ ಯುವ ಲೇಖಕ ಪೃಥ್ವೀಶ್ ಧರ್ಮಸ್ಥಳ ಘೋಷಿಸಿದರು.
ಉಜಿರೆ ಎಸ್.ಡಿ.ಎಂ ಪದವಿ ಕಾಲೇಜಿನ ರಕ್ಷಾ ಕೋಟ್ಯಾನ್ ಪ್ರಥಮ, ಮಂಗಳೂರು ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿನಿ ಗುಣವತಿ ದಾನದಗುಡ್ಡೆ ದ್ವಿತೀಯ, ಪುತ್ತೂರಿನ ಫಿಲೋಮಿನ ಕಾಲೇಜು ವಿದ್ಯಾರ್ಥಿನಿ ಶ್ರೀದೇವಿ ಕೆ. ತೃತೀಯ ಸ್ಥಾನ ಪಡೆದುಕೊಂಡರು.
ಗಾಂಧಿ ತತ್ವಗಳ ಪ್ರಸ್ತುತತೆ ಎಂಬ ವಿಷಯದ ಕುರಿತು ಪ್ರಬಂಧ ಬರಹ ಸ್ಪರ್ಧೆ ಏರ್ಪಡಿಸಲಾಗಿದ್ದು ರಾಜ್ಯದ ಬೇರೆ ಬೇರೆ ಭಾಗಗಳಿಂದ ಒಟ್ಟು 71ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.