ಭಾರಿ ವರ್ಷಧಾರೆಗೆ ದಿಡುಪೆ – ಕೊಲ್ಲಿ ಸಂಪರ್ಕ ಕಡಿತ

READ ALSO

ಬೆಳ್ತಂಗಡಿ: ಮಲವಂತಿಗೆ ಗ್ರಾಮದ,ದಿಡುಪೆಯ ಕಲ್ಬೆಟ್ಟು ಎಂಬಲ್ಲಿ ನೇತ್ರಾವತಿ ಕಿನಾರೆಯ ಸೇತುವೆ ಅಪಾಯದಲ್ಲಿದೆ. ಇಂದು ಸುರಿದ ಭಾರಿ ಮಳೆಗೆ ಸೇತುವೆ ಹಾನಿಗೊಳಗಾಗಿದ್ದು ಸಾರ್ವಜನಿಕರಿಗೆ ಮತ್ತು ಹೈನುಗಾರಿಕೆ, ಹಾಗೂ ರೈತಾಪಿವರ್ಗದವರಿಗೆ ತೊಂದರೆಯುಂಟಾಗಿದೆ. ಈ ಸೇತುವೆ ಸಂಪರ್ಕ ಅನುಕೂಲ ಆಗುತಿದ್ದು ಈ ಸೇತುವೆಯನ್ನೇ ನಂಬಿ ಜನರು ಒಡಾಟ ನಡೆಸುತ್ತಿದ್ದರು.
ಸುಮಾರು 100 ರಿಂದ 150 ಕುಟುಂಬಕ್ಕೂ ಹೆಚ್ಚು ಜನ ಕೊಲ್ಲಿ ದೇವಸ್ಥಾನದಿಂದ ದಿಡುಪೆಗೆ ಸಂಪರ್ಕ ಮಾಡುತ್ತಿರುವ ನೇತ್ರಾವತಿ ಕಿನಾರೆಯ ಕಲ್ಬೆಟ್ಟು ಎಂಬಲ್ಲಿ ನ ಸೇತುವೆ ಸಂಪೂರ್ಣ ಅಪಾಯದಲ್ಲಿ ಇದೆ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುವ ಸಂಭವವಿದೆ.